ವಿಮಾನ ನಿಲ್ದಾಣ ಮಾದರಿಯಲ್ಲಿ ಕಲಬುರಗಿ ರೈಲ್ವೇ ನಿಲ್ದಾಣ: ಡಾ. ಉಮೇಶ ಜಾಧವ

0
17

ಕಲಬುರಗಿ: ವಿಮಾನ ನಿಲ್ದಾಣದಲ್ಲಿ ಸಿಗುವ ಸವಲತ್ತುಗಳು ಕಲಬುರಗಿ ರೈಲ್ವೇ ನಿಲ್ದಾಣದಲ್ಲಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶ ಇದಕ್ಕೆ ಬೇಕಾಗುವ ಎಲ್ಲಾ ಸವಲತ್ತುಗಳು ಕೇಂದ್ರದಿಂದ ಮತ್ತು ರಾಜ್ಯದಿಂದ ತರಿಸುವ ಕಾರ್ಯ ಮಾಡಲಾಗುವುದು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ ಜಾಧವ ಅವರು ಹೇಳಿದರು.

ಅವರು ಬುಧುವಾರ ಕಲಬುರಗಿ ರೈಲ್ವೆ ನಿಲ್ದಾಣದ ೨ ಮತ್ತು ೪ ನೇ ಪ್ಲಾಟ್ ಫಾರಂನಲ್ಲಿ ಹೊಸದಾಗಿ ನಿರ್ಮಿಸಿರುವ ಲಿಫ್ಟಗಳನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಕಲಬುರಗಿ ಜಿಲ್ಲೆಯ ವೃದ್ದರು, ಚಿಕಿತ್ಸೆಗಾಗಿ ತೆರಳಲು ರೋಗಿಗಳು ಹಾಗೂ ಜನರು, ಪ್ರತಿದಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿಸುತ್ತಾರೆ ಇವರ ಸೇವೆಗಾಗಿ ಈ ಲಿಫ್ಟಗಳನ್ನು ನಿರ್ಮಿಸಲಾಗಿದೆ ಎಂದರು.

ಸರ್ಕಾರದ ಕೋರನಾ ನಿಯಮಗಳನ್ನು ಪಾಲಿಸಿ ಲಿಫ್ಟಗಳಲ್ಲಿ ಜನರಿಗೆ ಬಿಡಲು ತಿಳಿಸಿದರು ವೃದ್ದರಿಗೆ ಹಾಗೂ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕಾಗಿ ಸಿಬ್ಬಂದಿಗಳಿಗೆ ಸೂಚಿಸಬೇಕಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಿರ್ಮಿಸಿರುವ ಲಿಫ್ಟಗಳನ್ನು ಪ್ರತಿ ಆರುತಿಂಗಳಿಗೊಮ್ಮೆ ಇದರ ನಿರ್ವಹಣೆ ಮಾಡಬೇಕು ಲಿಫ್ಟಗಳನ್ನು ಯಾವ ಸಂಧರ್ಭದಲ್ಲೂ ನಿಲ್ಲಾದಿರ ಹಾಗೆ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೆವೋರ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶೀಲೇಶ್ ಗುಪ್ತಾ, ಹಾಗೂ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here