ಸಹಸ್ರಾರು ಭಕ್ತರ ನಡುವೆ ಖ್ವಾಜಾ ಬಂದೇ ನವಾಜ್ ಮೆರವಣಿಗೆ ಆರಂಭ

0
99

ಕಲಬುರಗಿ: ಸೂಫಿ ಅಜರತ್ ಖ್ವಾಜಾ ಬಂದೇ ನವಾಜ (ರ.ಅ) ಅವರ 615ನೇ ಜಾತ್ರಾ ಮಹಾತ್ಸೊವದ ಅಂಗವಾಗಿ ಇಂದು ನಗರದ ಮಹಾನಗರ ಪಾಲಿಕೆಯ ಉದ್ಯಾನವದಲ್ಲಿ ಧಾರ್ಮಿಕ ಸಕಲ ಸಿದ್ಧತೆಗಳ ನಡುವ ಗಂಧದ ಭವ್ಯ ಮೆರವಣಿಗೆ ದರ್ಗಾದ ಪೀಠಾಧಿಪತಿಗಳು ಹಾಗೂ ಧಾರ್ಮಿಕ ಮುಖಂಡರ ನಡುವೆ ತೆರಳಿದ್ದು, ಸುಮಾರು ರಾತ್ರಿ 1:30 ರವರೆಗೆ ಗಂಧ ಲೇಪನ ಕಾರ್ಯ ನೆರವೇರಲಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಗಂಧದ ಮೆರವಣಿಗೆ ಉದ್ಯಾನವದಲ್ಲಿ ಮಧ್ಯಹ್ನದಂದು ಗಂಧದ ಪ್ರಯುಕ್ತ ದರ್ಗಾದ ಪೀಠಾಧಿಪತಿಗಳ ನೇತೃತ್ವದಲ್ಲಿ ಖವಾಲಿ ಕಾರ್ಯಕ್ರಮದ ಅದ್ಧೂರಿಯಾಗಿ ನಡೆಯಿತ್ತು. ನಂತರ ಗಂಧದ ಮೇರವಣಿಗೆ ಕುರಿತು ಧಾರ್ಮಿಕ ಪದ್ಧತಿ ಹಾಗೂ ಹಳೆಯ ವಾಡಿಕೆಯ ಪ್ರಕಾರ ಗಂಧದ ಮೇರವಣಿಯನ್ನು ನಗರದ ಜಗತ್ ಸರ್ಕಲ್ ದಿಂದ ಪ್ರರಂಭವಾಯಿತ್ತು.

ನಂತರ ಸೂಪರ್ ಮಾರ್ಕೆಟ್ ಮೂಲಕ ಮೇರವಣಿಗೆ ನಗರದ ಹಫ್ತ್ ಗುಮಜ್ ಮೂಲಕ ದರ್ಗಾದ ಕಡೆಗೆ ತೆರಳಿದ್ದು, ಸೂಮಾರು ಗಂಧ ಲೇಪನ ಕಾರ್ಯಕ್ರಮ ಸೂಮಾರು ರಾತ್ರಿ 1:30 ಪೂರ್ಣಗೊಳಿದೆ ಎಂದು ದರ್ಗಾದ ಸಮಿತಿ ತಿಳಿಸಿದೆ.

ಗಂಧದ ಮೆರವಣಿಗೆಯಲ್ಲಿ ಹೈದಾರಾಬಾದ್ ಸೇರಿದಂತೆ ಮುಂತಾದ ರಾಜ್ಯಗಳಿಂದ ಬಂದ ಭಕ್ತದಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಮೆರವಣಿಗೆಯಲ್ಲಿ ಜಲಾಲಿ ಫಕೀರಗಳು ಖ್ವಾಜಾ ಬಂದೇ ನವಾಜ್ ದರ್ಗಾದ ಭಕ್ತಿಯಲ್ಲಿ ತಲ್ಲಿನರಾಗಿ ತಮ್ಮ ವಿಸ್ಮಯಕಾರಿ ಕರಾಮತ್ ತೋರಿಸಿತೊಡಗಿದರು.

ಈ ಸಂದರ್ಭದಲ್ಲಿ ಸಯಸ್ ಮೊಹ್ಮದ್ ಅಲಿ ಅಲ್ ಹುಸೈನಿ, ಡಾ. ಸಯದ್ ಮುಸ್ತಫಾ ಹುಸೈನಿ, ಸಯದ್ ಶಾ ಯುಸುಫ್ ಹುಸೈನಿ ಸೇರಿದಂತೆ ವಿವಿಧ ರಾಜ್ಯದ ದರ್ಗಾದ ಪೀಠಾಧಿಪತಿಗಳು ಹಾಗೂ ಸಾವಿರಾರು ಭಕ್ತರು ದರ್ಗಾದ ಗಂಧದ ಜುಲುಸ್ (ಮೆರವಣಿಗೆ)ಯಲ್ಲಿ ಭಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here