ಕಲಬುರಗಿ: “ವಿಶ್ವ ಹಿಂದಿ ದಿವಸ”

0
9

ಕಲಬುರಗಿ: ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ “ವಿಶ್ವ ಹಿಂದಿ ದಿವಸ”ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಕಲಬುರಗಿಯ ಸರಕಾರಿ ಸ್ವಯತ್ತ ಪದವಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷರಾದ ಡಾ.ಸವಿತಾ ತಿವಾರಿ ಆಗಮಿಸಿದ್ದರು.

ಸಭೆಯನ್ನು ಸಸಿಗೆ ನೀರು ಸುರಿಯುವ ಮುಖಾಂತರ ಉಧ್ಘಾಟಿಸಿ , ೧೯೭೫ ರಲ್ಲಿ ನಾಗಪೂರದಲ್ಲಿ ವಿಶ್ವಹಿಂದಿ ಸಮ್ಮೇಳನ ಜರುಗಿತು,ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಸಮ್ಮೇಳನ ಉಧ್ಘಾಟಿಸಿ ಹಿಂದಿ ಭಾಷೆಯು ವಿಶ್ವಭಾಷೆ ಆಗಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅವರ ಆಸೆಯು ಪ್ರಥಮವಾಗಿ ೨೦೦೬ರಲ್ಲಿ,ಜನವರಿ ೧೦ ರಂದು “ವಿಶ್ವ ಹಿಂದಿ ದಿವಸ”ಎಂದು ಭಾರತ ಸರಕಾರ ಘೋಷಿಸಿದರು. ಅಂದಿನಿಂದ ವಿಶ್ವದೆಲ್ಲೆಡೆ ಹಿಂದಿಯನ್ನು ವಿಶ್ವ ಹಿಂದಿ ದಿವಸ ಎಂದು ಆಚರಿಸಲಾಗುತ್ತಿದೆ.ಇಂದು ಹಿಂದಿ ಭಾಷೆಯು ವಿಶ್ವದ ಅನೇಕ ದೇಶಗಳ ಶಾಲಾ ಕಾಲೇಜುಗಳಲ್ಲಿ,ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತಿದ್ದಾರೆ.ಜನಸಾಮನ್ಯರು ಸಹ ಹಿಂದಿಯಲ್ಲಿ ಮಾತನಾಡುತ್ತಾರೆ.ಈ ಭಾಷೆಯು ಸರಳ,ಸುಮಧುರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾರವರು ಅಧ್ಯಕ್ಷೀಯ ಮಾತನಾಡಿದರು.ಡಾ.ವಿಜಯಕುಮಾರ ಪರುತೆ ಪ್ರಾಸ್ತಾವಿಕ ಮಾತನಾಡಿದರು,ಮೊದಲಿಗೆ ಅನೀತಾಹಾಗು ಸಂಗಡಿಗರಿಂದ ಪ್ರಾರ್ಥನೆ ಗೀತೆ ಹಾಡಿದರುಡಾ.ಪ್ರೇಮಚಂದ ಚವ್ಹಾಣ ಸ್ವಾಗತಿಸಿದರು,ಶ್ರೀಮತಿ ಕವಿತಾ ಠಾಕೂರ ವಂದಿಸಿದರು,ಶ್ರೀಮತಿ ಶುಷ್ಮಾ ಕುಲಕರ್ಣಿ ಕಾರ್ಯಕ್ರಮ ನಿರುಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here