ಕ್ಷಯ ರೋಗ ಮುಕ್ತ ಕರ್ನಾಟಕಕ್ಕೆ ವಿದ್ಯಾರ್ಥಿಗಳು ಕೈ ಜೋಡಿಸಿ: ಹಾವನೂರು

0
95

ಕಲಬುರಗಿ: ಮಕ್ಕಳಿಗೆ  ಕ್ಷಯರೋಗ (ಟಿಬಿ) ಲಕ್ಷಣಗಳು ಇರುವ ಯಾವುದೇ ವ್ಯಕ್ತಿ ಕಂಡು ಬಂದರೆ ಅವರಿಗೆ ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಬೇಕು ಗುಣಮುಖವಾಗುವಂತಹ ರೋಗವಾಗಿದೆ ಇದರ ಬಗ್ಗೆ ಭಯ ಪಡದೆ ಕ್ಷಯ ಖಚಿತವಾಗಿರುವ ರೋಗಿಯು  ಸರಿಯಾದ  ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖವಾದಗ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿದೆ ಕ್ಷಯ ರೋಗ ಮುಕ್ತ ಕರ್ನಾಟಕಕ್ಕೆ ಗ್ರಾಮದ ಜನರು ಕೈ ಜೋಡಿಸಬೇಕೆಂದು ತಾಲ್ಲೂಕ  ಹಿರಿಯ ಕ್ಷಯರೋಗ ಮೇಲ್ವಿಚಾರಕ ಮಹಾಂತೇಶ್ ಹಾವನೂರ ಹೇಳಿದರು.

ಅವರು ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ  ಶ್ರೀಮತಿ ನರ್ಮದಾ ದೇವಿ ಗಿಲಡಾ  ಮಹಿಳಾ ಪದವಿ ಪೂರ್ವ ಕಾಲೇಜು ಸೇಡಂ ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ತಾಲ್ಲೂಕ ಆರೋಗ್ಯ ಕೇಂದ್ರ  ಸೇಡಂ ಇವರ ಸಂಯೋಗದಲ್ಲಿ ಹಮ್ಮಿಕೊಂಡ. ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಟಿಬಿ ಸೋಲಿಸಿ ಕರ್ನಾಟಕದಲ್ಲಿ ಗೆಲ್ಲಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ವಿದ್ಯಾರ್ಥಿಗಳಲ್ಲಿ ಹಾಗೆ  ಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ ಜೊತೆಗೆ ನಿಮ್ಮ ಊರಿನ ಸಮುದಾಯದ ಜನರಿಗೆ ಕ್ಷಯರೋಗ  ಕುರಿತು ಅರಿವು ಮಾಹಿತಿ ನೀಡಬೇಕು ಅಂದಾಗ ಮಾತ್ರ ರೋಗ ತಡೆಯಲು ಸಾಧ್ಯವೆಂದರು ಅವರು ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಹೆಚ್ಚು ಟಿಬಿ‌ ಲಕ್ಷಣ್ಣ ಕಂಡುಬರುತ್ತಿದೆ ಇದರಿಂದ ಮಕ್ಕಳಿಗೆ ಅರಿವು ಮೂಡಿಸಲು  ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ 2025 ರ ಒಳಗೆ ಎಂಬ ಘೋಷವಾಕ್ಯದಂತೆ ಸಮುದಾಯದ ಜನರು ಕ್ಷಯರೋಗ ನಿರ್ಮೂಲನಗೆ ಪಣ ತೊಡಬೇಕೆಂದರು.

Contact Your\'s Advertisement; 9902492681

ನಂತರ ಜಿಲ್ಲಾ ಕ್ಷಯರೋಗ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ , ಅವರು ಮಾತನಾಡುತ್ತ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ ಕ್ಷಯರೋಗ ಗುಣಪಡಿಸಲು ಸಾಧ್ಯ, ಪ್ರತಿ  ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಿಗೆ ತಾಲ್ಲೂಕಿನ ದಂತ್ಯ ಗ್ರಾಮದ ಜನರಿಗೆ ಮಾಹಿತಿ ನೀಡುವುದು ಬಹಳ ಮುಖ್ಯವಾಗಿದೆ ಅದರಿಂದ  ಶಾಲಾ-ಕಾಲೇಜಿನಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುತ್ತಿದೆವೆ ಹಾಗೆ ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದ್ದು ಪ್ರತಿ ಒಬ್ಬರು ಎಚ್ಚರವಹಿಸಬೇಕು.

ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಕ್ಷಯರೋಗ ಪರೀಕ್ಷೆ  ಮತ್ತು ಚಿಕಿತ್ಸೆ  ಸಂಪೂರ್ಣವಾಗಿ ಉಚಿತ ಇರುತ್ತದೆ. ಮತ್ತು ಆರು ತಿಂಗಳ ಚಿಕಿತ್ಸೆಯ ಸಂಧರ್ಬದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಂಬಂದ ಮಾಸಿಕ  ೫೦೦ ರೂ, ಗಳನ್ನು ಕೊಡಲಾಗುತ್ತದೆ ಇದರ ಉಪಯೋಗ ಪ್ರತಿ ರೋಗಿಯು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪ್ರಮುಖರಾದ ಕ್ಷಯರೋಗ ನಿರ್ಮೂಲನ ಕೇಂದ್ರ ತಾಲ್ಲೂಕ  ಎಸ್ ಟಿ ಎಲ್ ಎಸ್. ಶಿವಪುತ್ರ ಜನಕಟ್ಟಿ ಅವರು ರಸ ಪ್ರಶ್ನೆ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟರು ಹಾಗೆ  ಕ್ಷಯರೋಗ ಕುರಿತು ಮಾಹಿತಿ ನೀಡಿ. ಬಿತ್ತಿ ಪತ್ರ ಮೂಲಕ ಜಾಗೃತಿ ಮೂಡಿಸಲಾಯಿತು.

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಪೂಜ್ಯ ಶ್ರೀ ಸದಾಶಿವ ಸ್ವಾಮಿಜೀ ಅವರು ಅಧ್ಯಕ್ಷತೆಯಲ್ಲಿ ನಡೆಯಿತು.ಹಾಗೆ ರಸ ಪ್ರಶ್ನೆ ( ಕ್ವೀಜ್ ) ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವೀತಿಯ,  ತೃತೀಯ   ಬಹುಮಾನ ನೀಡಲಾಯಿತು.

ಟಿಬಿ ಹೆಲ್ತ್ ವಿಸೀಟರ್  ಬೆಂಜಮಿನ್ ಅವರು ಮಾತನಾಡುತ್ತ  ವಿಶೇಷವಾಗಿ ಕೋವಿಡ್ ಯಾರನ್ನು ಬೆಂಬಿಡದೆ ಹರಡುತಿರುವ ಕೋವಿಡ್ ಓಮಿಕ್ರಾನ್ ರೂಪಾಂತರಿ ಆರ್ಭಟದಿಂದಾಗಿ ದೇಶದಲ್ಲಿ ದಾಖಲೆ ಮಟ್ಟದಲ್ಲಿ ನಿತ್ಯ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ ಅದರಿಂದ ಪ್ರತಿಒಬ್ಬರು ಬಿಡದೆ ಕೊರೋನಾ ನಿರೋಧಕ ಲಸಿಕೆಗಳಾದ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ 15 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಕೋಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಪ್ರಮುಖರಾದ ಉಪ ಪ್ರಾಚಾರ್ಯರಾದ ಸುನೀತಾ ಹಳ್ಳಿ, ಭೀಮಾಶಂಕರ  ಮಡಿವಾಳ. ಗಂಗಮ್ಮ ಬೀರನಳ್ಳಿ, ಜಗದೇಶ್ವರಿ ಪಾಟೀಲ್, ಬಸವರಾಜ ಮಠಪತಿ ಆರತಿ ಅವಂಟಿ,ಇದ್ದರು ಈ ಕಾರ್ಯಕ್ರಮದಲ್ಲಿ  ಕಾಲೇಜಿನ ವಿದ್ಯಾರ್ಥಿಗಳು .ಹಾಗೂ ಉಪನ್ಯಾಸಕರು, ಇತರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here