ಕಲಬುರಗಿ: ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ತಳಕೇರಿ, ಉಪಾಧ್ಯಕ್ಷರಾದ ಲೋಹಿತ ಹೊಸಮನಿ, ಪ್ರಧಾನ ಕಾರ್ಯದರ್ಶಿಗಳಾದ ರಾಜು ಶ್ರೀಚಂದ ಹಾಗೂ ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕು ಸಮಿತಿ ಪದಾಧಿಕಾರಿಗಳಾದ ಸಿದ್ದು ಉಡಗಿ, ಗೋಪಾಲ ನಾಟೆಕರ್, ಮಹಾದೇವ ಸಕಲೇಶಪಲ್ಲಿ ರವರ ನ್ಯಾಯಯುತ ಹೋರಾಟದಿಂದಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲಿಶ್ ಶಾಸಿ ರವರು ಸಂವಿಧಾನ ದಿನಾಚರಣೆ ಆಚರಣೆ ಮಾಡದೇ ಇರುವ ಸೇಡಂ ತಾಲೂಕಿನ ಇಬ್ಬರು ಪಿಡಿಓ ಗಳಿಗೆ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ದಿನಾಂಕ: 26-11-2021 ರಂದು ಸರ್ಕಾರದ ಎಲ್ಲಾ ಕಛೇರಿಯಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಆಚರಣೆ ಮಾಡುವಂತೆ ಸರ್ಕಾರದ ಆದೇಶವಿರುತ್ತದೆ.
ಆದರೆ ಸೇಡಂ ತಾಲೂಕಿನ ಮದನಾ ಗ್ರಾಮ ಪಂಚಾಯತಿ ಪಿಡಿಓ ಶಾಂತಪ್ಪ ಹಾಗೂ ಕೋಲಕುಂದ ಪಿಡಿಓ ನಿಂಗಪ್ಪ ಕೆಂಬಾವಿ ಅವರು ಗ್ರಾಮ ಪಂಚಾಯತ ನಲ್ಲಿ ಸಂವಿಧಾನ ದಿನಾಚರಣೆ ಆಚರಣೆ ಮಾಡದೆ ಸರ್ಕಾರದ ಅದೇಶ ಉಲಂಘಿಸಿ ಸಂವಿಧಾನಕ್ಕೆ ಅಗೌರವ ತೋರಿರುತ್ತಾರೆ.
ಸದರಿ ವಿಷಯದ ಬಗ್ಗೆ ಗಮನಕ್ಕೆ ಬಂದ ತಕ್ಷಣ. ಡಾ. ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ತಳಕೇರಿ ಅವರು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಿಗೆ ದೂರವಾಣಿ ಕರೆ ಮಾಡಿ ಕೂಲಂಕುಷ ತನಿಖೆಗೆ ಆಗ್ರಹಿಸಿದರು.
ಸಂವಿಧಾನ ದಿನಾಚರಣೆ ಮಾಡದೆ ಸಂವಿಧಾನಕ್ಕೆ ಅಗೌರವ ತೋರಿದ್ದು ಅವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯತ್ ಸಿಇಓ ದಿಲಿಶ್ ಶಾಸಿ ರವರು ಸೇಡಂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮದನಾ ಪಿಡಿಓ ಶಾಂತಪ್ಪ ಹಾಗೂ ಕೋಲಕುಂದ ಪಿಡಿಓ ನಿಂಗಪ್ಪ ಕೆಂಬಾವಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.