ಯಾದಗಿರಿ: ಅಕ್ರಮ ಸಂಭಂದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯೊಬ್ಬಳನ್ನು ವ್ಯಕ್ತಿಯೊಬ್ಬ ಮದ್ಯದ (ಬಿಯರ್ ) ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಶನಿವಾರ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾರಣಾಂತಿಕ ಹಲ್ಲೆಗೆ ಒಳಗಾದವರು ಮಲ್ಲಮ್ಮ ಪರಮಪ್ಪ (30) ಎಂಬುವರು. ಮಲ್ಲಮ್ಮ ಪರಮಪ್ಪ ಹಾಗೂ ಯಂಕಪ್ಪ ಹುಲ್ಕಲ್ ಇವರಿಬ್ಬರ ಮಧ್ಯೆ ಅನೈತಿಕ ಸಂಬಂಧ ಹಳೆಯ ದ್ವೇಷ ಮತ್ತು ಪ್ರೇಮ ನಿರಾಕರಣೆ ಹಿನ್ನೆಲೆಯಲ್ಲಿ ಆರೋಪಿ ಕೃತ್ಯ ನಡೆಸಿದ್ದಾನೆ ಎಂದು ಆರೋಪ ವ್ಯಕ್ತವಾಗಿದೆ.
ಶನಿವಾರ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ನಮಸ್ಕರಿಸಿ ದೇವಸ್ಥಾನದ ಸುತ್ತ ಮಲ್ಲಮ್ಮ ಪ್ರದಕ್ಷಿಣೆ ಹಾಕುತ್ತಿರುವ ಸಮಯದಲ್ಲಿ ಯಂಕಪ್ಪ ಹುಲ್ಕಲ್ ಮಲ್ಲಮ್ಮಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮದ್ಯದ ಬಾಟಲಿಯಿಂದ ಹೊಟ್ಟೆಗೆ ಚುಚ್ಚಿ ಮತ್ತು ಕಲ್ಲನ್ನು ಎತ್ತಿ ಹಾಕಿದ್ದಾನೆ.
ಕೈ ,ಹೊಟ್ಟೆ ಹಾಗೂ ದೇಹದ ಇತರೆ ಕಡೆ ಗಾಯಗಳಾಗಿದ್ದು, ಗ್ರಾಮಸ್ಥರು ತುರ್ತು ವಾಹನಕ್ಕೆ ಕರೆಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಹಲ್ಲೆಗೆ ಒಳಗಾದ ಮಲ್ಲಮ್ಮ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿ ಯಂಕಪ್ಪ ಬಸಪ್ಪ ಹುಲಕಲ್ ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.