ಹಾವೇರಿ: ವಿದ್ಯಾರ್ಥಿಗಳ ಬಸ್ ಪಾಸ್ ಕೊರತೆ- ಸಮಸ್ಯೆ ನೀಗಿಸಲು ಒತ್ತಾಯ

0
11

ಹಾವೇರಿ : ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಸಾರಿಗೆ ಬಸ್‌ ಕೊರತೆ ಎದುರಿಸುತ್ತಿದ್ದಾರೆ.

ಸಮರ್ಪಕ ಬಸ್ ಸಂಚಾರ ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜು ಆರಂಭವಾದ ನಂತರ ತರಗತಿಗಳಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ.

Contact Your\'s Advertisement; 9902492681

ಗ್ರಾಮಾಂತರ ಪ್ರದೇಶಗಳಿಂದ ಜಿಲ್ಲಾ ಕೇಂದ್ರ ಹಾವೇರಿಗೆ ಬಂದರೆ ಸಮೀಪದಲ್ಲೇ ಕಾಲೇಜುಗಳಿಲ್ಲ. ದೇವಗಿರಿಯಲ್ಲಿ ಇಂಜಿನಿಯರಿಂಗ್ ಕಾಲೇಜ್ ಇದ್ದರೆ, ಪ್ರಥಮ ದರ್ಜೆ ಕಾಲೇಜ್ ಗಾಂಧಿಪುರದ ಬಳಿ ಇದೆ. ಇಲ್ಲಿಗೆ ಹೋಗಲು ಮತ್ತೆ ವಿದ್ಯಾರ್ಥಿಗಳು ಬಸ್ ಹತ್ತಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ, ನಿತ್ಯ ತರಗತಿಗಳು ಪ್ರಾರಂಭವಾದ ಮೇಲೆ ನಾವು ಹೋಗುತ್ತೇವೆ. ಈ ಕುರಿತಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಬಸ್‌ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು: ಶಾಲಾ – ಕಾಲೇಜ್‌ ಮುಗಿದ ನಂತರ ಗ್ರಾಮಗಳಿಗೆ ತೆರಳಲು ಸಹ ಸರಿಯಾದ ಬಸ್‌ಗಳಿಲ್ಲ. ತರಗತಿ ಬಿಟ್ಟ ನಂತರ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಬಸ್‌ಗಳ ಬಾಗಿಲುಗಳಲ್ಲಿ ವಿದ್ಯಾರ್ಥಿಗಳು ಜೋತು ಬಿದ್ದು ಪ್ರಯಾಣಿಸುತ್ತಾರೆ. ಇದರಿಂದ ಅಪಘಾತ ಸಂಭವಿಸಬಹುದು. ಈ ಕೂಡಲೇ ಜಿಲ್ಲಾಡಳಿತ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here