ಬೃಂದಾವನದಲ್ಲಿನ ಹಾಳುಗೆಡವಿರುವ ಕೃತ್ಯ ಪೇಜವಾರ ಶ್ರೀಸೇನೆಯಿಂದ ಖಂಡನೆ: ಆರೋಪಿಗಳ ಪತ್ತೆಗೆ ಆಗ್ರಹ

0
72

ಕಲಬುರಗಿ: ಹಂಪಿಯ ಆನೆಗುಂದಿಯ ನವ ಬೃಂದಾವನದಲ್ಲಿನ ಶ್ರೀ ವ್ಯಾಸರಾಜರ ಬೃಂದಾವನವನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಹಾಳುಗೆಡವಿರುವ ಕೃತ್ಯ ಪೇಜವಾರ ಶ್ರೀಸೇನೆ ಖಂಡಿಸಿ, ರಾಜ್ಯದಲ್ಲಿರುವ ಇಂತಹ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಿ, ನವ ಬೃಂದಾವನವನ್ನು ಧ್ವಂಸಗೊಳಿಸಿರುವ ಆರೋಪಿಗಳಿಗೆ ತಕ್ಷಣ ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸೇನೆ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಆಗ್ರಹಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆ ನೀಡಿ ಕೃತ್ಯದ ಕುರಿತು ಇಡೀ ರಾಜ್ಯವನ್ನು ದಿಗ್ಬ್ರಮೆಗೊಳಪಡಿಸಿದೆ. ಈ ದುರುದೃಷ್ಡಕರ ಘಟನೆಯಿಂದ ರಾಜ್ಯದ ಜನರೂ ಕೂಡ ತೀವ್ರ ಕಳವಳ ವ್ಯಕ್ತಪಡಿಸಿಸಿ, ವಿಜಯನಗರ ಸಾಮಾಜ್ಯದ ಚಕ್ರಾಧಿಪತಿ ಶ್ರೀ ಕೃಷ್ಣದೇವರಾಯನಿಗೆ ಕುಹು ಯೋಗ (ಕೆಟ್ಟ ಯೋಗ) ಉಂಟಾದಾಗ ಆ ಸಂಕಟದಿಂದ ಮುಕ್ತವಾಗುವ ಸಲುವಾಗಿ ಕೃಷ್ಣದೇವರಾಯನೇ ಶ್ರೀ ವ್ಯಾಸರಾಜರನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ ಶ್ರೇಷ್ಠ ಪರಂಪರೆಯ ಹಿನ್ನೆಲ್ಲೇ ಹೊಂದಿದ ನವ ಬೃಂದಾವನಕ್ಕಿದೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಇಂತಹ ಪರಂಪರಿಯ ವಿರುದ್ಧ ದುಷ್ಕರ್ಮಿಗಳು ದುರಾಸೆ ಮತ್ತು ಧನದಾಹದಿಂದ ನಿಧಿಗಾಗಿ ಈ ನವ ಬೃಂದಾವನವನ್ನು ಧ್ವಂಸಗೊಳಿಸಿದ್ದಾರೆ ಎಂದು ಅವರು ಆರೋಪಿಸಿ, ಇಂತಹ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಬೇಕು ಮತ್ತು ನವ ಬೃಂದಾವನವನ್ನು ಧ್ವಂಸಗೊಳಿಸಿರುವ ಆರೋಪಿಗಳನ್ನು ತಕ್ಷಣವೇ ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸೇನೆಯ ಮಹೀಳಾ ಘಟಕ ಅಧ್ಯಕ್ಷೆ ದಿವ್ಯ ಹಾಗರಗಿ ಹಾಗೂ ಪಾಟೀಲ್ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here