ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0
14

ಶಹಾಬಾದ: ಸರಕಾರ ಅನೇಕ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸರಿಯಾಗಿ ಅಧ್ಯಯನ ಮಾಡಿ, ಉನ್ನತವಾದ ಸಾಧನೆಯನ್ನು ಮಾಡಬೇಕು ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅವರು ಸಮೀಪದ ಝಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಲಾದ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಂವಿಧಾನದ ಆಶಯವಾಗಿದ್ದು, ಅದನ್ನು ಕಾರ್ಯರೂಪದಲ್ಲಿ ತರಲು ಸರ್ಕಾರವು ಎಲ್ಲೆಡೆ ಶಾಲೆಗಳನ್ನು ತೆರೆಯುವುದು, ಉಚಿತವಾಗಿ ಬಟ್ಟೆ, ಪುಸ್ತಕ, ಸೈಕಲ್, ಊಟ, ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಒದಗಿಸಿಕೊಡುತ್ತಿದೆ. ವಿದ್ಯಾರ್ಥಿಗಳು ಇವುಗಳನ್ನು ಪಡೆದುಕೊಂಡು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕು.ಕಲಿತ ಶಾಲೆ, ಕಲಿಸಿದ ಗುರುಗಳು, ಹೆತ್ತ ತಂದೆ-ತಾಯಿಗಳಿಗೆ ಕೀರ್ತಿ ತರುವ ಕೆಲಸ ತಮ್ಮಿಂದಾಗಬೇಕು.ಮುಂದೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಡಬಲ್ಲವರಾಗಬೇಕೆಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಬುದ್ದಿ, ಕೌಶಲ್ಯಗಳನ್ನು ಕಲಿಯಬೇಕು. ಬಾಲ್ಯದಿಂದಲೇ ಕೆಟ್ಟ ಚಟಗಳಿಂದ ದೂರವಿರಬೇಕು. ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡಬೇಕು. ಪಾಲಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸಿಕೊಡಬೇಕು. ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸಮುದಾಯ ಭಾಗವಹಿಸುವದರಿಂದ ಕಲಿಕೆ-ಬೋಧನೆ ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಾಂಗ್, ಗ್ರಾ.ಪಂ ಸದಸ್ಯರುಗಳಾದ ಪೀರಪ್ಪ ದೊಡ್ಡಮನಿ, ಪರಮೇಶ್ವರ ಪೂಜಾರಿ, ಸಹ ಶಿಕ್ಷಕರಾದ ಶಾಂತಾಬಾಯಿ ವಿ.ಹಿರೇಮಠ, ಲಕ್ಕುನಾಯಕ್, ವೀರವ್ವ ಕಿಣ್ಣನವರ್, ಪಾಲಕ ಹಾಗೂ ಗ್ರಾಮಸ್ಥರಾದ ಅರುಣಕುಮಾರ ಕಟ್ಟಿಮನಿ, ಶರಣಪ್ಪ ಪೂಜಾರಿ, ಪರುಶರಾಮ ದೊಡ್ಡಮನಿ, ಶಿವರಾಜ ವಡ್ಡರ್, ಶಿಕ್ಷಕಿ ಮಂಜುಳಾ ಮೇಲಿನಮನಿ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here