ಬಾಗಲಕೋಟೆ: ಬ್ಲಾಕ್ ಫಂಗಸ್‌ನಿಂದ ವಿರೂಪಗೊಂಡ 100 ರೋಗಿಗಳ ಮುಖಗಳಿಗೆ ಬವಿವ ಸಂಘದ ಪಿ.ಎಂ.ಎನ್. ದಂತ ಕಾಲೇಜಿನಲ್ಲಿ ಚಿಕಿತ್ಸೆ ನೀಡುವ ಮೂಲಕ ಮೊದಲಿನ ರೂಪ ನೀಡಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕÒ ಡಾ|ವೀರಣ್ಣ ಚರಂತಿಮಠ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ದಂತ ಚಿಕಿತ್ಸೆಗೆ ಸೀಮಿತವಾಗದೇ ಅಪಘಾತ, ಕ್ಯಾನ್ಸರ್, ಬ್ಲಾ Âಕ್ ಫಂಗಸ್ ಸೇರಿ ವಿವಿಧ ಘಟನೆಗಳಲ್ಲಿ ವಿರೂಪಗೊಂಡ ರೋಗಿಗಳ ಮುಖಗಳಿಗೆ ಚಿಕಿತ್ಸೆ ನೀಡಿ ಅವರಿಗೆ ಮೊದಲಿನ ರೂಪ ನೀಡಿರುವ ವೈದ್ಯರ ಕಾರ್ಯ ಶ್ಲಾಘನೀಯ ಎಂದರು.
ದಂತ ಕಾಲೇಜಿನ ಕೃತಕ ದಂತ ಜೋಡಣಾ ವಿಭಾಗ ಮತ್ತು ಬಾಯಿ ಶಸ್ತ್ರ ಚಿಕಿತ್ಸಾ ವಿಭಾಗಗಳು ಜಂಟಿಯಾಗಿ ರೋಗಿಗಳ ವಿರೂಪಗೊಂಡ ಮುಖದ ಚಿಕಿತ್ಸೆಯಲ್ಲಿ ಹೊಸ ಸಾಧನೆ ಮಾಡುತ್ತಿದೆ ಎಂದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಂಡಳಿಯ ಕಾರ್ಯಾಧ್ಯಕ್ಚ ಅಶೋಕ ಸಜ್ಜನ, ದಂತ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀನಿವಾಸ ವನಕಿ, ಬಾಯಿ ಶಸ್ತ್ರ ಚಿಕಿತ್ಸಾ ವಿಭಾಗದ ಡಾ.ಸತ್ಯಜೀತ ದಂಡಗಿ, ಕೃತಕ ದಂತ ಜೋಡಣಾ ವಿಭಾಗದ ಡಾ. ವಿಕಾಸ ಕಾಂಬಳೆ, ಪ್ರಾಧ್ಯಾಪಕ ಡಾ. ರವಿರಾಜ ದೇಸಾಯಿ, ಡಾ. ಕಾಶೀನಾಥ ಆರಬ್ಬಿ ಮುಂತಾದವರು ಉಪಸ್ಥಿತರಿದ್ದರು.