ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳನ್ನು ಆಯುರ್ವೇದದಲ್ಲಿ ಅತ್ಯಂತ ಪವಿತ್ರ ಮತ್ತು ಮುಖ್ಯವಾದುದು ಎಂದು ಬಣ್ಣಿಸಲಾಗಿದೆ. ಇದು ಅತ್ಯದ್ಭುತ ರೋಗ ಪರಿಹಾರಗಳನ್ನು ಒಳಗೊಂಡಿದ್ದಾಗಿದೆ.
ಇದು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ದೈಹಿಕ ಮತ್ತು ಮಾನಸಿಕ ಕಾಳಜಿಯನ್ನೂ ಮಾಡುತ್ತದೆ. ಮಾನವರಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಉಲ್ಲೇಖಿಸಿರುವ ಹದಿನಾರು ಸಂಪ್ರದಾಯಗಳಲ್ಲಿ ಇದು ಬಹುಮುಖ್ಯವಾದ್ದಾಗಿದೆ. ಚಿನ್ನದ ಬೂದಿಯನ್ನು ಬೇರೆ ಬೇರೆ ಗಿಡಮೂಲಿಕೆಗಳೊಂದಿಗೆ ಸೇರಿಸಿಕೊಂಡು ಸ್ವಲ್ಪ ಗಟ್ಟಿ ಅಥವಾ ದ್ರವ ರೂಪದಲ್ಲಿ ಸೇವಿಸುವುದಾಗಿದೆ.
ಮಗುವಿನ ಜನನದ ನಂತರ ಹದಿನಾರು ವರ್ಷದವರೆಗೆ ಈ ಪ್ರಾಶನವನ್ನು ಮಾಡಿಸಬೇಕು. ನಿತ್ಯವೂ ಸುವರ್ಣ ಪ್ರಾಶನವನ್ನು ಸೇವಿಸುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಅಂತೆಯೇ ಮಾನಸಿಕ ಆರೋಗ್ಯವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ವಯಸ್ಸಾದರೂ ಆರೋಗ್ಯವಂತರಾಗಿರುತ್ತಾರೆ.
# ಸುವರ್ಣಪ್ರಾಶನದ ಲಾಭಗಳು —
1. ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.
2.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
3. ತ್ವಚೆಯ ಪೋಷಣೆಯನ್ನು ಮಾಡುತ್ತದೆ.
4. ಶ್ರವ್ಯ ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ.
5. ಮಗುವನ್ನು ಶಾಂತಗೊಳಿಸುತ್ತದೆ.
6. ವಿಶೇಷ ಆವಶ್ಯಕತೆಗಳೊಂದಿಗೆ ಮಕ್ಕಳಿಗೆ. ಪ್ರಯೋಜನಕಾರಿಯಾಗಿದೆ.
7. ಉತ್ತಮ ತೂಕ ಮತ್ತು ಎತ್ತರ.
- # ಡಾ.ಮಧುಶ್ರೀ ರಾಗಿ
ಫೋನ್ ನಂಬರ್ — 6361321848 - # ನಿರೂಪಕ — ಕೆ.ಶಿವು.ಲಕ್ಕಣ್ಣವರ