ಬಾಗಲಕೋಟೆ: ಸದ್ಯ ಎಲ್ಲ ಕಡೆ ಕೊರೊನಾ ಕಾಟ ಶುರುವಾಗಿದೆ‌:

0
10

ಬಾಗಲಕೋಟೆ: ಧಾರ್ಮಿಕ ಆಚರಣೆ ಮಾಡಿ ದೇವಿ ಹತ್ರ ಕೇಳಿದ್ರೆ, ಸಂಪೂರ್ಣ ಕೋವಿಡ್ ನಿಯಂತ್ರಣ ಮಾಡುವ ಶಕ್ತಿ ದೇವಿಯಲ್ಲಿದೆ. ಬನಶಂಕರಿ ಜಾತ್ರೆಯಲ್ಲಿ ಭಕ್ತರನ್ನ ಹೊಡೆಯುವುದನ್ನು ನೋಡಿದ್ರೆ,ದೇವಿ ಶಾಪದಿಂದ 2023ರ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗಲಿದೆ ಎಂದ ಸ್ವಾಮೀಜಿ.

ಇದರಿಂದ‌ ಜಾತ್ರೆ ಹಬ್ಬ ಹರಿದಿನಗಳಿಗೆ ರಾಜ್ಯ ಸರಕಾರ ನಿಷೇಧ‌ ಮಾಡಿ ಆದೇಶ ಹೊರಡಿಸಿದೆ. ಆದರೂ ಜನರು ಮಾತ್ರ ಈ‌ ನಿಯಮಾವಳಿಗೆ ಕೇರ್ ಮಾಡದೆ ಜಾತ್ರೆ ಮಾಡಿಯೇ ತೀರುತ್ತೇವೆ ಎಂದು ಹೊರಟಿದ್ದಾರೆ. ನಿನ್ನೆ(ಜ.17) ಉತ್ತರಕರ್ನಾಟಕದ ಪ್ರಸಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿ ಜಾತ್ರೆಯಲ್ಲೂ ಜನರು ಪೊಲೀಸ್ ಭದ್ರತೆ ಕೇರ್ ಮಾಡದೆ ನುಗ್ಗಿದ ಸಾವಿರಾರು ಜನರು ತೇರನ್ನು ಎಳೆದರು. ಇದೆ ವೇಳೆ ರಥೋತ್ಸವದಲ್ಲಿ ಭಾಗಿಯಾಗಿದ್ದ ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಬಿಜೆಪಿ ಬಗ್ಗೆ ಭವಿಷ್ಯ ನುಡಿದಿದ್ದಾರೆ‌.

Contact Your\'s Advertisement; 9902492681

ಬಾದಾಮಿ ಬನಶಂಕರಿ ದೇವಿ ಜಾತ್ರೆ ಶತಮಾನದ ಇತಿಹಾಸ ಹೊಂದಿದೆ. ಭಾರತ ದೇಶ ನಂಬಿಕೆ ಮೇಲೆ ನಿಂತಿದೆ. ಧಾರ್ಮಿಕ ಭಾವನೆ ಮೇಲೆ ಪರಂಪರೆಯನ್ನ ಹೊಂದಿರುವ ರಾಷ್ಟ್ರ. ಎರಡು ವರ್ಷಗಳಿಂದ ಕೋವಿಡ್ ನೆಪ ಹೇಳಿ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ರೈತರ ಮೇಲೆ ಶೋಚನೀಯ ಪರಿಸ್ಥಿತಿ ತಂದೊಡ್ಡಿವೆ. ಕಾನೂನು ಕಟ್ಟಳೆ ಮಾಡಿ ರೈತರನ್ನ ಮತ್ತು ಧಾರ್ಮಿಕ ಕಾರ್ಯಕ್ರಮವನ್ನ ತುಳಿಯುತ್ತಿದ್ದಾರೆ. ಇಂತಹ ಬಿಜೆಪಿ ಸರಕಾರ 2023ರಲ್ಲಿಬನಶಂಕರಿ ದೇವಿ ಶಾಪದಿಂದ ದೂಳಿಪಟವಾಗಲಿದೆ. ದೇವರು ಹಾಗೂ ರೈತರ ಶಾಪದಿಂದ ಬಿಜೆಪಿ ಹೋಗುವ ಕಾಲ ಬರಬಹುದು ಎಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ.

ಧಾರ್ಮಿಕ ಆಚರಣೆ ಮಾಡಿ ದೇವಿ ಹತ್ರ ಕೇಳಿದ್ರೆ, ಸಂಪೂರ್ಣ ಕೋವಿಡ್ ನಿಯಂತ್ರಣ ಮಾಡುವ ಶಕ್ತಿ ದೇವಿಯಲ್ಲಿದೆ. ಬನಶಂಕರಿ ಜಾತ್ರೆಯಲ್ಲಿ ಭಕ್ತರನ್ನ ಹೊಡೆಯುವುದನ್ನು ನೋಡಿದ್ರೆ,ದೇವಿ ಶಾಪದಿಂದ 2023ರ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗಲಿದೆ ಎಂದ ಸ್ವಾಮೀಜಿ, ಧರ್ಮದ ಆಧಾರದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಲ್ಲರೂ ಅವರನ್ನ ನಂಬಿ ಓಟ್ ಹಾಕಿದ್ದಾರೆ .ಆದರೆ ಹಿಂದೂಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಹಿಂದೂಗಳ ದೇವಸ್ಥಾನಗಳನ್ನ ಕೆಡವಿದ್ದು ನಮಗೆ ನೋವಾಗಿದೆ. ಇದರಿಂದ ನೂರಕ್ಕೆ ನುರಾಒಂದು ಪರ್ಸೆಂಟ್ ಹಿಂದೂಗಳ ಶಾಪ ಅವರಿಗೆ ತಟ್ಟುತ್ತೆ. ದೇವರನ್ನ ವಿರೋಧ ಮಾಡಿದವರು ಇವತ್ತಿನವರೆಗೂ ಬೆಳೆದಿಲ್ಲ ಎಂದರು.

ಅಮಿತ್ ಶಾ ಬಂದು ಹೋಗಿದ್ದನ್ನು ಸ್ಮರಿಸಿ ಬಿಜೆಪಿ ತರಾಟೆಗೆ ತೆಗೆದುಕೊಂಡ ಸ್ವಾಮೀಜಿ
ಕಳೆದ ಬಾರಿ ಕೋವಿಡ್ ನಲ್ಲಿ ಕೆರಕಲಮಟ್ಟಿ ಮತ್ತು ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಹೋಗಿದ್ರು. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಕೇಂದ್ರ ಗೃಹ ಮಂತ್ರಿಗಳು ಬಂದಾಗ ಲಕ್ಷ ಗಟ್ಟಲೆ ಜನ ಬಂದ್ರೆ ಕೊರೊನಾ ಬರೋದಿಲ್ಲ, ಆದ್ರೆ ಬನಶಂಕರಿ ಜಾತ್ರೆಯಲ್ಲಿ ಜನ ಬಂದ್ರೆ ಕೊರೊನಾ ಬರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಬಂದ ಭಕ್ತರ ಮೇಲೆ ಶೋಷಣೆ ಮಾಡೋದು ನೋವಾಗಿದೆ ಎಂದರು.

ಈ ಬಾರಿಯೂ ಲಾಕ್ ಡೌನ್ ಮಾಡಿದ್ರೆ ಅದರ ಪರಿಸ್ಥಿತಿ ಬೊಮ್ಮಾಯಿಯವರಿಗೆ ಶಾಪ ತಟ್ಟುತ್ತದೆ. ಇನ್ನು ಈಗಾಗಲೇ ಕಳೆದ ಎರಡು ವರ್ಷದಲ್ಲಿ ಕೋವಿಡ್ ಲಾಕ್ ಡೌನ್ ಆದಾಗಿನಿಂದ ಜನರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಎಷ್ಟೋ ಜನ ಸಾಲಗಾರರಾಗಿ ತುತ್ತು ಕೂಳಿಗೂ ಪರದಾಡಿದ್ದಾರೆ. ಈಗ ಪುನಃ ಕೋವಿಡ್ ಅಂತ ಕಠಿಣ ರೂಲ್ಸ್ ಹಾಕುತ್ತಿದ್ದಾರೆ. ಒಂದು ವೇಳೆ ಈ ಬಾರಿ ಲಾಕ್ ಡೌನ್ ಮಾಡಿದರೆ ಸಿಎಂ ಬೊಮ್ಮಾಯಿ ಅವರಿಗೂ ಅದರ ಶಾಪ ಬಿಸಿ ತಟ್ಟುತ್ತದೆ ಎಂದು ಕಲ್ಲಿನಾಥ ಸ್ವಾಮೀಜಿ ಹೇಳಿದ್ರು.

ಒಟ್ಟಾರೆ ಕೋವಿಡ್ ದಿನದಿಂದ ದಿನ ಹೆಚ್ಚುತ್ತಿದ್ದು, ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಗೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಸ್ವಾಮೀಜಿ ನುಡಿದ ಭವಿಷ್ಯ ಮತ್ತಷ್ಟು ಸಂಚಲನ ಸೃಷ್ಟಿ ಮಾಡಿದ್ದಂತೂ ನಿಜ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here