ರಾಯಚೂರು : ಕಿರಿಯ ವಕೀಲರಿಗೆ ಸಮರ್ಪಕವಾಗಿ ಪ್ರೋತ್ಸಾಹ ಧನ ( ಭತ್ಯೆ ) ನೀಡುವಂತೆ ಹಾಗೂ ವಕೀಲ ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಅಖಿಲ ಭಾರತ ವಕೀಲರ ಒಕ್ಕೂಟದಿಂದ ( AILU ) ಮನವಿ ಸಲ್ಲಿಸಲಾಯಿತು.
ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕಾನೂನು ಪದವಿ ಪೂರ್ಣಗೊಳಿಸಿ ನೊಂದಣಿ ಮಾಡಿಕೊಂಡು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಿರಿಯ ವಕೀಲರಾಗಿ ಕಲಿಕೆಯಲ್ಲಿ ತೊಡಗಿದ್ದಾರೆ. ಆದರೆ ಇವರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾ ಇಲಾಖೆಯಿಂದ ಸಿಗಬೇಕಾದ ಪ್ರೋತ್ಸಾಹ ಧನ ಸಮರ್ಥವಾಗಿ ದೊರೆಯುತ್ತಿಲ್ಲ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳುಗಳು ಕಳೆದರೂ ಹಣ ಮಂಜೂರಾಗಿಲ್ಲ ಮತ್ತು ಇತ್ತೀಚಿಗೆ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಅಲ್ಪಸಂಖ್ಯಾತ ವಿಭಾಗದಲ್ಲಿ ಕೇವಲ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
ಸುಮಾರು 25 ಕ್ಕೂ ಹೆಚ್ಚು ಕಿರಿಯ ವಕೀಲರ ಪೈಕಿ ಮೂರೆ ಜನರನ್ನು ಆಯ್ಕೆ ಮಾಡಿದರೆ ಹೇಗೆ? ಜೊತೆಗೆ ಈಗಾಗಲೇ ಆಯ್ಕೆಯಾದ ಕಿರಿಯ ವಕೀಲರ ಪೈಕಿ ಹಲವರಿಗೆ ಹಣವು ಸಿಗುತ್ತಿಲ್ಲ. ಪ್ರತಿ ಬಾರಿಯೂ ಬಜೆಟ್ ಮತ್ತೊಂದು ಅಂತಾ ಇಂತಹ ಸಮಸ್ಯೆಗಳನ್ನು ಇಲಾಖೆಯ ಅಧಿಕಾರಿಗಳು ಹೇಳುತ್ತಾ ಬರುತ್ತಿದ್ದಾರೆ.
ಹೀಗಾದರೆ ಕಲಿಕೆಗೆ ಅಡಚಣೆ ಉಂಟಾಗಿ ಅವರ ವೃತ್ತಿ ಜೀವನಕ್ಕೆ ತೊಂದರೆ ಆಗಲಿದೆ ಆದ್ದರಿಂದ ತಾವುಗಳು ಕೂಡಲೇ ಈ ಬಗ್ಗೆ ವಿಶೇಷ ಗಮನ ಹರಿಸಿ ಆರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ತುರ್ತಾಗಿ ಮುಂದಾಗಬೇಕು ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಸಮರ್ಪಕವಾಗಿ ಹಣ ಸಿಗುವಂತೆ ಮಾಡಬೇಕು ಮತ್ತು ಹೊಸದಾದ ಆಯ್ಕೆ ಪ್ರಕ್ರಿಯೆಗೂ ಮುಂದಾಗಬೇಕು ಹಾಗೂ ಕರೋನ ದಿಂದ ಸಂಕಷ್ಟಕ್ಕೆ ಸಲುಕಿದ ವಕೀಲರಿಗೆ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಿ ಆಗತ್ಯ ನೆರವಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಧಾವಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಶಿವಕುಮಾರ ನಾಯಕ ದಿನ್ನಿ, AILU ಸಂಚಾಲಕರಾದ ಜಿ. ಎಸ್ ವೀರಭದ್ರಪ್ಪ, ಜಿಲ್ಲಾ ಖಜಾಂಚಿಯಾದ ಪ್ರಸಾದ್ ಜೈನ್, ವಕೀಲರಾದ ಎಂ, ಸುಬ್ಬಣ್ಣ, ಮರಿಯಪ್ಪ, ಶಿವಕುಮಾರ ಮ್ಯಾಗಳಮನಿ, ಸೌಮ್ಯ, ಶಶಿಕಲಾ, ವೈಜನಾಥ್, ಯಲ್ಲಪ್ಪ, ದೀಪಿಕಾ, ಶೋಯಿಬ್, ರವಿ ಕುಮಾರ್, ಶ್ರೀದೇವಿ, ಮಲ್ಲರೆಡ್ಡಿ, ಲಿಂಗರಾಜ, ಸಿದ್ದಲಿಂಗ, ಸಂತೋಷ ಕುಮಾರ್, ಸೇರಿದಂತೆ ಅನೇಕರಿದ್ದರು.