ನಿವೃತ್ತಿ ಜೀವನ ಸಂತೋ?ದ ಕ್ಷಣಗಳನ್ನು ತರುವಂತಾಗಲಿ: ಇರ್ಫಾನ್ ಪಟೇಲ್

0
18

ಶಹಾಬಾದ: ಸರ್ಕಾರಿ ಸೇವಾವಧಿಯ ನಂತರದ ನಿವೃತ್ತಿ ಜೀವನ ನಿಮ್ಮ ನೆಮ್ಮದಿಯ ಸುಖ, ಸಂತೋ?ದ ಕ್ಷಣಗಳನ್ನು ತರುವಂತಾಗಲಿ ಎಂದು ಉಪನ್ಯಾಸಕ ಇರ್ಫಾನ ಪಟೇಲ್ ಹೇಳಿದರು.

ಅವರು ಬುಧವಾರ ನಗರದಲ್ಲಿ ಆಯೋಜಿಸಲಾದ ಹಾಸ್ಟೆಲ್ ಮೇಲ್ವಿಚಾರಕರಾಗಿ ಸೇವಾ ನಿವೃತ್ತಿ ಹೊಂದಿದ ಶಂಕರ ಜಾನಾ ಅವರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸೇವಾವಧಿಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿದರೆ ನಿವೃತ್ತಿಯ ನಂತರ ನೆಮ್ಮದಿ ತಾನೇ ಅರಸಿಕೊಂಡು ಬರುತ್ತದೆ. ಅಧಿಕಾರವಿದ್ದಾಗ ಸರ್ವರೊಂದಿಗೆ ಹೊಂದಾಣಿ ಮಾಡಿಕೊಂಡು ನ್ಯಾಯಯುತವಾಗಿ ಕೆಲಸ ಮಾಡಿದಲ್ಲಿ ನಿವೃತ್ತಿ ನಂತರ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂಬುದಕ್ಕೆ ಶಂಕರ ಜಾನಾ ಅವರೇ ಸಾಕ್ಷಿಯಾಗಿದ್ದಾರೆ ಎಂದರು.

ಅನೀಲ ಮೈನಾಳಕರ್ ಹಾಘೂ ರವಿ ಬೆಳಮಗಿ ಮಾತನಾಡಿ, ಶಂಕರ ಜಾನಾ ಅವರು ಒಳ್ಳೆಯ ಸ್ವಭಾವದ ವ್ಯಕ್ತಿಗಳಾಗಿದ್ದು, ಸಮಾಜದ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಸರಕಾರಿ ಸೇವೆಗೆ ಸೇರುವ ಮುಂಚೆ ಅವರು ದಸಂಸದ ಚಳುವಳಿಯಲ್ಲಿ ಕ್ರಾಂತಿ ಗೀತೆಗಳು, ಹೋರಾಟದ ಹಾಡುಗಳನ್ನು ಹಾಡುವ ಮೂಲಕ ಸಂಘಟನೆಯನ್ನು ಬಲಪಡಿಸುವುದಲ್ಲದೇ, ಕಾರ್ಯಕರ್ತರನ್ನು ಹುರಿದಂಬಿಸುತ್ತಿದ್ದರು.

ಅನೇಕ ದಲಿತ ಒಕ್ಕೂಟಗಳಲ್ಲಿ ಕೆಲಸ ಮಾಡಿದ್ದಾರೆ. ಸಮಾವೇಶಗಳನ್ನು, ವಿಚಾರ ಸಂಕೀರಣಗಳನ್ನು ಹಮ್ಮಿಕೊಂಡಿದ್ದಾರೆ.ಅಲ್ಲದೇ ಸಮಾಜದ ಜಾಗೃತಿಗಾಗಿ ಜೀಪ ಜಾಥಾ, ಕಲನಡಿಗೆ ಜಾಥಾ, ಸೈಕಲ್ ಜಾಥಾ ಸೇರಿದಮತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸುಮಾರು ೨೮ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದರು.ಸರಕಾರಿ ನೌಕರಿ ಸಿಗುವುದು ಭಾಗ್ಯವಂತರಿಗೆ ಮಾತ್ರ ಒಲಿಯುತ್ತದೆ.ಇದೊಂದು ಶ್ರೇಷ್ಠ ಸೇವೆ. ಈ ಸೇವೆ ಸಿಗುವುದು ತುಂಬಾ ಅದೃ?ವಂತರಿಗೆ ಮಾತ್ರ. ಸೇವಾವಧಿಯಲ್ಲಿ ವೇತನಕ್ಕಾಗಿ ದುಡಿಯದೇ ಸಮಾಜದ ಏಳ್ಗೆಗಾಗಿ ದುಡಿಯಬೇಕು. ಸಮಾಜದ ಋಣ ತೀರಿಸಬೇಕು. ಪ್ರತಿ ಕೆಲಸ ದೇವರ ಕೆಲಸವೆಂದು ನಂಬಿ ಸಾಗಬೇಕು.

ಪತ್ರಕರ್ತ ರಮೇಶ ಭಟ್,ಕಟ್ಟಡ ಕಾರ್ಮಿಕ ಸಂಘದ ನಾಗಪ್ಪ ರಾಯಚೂರಕರ್, ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಬಾದ, ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಮಲ್ಲೇಶಿ ಭಜಂತ್ರಿ, ಶಿವಕುಮಾರ ಕಾರೊಳ್ಳಿ, ದೇವೆಂದ್ರ ಹೊಸಮನಿ, ಸಂತೋಷ ಹುಲಿ, ಆನಂದ ನಿಂಗದಲ್ಲಿ, ಲಕ್ಷಮಿಕಾಂತ ಬಳಿಚಕ್ರ, ಯಲ್ಲಾಲಿಂಗ ಹೈಯಾಳಕರ್, ಬಸವರಾಜ ತುಮಕೂರ, ರಮೇಶ ಬಾಡಿಯಾಳಕರ್,ಗುರು ದೊಡ್ಡಮನಿ, ತಿಪ್ಪಣ್ಣ ಬೆಳಗುಂಪಿ,ಭೀಮಶಪ್ಪ ಹಳ್ಳಿ, ಸದಾಶಿವ ಗೋಳಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here