ಸುರಪುರ: ನಗರದ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಡ್ತಿ ಹೊಂದಿದ ಬೆನಕನಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಂಗಮ್ಮ ನಾಗಾವಿ ಹಾಗೂ ಬಿಇಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಶಾಂತಪ್ಪ ಮತ್ತು ಶಾಲೆಗೆ ವರ್ಗಾವಣೆಗೊಂಡು ಬಂದಿರುವ ಶಿಕ್ಷಕರಾದ ದ್ಯಾವಪ್ಪ ಜಾಲಿಬೆಂಚಿ ಹಾಗೂ ವಿಜ್ಞಾನ ಸಹಾಯಕ ಸಾಲಾರ್‌ಖಾನ ಇವರುಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಮಾತನಾಡಿ ಶಾಲೆಯಲ್ಲಿ ೨೩ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯಿನಿ ಆಗಿ ಪದೋನ್ನತಿಗೊಂಡಿರುವ ಸಂಗಮ್ಮ ನಾಗಾವಿ ಹಾಗೂ ೧೯ವರ್ಷ ಸೇವೆ ಸಲ್ಲಿಸಿ ಬಿಇಓ ಕಚೇರಿಗೆ ಎಸ್‌ಡಿಎ ಪದನ್ನೋತಿಗೊಂಡಿರುವ ಶಾಂತಪ್ಪ ಅವರು ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಇಬ್ಬರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಬೀಳ್ಕೊಡಲಾಯಿತು, ಇದೇ ಸಂದರ್ಭದಲ್ಲಿ ಶಾಲೆಗೆ ವರ್ಗಾವಣೆಗೊಂಡು ಸೇವೆಗೆ ಸೇರಿದ ಶಿಕ್ಷಕ ದ್ಯಾವಪ್ಪ ಜಾಲಿಬೆಂಚಿ ಹಾಗೂ ವಿಜ್ಞಾನ ಸಹಾಯಕ ಸಾಲಾರ್‌ಖಾನ ಮತ್ತು ಎಸ್‌ಡಿಎಂಸಿ ನೂತನ ಅಧ್ಯಕ್ಷರಾದ ರಾಮಣ್ಣ ಮೂಲಿಮನಿ ವಾರಿ ಸಿದ್ದಾಪುರ ಅವರನ್ನು ಸನ್ಮಾನಿಸಲಾಯಿತು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸುವರ್ಣ ಅರ್ಜುಣಗಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಲಕ್ಷ್ಮಣ ಬಿರಾದಾರ ನಿರೂಪಿಸಿದರು ವಸಂತಕುಮಾರ ಕೆ.ಎಲ್ ಸ್ವಾಗತಿಸಿದರು ಹಾಗೂ ಜಯರಾಮ ಚವ್ಹಾಣ ವಂದಿಸಿದರು.