ಕಲಬುರಗಿ: ನಗರದ ಹೆಚ್,ಕೆ,ಇ,ಎಸ್ ಬಾಲಕರ ಫ್ರೌಡ್ ಶಾಲೆಯಲ್ಲಿ ,ಹೆಚ್,ಶಿವರಾಮೇಗೌಡರ ಕರವೇ ವತಿಯಿಂದ ಇಂದು ನಡೆದ ” ಸ್ವಾಮಿ ವಿವೇಕಾನಂದ ರವರ 159ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ-2022ರ ಮತ್ತು ಕೋವಿಡ್-19 ರೋಗದ 3ನೇ ಅಲೆಯ ಜಾಗೃತಿ ಅಭಿಯಾನ ಕಾರ್ಯಕ್ರಮ ಜರುಗಿತು.
ವೀರಶೈವ ಮಹಾ ಸಭಾದ ಸದಸ್ಯರಾದ ನಾಗಲಿಂಗಯ್ಯಾ ಮಠಪತಿ ರವರು ಸ್ವಾಮಿ ವಿವೇಕಾನಂದ ರವರ ಜನ್ಮದಿನದ ಪ್ರಯುಕ್ತ ಕೋವಿಡ್-19 ರೋಗದ 3 ಅಲೆಯ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ತುಂಬಾ ಮುಖ್ಯವಾಗಿದೆ,ಅಲ್ಲದೇ ಶಾಲಾ- ಕಾಲೇಜುಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಕೋವಿಡ್-19 ರೋಗದ ಬಗ್ಗೆ ಭಯ ಬೇಡ ಜಾಗೃತಿ ವಿರಲಿ,ವಿದ್ಯಾರ್ಥಿಗಳು ವಿದ್ಯಾಭ್ಯಾಸ ಬಗ್ಗೆ ಗಮನ ನೀಡಬೇಕು ಸರಕಾರ ವಿದ್ಯಾರ್ಥಿಗಳ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಬೇಕು, ಎಂದರು.
ಈ ಸಂದರ್ಭದಲ್ಲಿ ಅಲ್ಲಂ ಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಸುರೇಶ ತಂಗಾ ರವರಿಗೆ ವಿವೇಕಾನಂದ ಪ್ರಶಸ್ತಿ ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಜಯಶ್ರೀ ಹೀರೆಮಠ ರವರು ವಹಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್ ರವರು ಸ್ವಾಮಿಜೀ ರವರ ಜನ್ಮದಿನದ ಪ್ರಯುಕ್ತ ಕೋವಿಡ್ ಜಾಗೃತಿ ಮುಖ್ಯವಾಗಿದೆ ಎಂದು ನಮ್ಮ ಸಂಘಟನೆಯ ವತಿಯಿಂದ ಶಾಲಾ -ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಕೋವಿಡ್-19 ಬಗ್ಗೆ ಭಯ ಬೇಡ ಜಾಗೃತಿ ವಿರಲಿ ಎಂದು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಆನಂದ ತೆಗನೂರು ಮಾಡಿದರು.