ರೂ.೭ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ : ಶಾಸಕ ಬಸವರಾಜ ಮತ್ತಿಮೂಡ ಚಾಲನೆ

0
12

ಕಲಬುರಗಿ: ಗ್ರಾಮಿಣ ಮತಕ್ಷೇತ್ರದ ವೇಂಕಟಬೇನೂರ ದಿಂದ ಖಾಜಾ ಕೋಟನೂರ, ಕೇರೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರೂ. ೭ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮೂಡ ಚಾಲನೆ ನೀಡಿ ಮಾತನಾಡುತ್ತಾ ಗ್ರಾಮದ ವೀರಭದ್ರೇಶ್ವರ ದೇವಾಲಯಕ್ಕೆ ರೂ. ೩ಲಕ್ಷ, ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠದ ಅಭಿವೃದ್ಧಿಗೆ ರೂ. ೫ಲಕ್ಷ ನೆರವು ಒದಗಿಸುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಅನೇಕ ಕಡೆಗಳಲ್ಲಿನ ಹಣಾದಿ, ಕೂಡು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ರೈತರ ಜಮೀನುಗಳಿಗೆ ತೆರಳಲು ಹಾಗೂ ಹಳ್ಳಿಗಳ ಮಧ್ಯೆ ಸಂಪರ್ಕವೆವಸ್ಥೆ ಸುಗಮಗೊಳ್ಳಲಿದೆ ಎಂದರು.

ಮಾಲಗತ್ತಿ-ಭೂಪಾಲ ತೆಗನೂರ ರಸ್ತೆ ಹಾಗೂ ರೂ. ೨ ಬ್ರಿಜ್ ನಿರ್ಮಿಸಲು ರೂ. ೧೧ ಕೋಟಿ ಒದಗಿಸಲಾಗಿದೆ. ಭೂಪಾಲ ತೆಗನೂರ-ವೆಂಕಟಬೇನೂರ ವರೆಗಿನ ರಸ್ತೆ ಅಭಿವೃದ್ಧಿಗೆ ರೂ. ೫ ಕೋಟಿ ಒದಗಿಸಲಾಗಿದೆ. ವೆಂಕಟಬೇನೂರ-ನಿಪ್ಪಾಣಿ ರಸ್ತೆಗೆ ರೂ. ೩ ಕೋಟಿ, ವೆಂಕಟಬೇನೂರ-ಹರಸೂರ ರಸ್ತೆಗೆ ರೂ. ೨ ಕೋಟಿ ಒದಗಿಸಲಾಗಿದ್ದು ಕಡಿಮೆಬಿದ್ದರೆ ಹೆಚ್ಚುವರಿಯಾಗಿ ಇನ್ನೆರಡು ಕೋಟಿ ಒದಗಿಸಲಾಗುವುದು ಎಂದು ಹೇಳಿದರು. ಖಾಜಾ ಕೋಟನೂರ, ವೆಂಕಟಬೇನೂರನಲ್ಲಿ ಸಿಸಿ ರಸ್ತೆಗೆ ತಲಾ ರೂ. ೧೦ ಲಕ್ಷ ಒದಗಿಸಲಾಗಿದೆ. ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಕೇವಲ ಮೂರುವರೆ ವರ್ಷಗಳಲ್ಲಿ ಕೋವಿಡ ಮಧ್ಯಯೂ ಸಾವಿರಾರು ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು ರೂ. ೧೪ ಕೋಟಿ ವೆಚ್ಚದಲ್ಲಿ ಮೂರು ಬ್ರಿಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗುತ್ತದೆ ಎಂದರು.
ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠದ ಸಿದ್ಧರೇಣುಕಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಚಾಲನೆ ನೀಡಿದ ಈ ಎರಡು ರಸ್ತೆಗಳು ಗ್ರಾಮದ ಅನೇಕ ರೈತರ ಸಾವಿರಾರು ಎಕರೆ ಜಮೀನಿಗೆ ಪರ್ಕ ಕಲ್ಪಿಸುತ್ತವೆ. ಮಳೆಯಾದರೆ ಕೆಸರು ಗದ್ದೆ, ಮುಳು ಕಂಟಿಯಿಂದ ತುಂಬಿರುತ್ತಿದ್ದ ಈ ರಸ್ತೆಗಳು ದರ್ಗಮ ಹಣಾದಿಗಳಾಗಿದ್ದವು. ಸದ್ಯ ಇವುಗಳನ್ನು ಅಭಿವೃದ್ಧಿ ಪಡಿಸಿ ಡಾಂಬರೀಕರಣ ಮಾಡುತ್ತಿರುವುದು ಶಾಸಕರಿಗಿರುವ ರೈತರ ಮೇಲಿನ ಕಾಳಜಿ ಎತ್ತಿ ತೋರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಮಾಲಿ ಪಾಟೀಲ, ಪ್ರವೀಣ ಮಚ್ಛಟ್ಟಿ, ಮಲ್ಲಿಕಾರ್ಜುನ ಮರತೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾಬಾಯಿ ಶೆಳ್ಳಗಿ, ವಿಶ್ವನಾಥ ಪಾಟೀಲ, ಬಸವರಾಜ ಪಾಟೀಲ, ನಾಗಲಿಂಗಯ್ಯ ಮಠಪತಿ, ಗುಂಡೇರಾವ ಪಾಟೀಲ, ವಿಶ್ವನಾಥ ಗೋಧಿ, ಸಂಗಮೇಶ ವಾಲಿ, ರಫೀಕ್ ಪಟೇಲ್, ಸತೀಶ ಸುರಡೆ, ರಾಜಕುಮಾರ ಮಂಠಾಳೆ, ವೀರೇಶ ಬಿರಾದಾರ, ಭಗವಂತರಾ ಪಾಟೀಲ, ಅಶೋಕ ಮಡಿವಾಳ, ಶಿವಾನಂದ ಪಾಟೀಲ, ಸಂತೋಷ ಪಾಟೀಲ, ಶರಣಗೌಡ ಪಾಟೀಲ, ಬಾಬು ಜಾಲಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here