ಅತಿಥಿ ಉಪನ್ಯಾಸಕರ ಪರ ಅವೈಜ್ಞಾನಿಕ ಆದೇಶ : ಪೀರಪಾಶಾ

0
70

ಶಹಾಬಾದ: ಅತಿಥಿ ಉಪನ್ಯಾಸಕರ ವೇತನವನ್ನು ಕೇವಲ ಮೂರು ಸಾವಿರ ಮಾತ್ರ ಹೆಚ್ಚಿಸಿ ಮತ್ತೆ ನಿರುದ್ಯೋಗ ಸೃಷ್ಟಿಸಿದ ಸರ್ಕಾರದ ನಡೆ ಸರಿಯಲ್ಲ. ಈ ಕೂಡಲೇ ಆದೇಶ ರದ್ದುಗೊಳಿಸಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕೆಂದು ಕಾಂಗ್ರೆಸ್ ಕಲಬುರಗಿ ಜಿಲ್ಲಾ ವಕ್ತಾರ ಪೀರಪಾಶಾ ಒತ್ತಾಯಿಸಿದ್ದಾರೆ.

ಅವರು ಬುಧವಾರ ನಗರದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಹಲವು ಬೇಡಿಕೆಗಳಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು, ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಸಹಾಯಧನವನ್ನು ಅತಿಥಿ ಉಪನ್ಯಾಸಕರಿಗೆ ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸರ್ಕಾರ ಕಳೆದ ಕೆಲವು ದಿನಗಳ ಹಿಂದೆ ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ. ಇನ್ನು ಸರ್ಕಾರದ ತೀರ್ಮಾನದಲ್ಲಿ ಉದ್ಯೋಗ ಭದ್ರತೆ ಇಲ್ಲ. ಇದೊಂದು ಕಡೆ ಒಡೆದು ಆಳುವ ನೀತಿ. ಉಪನ್ಯಾಸಕರ ಮೂಲ ಬೇಡಿಕೆಯನ್ನೇ ಬಿಟ್ಟು ಸಂಬಳವನ್ನು ಮಾತ್ರ ಹೆಚ್ಚಿಗೆ ಮಾಡಿರುವುದು ಬೇಸರದ ಸಂಗತಿ. ಆದರೆ, ಅತಿಥಿ ಉಪನ್ಯಾಸಕರಿಗೆ ಬೇಕಿರುವುದು ಸಂಬಳ ಅಲ್ಲ. ಸೇವಾ ಭದ್ರತೆ.ಕಾಯಂ ಹಾಗೂ ಹೆಚ್ಚುವರಿ ಉಪನ್ಯಾಸಕರು ಬಂದಾಗ ತಮ್ಮ ವೃತ್ತಿಯನ್ನೇ ತೊರೆಯಬೇಕಿದೆ. ಈ ಕ್ರಮ ಸರಿಯಲ್ಲ ಎಂದು ವಿವರಿಸಿದರು.

ಅತಿಥಿ ಉಪನ್ಯಾಕರಿಗೆ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿರುವ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆ ಶುದ್ಧ ಸುಳ್ಳು. ಇದು ಮೂಗಿಗೆ ತುಪ್ಪ ಸವರುವ ತಂತ್ರವಾಗಿದೆ ಎಂದರು. ವಿದ್ಯಾರ್ಥಿಗಳ ಭವಿ?ಕ್ಕಾಗಿ ಹತ್ತಾರು ವ?ಗಳಿಂದ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರು ೭,೫೦೦ ಅತಿಥಿ ಉಪನ್ಯಾಸಕರನ್ನು ತೆಗೆದುಹಾಕಿದ್ದಾರೆ. ೮ ಗಂಟೆ ಪಾಠ ಮಾಡುವ ನಮಗೆ ಹೆಚ್ಚುವರಿಯಾಗಿ ೧೫ ಗಂಟೆ ಪಾಠ ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಹೀಗಾಗಿ ವೇತನ ಹೆಚ್ಚಿಸಿದ್ದಾರೆಯೇ ವಿನಃ ಯಾವುದೇ ಸಿಹಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಳ್ಳು ಹೇಳುವ ಮೂಲಕ ಸಚಿವ ಅಶ್ವಥ್ ನಾರಾಯಣ್ ಅವರು ವಂಚಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಹಾಯ ಧನವನ್ನ ಅತಿಥಿ ಉಪನ್ಯಾಸಕರಿಗೆ ನೀಡ್ತಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು. ಟೆಕ್ನಿಕಲಿ ಯೋಚನೆ ಮಾಡಿದರೆ ಒಬ್ಬರಿಗೆ ೩ ಸಾವಿರ ಮಾತ್ರ ಹೆಚ್ಚು ಮಾಡಿದ್ದಾರೆ. ಆದರೆ, ೩೦, ೩೨ ಸಾವಿರ ಕೊಡುತ್ತೇವೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಶುದ್ಧ ಸುಳ್ಳು ಎಂದು ಆರೋಪಿಸಿದರು.

ಈ ಹಿಂದಿನಿಂದಲೂ ಸೇವಾ ಅಭದ್ರತೆ ಕಾಡ್ತಿತ್ತು. ಸೇವಾ ಭದ್ರತೆಗಾಗಿ ಉಪನ್ಯಾಸಕರು ಹೋರಾಟ ಕೈಗೊಂಡಿದ್ದಾರೆ. ತಮ್ಮ ಮೂಲ ಬೇಡಿಕೆಯನ್ನೇ ಈಡೇರಿಸದೇ ಸರ್ಕಾರ ಕೈ ಚೆಲ್ಲಿದೆ. ಇದು ನಿರಾಶಾದಾಯಕವಾದ ಕ್ರಮ.

ವಾಸ್ತವದಲ್ಲಿ ಸರ್ಕಾರ ಸಿಹಿ ಸುದ್ದಿ ಕೊಟ್ಟಿಲ್ಲ್ಲ. ಬದಲಾಗಿ ಸಂಕ್ರಾಂತಿಗೆ ಕಹಿ ಸುದ್ದಿ ಕೊಟ್ಟಂತಾಗಿದೆ ಎಂದು ಉಪನ್ಯಾಸಕ ವರ್ಗದವರೇ ಹೇಳುತ್ತಿದ್ದಾರೆ. ಆದರೂ ಉಪನ್ಯಾಸಕರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಉಪನ್ಯಾಸಕರು ಹೋರಾಟ ನಡೆಸುತ್ತಿಲ್ಲ. ಪಶ್ಚಿಮ ಬಂಗಾಳ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕೊಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿ, ೭೨೫೦ಕ್ಕೂ ಹೆಚ್ಚುಅತಿಥಿ ಉಪನ್ಯಾಸಕರ ಬದುಕಿಗೆ ಬರೆ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ೪೩೦ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಸುಮಾರು ೧೪೫೦೦ ಜನ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು ಸೇವಾ ಭದ್ರತೆ ಇಲ್ಲದೇ ಇರುವದರಿಂದ ಅನಿರ್ದಿ?ವಾಗಿ ತರಗತಿಗಳನ್ನು ಬಹಿ?ರಿಸಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದೇ ಗೌರವ ಧನ ಹೆಚ್ಚಿಸಿ ೧೪೫೦೦ ಜನ ಅತಿಥಿ ಉಪನ್ಯಾಸಕರನ್ನು ವಂಚಿಸಿದ್ದಾರೆ ಎಂದು ಕಿಡಿಕಾರಿ, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸರಕಾರ, ಸಚಿವರು ಚೆಲ್ಲಾಟವಾಡುತ್ತಿದ್ದಾರೆ ಎಂದರು.ಕೂಡಲೇ ಅತಿಥಿ ಉಪನ್ಯಾಸಕರ ಮರಣ ಶಾಸನವಾದ ಈ ಆದೇಶವನ್ನು ಹಿಪಡೆದು ಎಲ್ಲರಿಗೂ ಸೇವಾ ಭದ್ರತೆ ನೀಡಬೇಕು.ಇಲ್ಲದಿದ್ದರೇ ಅವರ ಪರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here