ಆಳಂದ: ರಾಷ್ಟ್ರದ ಸಂಪತಾಗಿರುವ ಯುವ ಶಕ್ತಿಗೆ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಪ್ರೇರಣಾ ಶಕ್ತಿಯಾಗಿದ್ದಾರೆ. ಅವರ ತತ್ವಗಳನ್ನು ಪಾಲಿಸಿದರೆ ಸಮಾಜ ಸ್ವಾಸ್ಥ್ಯದಿಕ್ಕಿನೆಡೆಗೆ ಸಾಗುತ್ತದೆ ಎಂದು ಶಿಕ್ಷಕ ಮಹಾಂತೇಶ ಬನ್ನಿಗಿಡ ಅವರು ಹೇಳಿದರು.
ತಾಲೂಕಿನ ಮಾಡಿಯಾಳ ಜಯಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದೇಶದಲ್ಲಿ ತಮ್ಮ ತಮ್ಮ ಉದ್ಯೋಗಗಳಲ್ಲಿ ತೊಡಗಿರುವ ಯುವಕರು ರಾಷ್ಟ್ರದ ನಿಜವಾದ ಸಂಪತ್ತಾಗಿದ್ದಾರೆ. ದೇಶದ ಭವಿಷ್ಯ ನಿರ್ಮಾಣದ ಜವಾಬ್ದಾರಿ ಯುವಕರ ಮೇಲಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಹ ಶಿಕ್ಷಕ ಸಂತೋಷಕುಮಾರ ಖಾಅನಾಪೂರೆ ಮಾತನಾಡಿ, ಭಾರತ ದೇಶದ ಬಗ್ಗೆ, ಧರ್ಮದ ಬಗ್ಗೆ ಜಗತ್ತಿಗೆ ವಿವರಿಸಿ ಹೇಳಿದ ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶಭಕ್ತರಾಗಿದ್ದವರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾಧನೆಯನ್ನು ಅನುಕರಿಸಬೇಕು. ನಿರ್ಗತಿಕರ ಬಾಳಿಕೆ ಬೆಳಕಾದಾಗ ಸಮಾಜದಲ್ಲಿ ಸಮಾನತೆ ಸಮಾಜ ನಿರ್ಮಾಣವಾಗಿ ದೇಶದವನ್ನು ಇಡೀ ವಿಶ್ವದಲ್ಲೇ ಶ್ರೇಷ್ಟರಾಷ್ಟ್ರ ಎಂಬ ಖ್ಯಾತಿಯ ಪಡೆಯಲಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರತಿ ಬೆಳಮಗಿ, ಶಿಕ್ಷಕ ಕಿರಣಕುಮಾರ ಮಂಟಗಿ, ಶರಣು ಉಪ್ಪಿನ್, ರಾಜು ಬಿರಾದಾರ, ಕಿರಣ ಜಾಧವ, ಶರಣಮ್ಮ ನಾಶಿ, ಕವಿತಾ ಮಹಾಗಾಂವ್, ಸುರೇಖಾ ಮಾಶ್ಯಾಳ, ಅರವಿಂದ ಮೇತ್ರಿ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.