14 ಜೀವ ಬಲಿ ಪಡೆದ ಕಿಲ್ಲರ್ ರಸ್ತೆಯಿಂದ ಮುಕ್ತಿ

0
18

ಧಾರವಾಡ: ಕಳೆದ ವರ್ಷ ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ದೊಡ್ಡ ಅಪಘಾತ ನಡೆದು ಹೋಗಿತ್ತು. ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಇಟ್ಟಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾಗಿ 4 ರಲ್ಲಿ ಟೆಂಪೋ ಟ್ರಾವೆಲ್‌ಗೆ ಟಿಪ್ಪರ್‌ವೊಂದು ಡಿಕ್ಕಿ ಹೊಡೆದಿತ್ತು.

ಈ ಘಟನೆಯಲ್ಲಿ ದಾವಣಗೆರೆ ಮೂಲದ 13 ಮಹಿಳೆಯರು ಹಾಗೂ ಚಾಲಕ ಅಸುನೀಗಿದ್ದರು. ಆ ಘಟನೆ ನಡೆದು ಇಂದಿಗೆ ಬರೋಬ್ಬರಿ ಒಂದು ವರ್ಷ. ಘಟನೆ ನಡೆದು ಒಂದು ವರ್ಷವಾದರೂ ಇಂದಿಗೂ ಆ ಅಪಘಾತ ಯಾರ ಮನಸ್ಸಿನಿಂದಲೂ ಮರೆಯಾಗಿಲ್ಲ.

Contact Your\'s Advertisement; 9902492681

ಮೊದಲಿನಿಂದಲೂ ಬೈಪಾಸ್ ರಸ್ತೆಯಲ್ಲಿ ಇಂತಹ ದುರ್ಘಟನೆಗಳು ನಡೆದರೂ ಅತೀ ಹೆಚ್ಚಿನ ಸಾವು-ನೋವು ಕಂಡ ಘಟನೆ ಇದಾಗಿದ್ದರಿಂದ ಈ ರಸ್ತೆಯ ಅಗಲೀಕರಣಕ್ಕೆ ಸಾಕಷ್ಟು ಒತ್ತಡ ಕೇಳಿ ಬಂದಿತ್ತು. ಆದರೆ ಅದಾಗಿ ಒಂದು ವರ್ಷವಾದರೂ ಇದುವರೆಗೂ ಟೆಂಡರ್ ಪ್ರಕ್ರಿಯೆ ಬಿಟ್ಟರೆ ಮತ್ತೇನೂ ನಡೆದೇ ಇಲ್ಲ ಅನ್ನೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಬರೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಪಘಾತದಲ್ಲಿ ಅಸುನೀಗಿದವರ ಆತ್ಮಕ್ಕೆ ಶಾಂತಿ ಕೋರಿದ್ದರು. ಈ ಘಟನೆ ನಡೆದ ಬಳಿಕ ಈ ರಸ್ತೆಯನ್ನು ಅಗಲೀಕರಣ ಮಾಡಬೇಕು ಅನ್ನೋ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿತ್ತು. ಈ ರಸ್ತೆಯನ್ನು ನಂದಿ ಇನ್ಫ್ರಾಸ್ಟಕ್ಟರ್ ಕಂಪನಿ ನಿರ್ಮಿಸಿ, ನಿರ್ವಹಣೆ ಮಾಡುತ್ತಿದೆ. 2024 ರ ಮೇ ತಿಂಗಳವರೆಗೆ ಅವರೇ ನಿರ್ವಹಣೆ ಮಾಡಬೇಕಿದೆ. ಆದರೆ ಆ ಕಂಪನಿಗೆ ಅಗಲೀಕರಣ ಮಾಡಲು ಇಷ್ಟವಿಲ್ಲದಿದ್ದಕ್ಕೆ ಈ ಸಮಸ್ಯೆ ಇಂದಿಗೂ ಮುಂದುವರೆಯುತ್ತಲೇ ಇದೆ.

ಇನ್ನು ಈ ಒಂದು ವರ್ಷದ ಅವಧಿಯಲ್ಲಿ ಮತ್ತೆ ಅನೇಕ ಅಪಘಾತಗಳು ಆಗಿದ್ದು, ಹತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ರಸ್ತೆ ಅಗಲೀಕರಣಕ್ಕೆ ಮನಸ್ಸು ಮಾಡಿದ್ದು, ಆರು ಪಥಗಳನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿವೆ. ಆದರೆ, ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಟೆಂಡರ್ ಪ್ರಕ್ರಿಯೆ ಇದೀಗ ಜಾರಿಯಲ್ಲಿದ್ದು, ಇವೆಲ್ಲಾ ಮುಗಿಯೋದಕ್ಕೆ ಎಷ್ಟು ದಿನಗಳು ಬೇಕೋ ಏನೋ ಅನ್ನೋದು ಜನರ ಪ್ರಶ್ನೆಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here