ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ ಹವ್ಯಾಸ ಬದಲಾದರೆ ಹಣೆ ಬರಹ ಬದಲಾಗುತ್ತದೆ:

0
18

ಕಲಬುರಗಿ: ಸರ್ಕಾರಿ ಪದವಿಪೂರ್ವ ಕಾಲೇಜು ಶ್ರೀನಿವಾಸ ಸರಡಗಿಯಲ್ಲಿ ಹಮ್ಮಿಕೊಂಡಿದ್ದ”ಸಂಕ್ರಾಂತಿ ವಿಚಾರ ಕ್ರಾಂತಿ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಡಿಗ್ರೀ ಕಾಲೇಜಿನ ಸಂಸ್ಥಾಪಕ ಕಲ್ಯಾಣರಾವ ಶೀಲವಂತ ಗುರೂಜಿ ಮಾತನಾನಾಡಿದರು.

ಕೆಸರಲ್ಲಿ ಕಮಲ ಇರುವಂತೆಯೇ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿಯೇ ಹೆಚ್ಚು ಪ್ರತಿಭೆಗಳಿರುತ್ತವೆ ಭಾರತವು ಅನೇಕ ಪರಕೀಯರ ಆಳ್ವಿಕೆಗೆ ಒಳಗಾಯಿತು ಅದೇ ಭಾರತ ಇಂದು ವಿಶ್ವವನ್ನು ಆಳುವ ಮಟ್ಟಿಗೆ ಮುಟ್ಟಿದೆ.ಬಹುತೇಕ ಬಹುರಾಷ್ಟ್ರೀಯ ಕಂಪೆನಿಗಳ ಸಿ.ಇ.ಓ. ಭಾರತೀಯರೇ ಆಗಿದ್ದಾರೆ. ಓದು ಮೈಗೂಡಿಸಿಕೊಂಡರೆ ಅವಕಾಶಗಳು ಬೆನ್ನು ಹತ್ತಿ ಬರುತ್ತವೆ ಎಂದರು. ಮುಖ್ಯ ಅತಿಥಿಗಳಾಗಿ ಸಂಗನಗೌಡ ಸಿದ್ಧಗೊಂಡ ಆಗಮಿಸಿದ್ದರು.

Contact Your\'s Advertisement; 9902492681

ಪ್ರಭಾರಿಪ್ರಾಚಾರ್ಯ  ಎಸ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಸಪ್ರಶ್ನೆ ಕಾರ್ಯಕ್ರಮ ಸೂರ್ಯಕಾಂತ ಉಪನ್ಯಾಸಕರು ಹಾಗೂ ಮೆಹಬೂಬ್ ಗುರುಮಿಠಕಲ್ ನಡೆಸಿಕೊಟ್ಟರು. ತಮ್ಮಾಗೋಳ ನಿರೂಪಿಸಿದರು. ಗೋಪಾಲ ವಂದಿಸಿದರು. ಕಾರ್ಯಕ್ರಮದಲ್ಲಿ ಗುಣಾ ಎಚ್.ಆರ್ ರಾಜೇಂದ್ರ ರಂಗದಳ  ಉಪನ್ಯಾಸಕರು ಸೈಫನ್ ಎ.ದ.ಸ. ವಿದ್ಯಾರ್ಥಿ ವಿದ್ಯಾರ್ಥಿನಿಯರುಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here