ಬೆಳಗಾವಿ: ಶಾಂತವಾಗಿದ್ದ ಬೆಳಗಾವಿಯಲ್ಲಿ ಈಗ ಮತ್ತೆ ಕಿಡಿಗೇಡಿಗಳು ಶಾಂತಿ ಕದಡುವ ಕೆಲಸ ಮಾಡಿದ್ದು, ಕನ್ನಡ ನಾಮಫಲಕಕ್ಕೆ ಮಸಿ ಬಳಿಯುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ.
ತಾಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ರಸ್ತೆ ಮಾರ್ಗದಲ್ಲಿ ಇರುವ ರಸ್ತೆ ಸಂಚಾರ ಜಾಗೃತಿ ಮೂಡಿಸುವ ಫಲಕಕ್ಕೆ ಕಿಡಿಗೇಡಿಗಳು ಕಪ್ಪುಮಸಿ ಬರೆದಿದ್ದಾರೆ.
ಇದರಿಂದ ಕರ್ನಾಟಕ ರಾಜ್ಯದ ಶಾಂತಿ ಕದಡುವ ಕೆಲಸ ಮಾಡಿದ್ದಾರೆ ಕಿಡಿಗೇಡಿಗಳು. ಈ ರೀತಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುವ ಕಿಡಿಗೇಡಿಗಳಿಗೆ ಕರ್ನಾಟಕದ ಬೆಳಗಾವಿ ಪೊಲೀಸ್ ರು ತಕ್ಕ ಪಾಠ ಕಲಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂಬುದು ಜನರ ಕೂಗಾದೆ.