ಕಾಮ್ರೇಡ್ ಲೆನಿನ್ ರವರ ೯೮ನೇ ಸ್ಮಾರಕ ಸಭೆ

0
37

ಕಲಬುರಗಿ: ಪ್ರಪ್ರಥಮವಾಗಿ  ಮಾರ್ಕ್ಸವಾದ ತತ್ವಶಾಸ್ತ್ರದ  ಆದರದ ಮೆಲೆ ಸಮಾಜವಾದಿ ಸಮಜವನ್ನು ನಿರ್ಮಿಸಿದ ಮಹಾನ್ ನಾಯಕ ಕಾಮ್ರೇಡ್ ವಿ ಐ ಲೆನಿನ್  ಎಂದು ಎಸ್.ಯು. ಸಿ.ಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ ಎಸ್ ಇಬ್ರಾಹಿಂಪೂರ  ಹೇಳಿದರು.

ಅವರು ಎಸ್.ಯು.ಸಿ.ಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯಿಂದ ರಷ್ಯಾದ ಸಮಾಜವಾದಿ ಕ್ರಾಂತಿಯ ಶಿಲ್ಪಿಯಾದ  ಕಾಮ್ರೇಡ್ ಲೆನಿನ್ ರವರ ೯೮ನೇ ಸ್ಮಾರಕ ಸಭೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು ಅವರು ಯುರೋಪಿಯ ರೋಗಗ್ರಸ್ಥ ರಾಷ್ಟ್ರವಾದ ರಷ್ಯಾವು ಕಾರ್ಲ್ ಮಾರ್ಕ್ಸ್ ರವರ ವಿಚಾರ ಧಾರೆಯ ಆಧಾರದ ಮೇಲೆ ಕ್ರಾಂತಿಯನ್ನು ನರೆವೇರಿಸಿ ಹೊಸ ಸಮಾಜಕ್ಕೆ ನಾಂದಿ ಹಾಡಿದರು. ಬಡತನ, ನಿರುದ್ಯೋಗ, ಹಸಿವು, ಬಿಕ್ಷಾಟನೆ, ಮಹಿಳೆಯರ ಮೇಲಿನ ದೌರ್ಜನ್ಯ ದಂತಹ ಸಮಾಜಿಕ ಸಮಸ್ಯಗಳಿಲ್ಲದ ಮಾನವನಿಂದ ಮಾನವ ಶೋಷಣೆ ರಹಿತ ಸಮಾಜವನ್ನು ಕಟ್ಟಿದರು  ಎಂದು ಹೇಳಿದರು.

ಎಸ್.ಯು. ಸಿ.ಐ (ಸಿ) ಪಕ್ಷದ ಸ್ಥಳೀಯ ಕಾರ್ಯದರ್ಶಿಗಳಾದ ಗಣಪತ್ ರಾವ್ ಕೆ. ಮಾನೆ ರವರು ಲೆನಿನ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು. ನಂತರ ಮಾತನಾಡುತ್ತಾ, ಭಾರತದಲ್ಲಿ ಕೂಡ ಮಾರ್ಕ್ಸವಾದದ ಆದರದ ಮೇಲೆ ದುಡಿಯು ವರ್ಗದ ವಿಮುಕಿಗಾಗ್ತಿ ಬಂಡವಾಳ ಶಾಹಿ ವಿರೋಧಿ ಸಮಜವಾದಿ ಕ್ರಾಂತಿಯನ್ನು ನೆರವೇರಿಸಲು ಸಜ್ಜಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾದ ರಾಘವೇಂದ್ರ ಎಂ.ಜಿ. ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪಕ್ಷದ ಸದಸ್ಯರಾದ ಜಗನ್ನಾಥ ಎಸ್.ಎಚ್. ರಾಜೇಂದ್ರ ಅತನೂರು, ಗುಂಡಮ್ಮಾ ಮಡಿವಾಳ, ಸಿದ್ದು ಚೌಧರಿ, ತುಳಜಾರಾಮ ಎನ್.ಕೆ. ನೀಲಕಂಠ ಹುಲಿ, ತಿಮ್ಮಯ್ಯ ಬಿ. ಮಾನೆ, ರಘು ಪವರ್, ಶ್ರೀನಿವಾಸ ರಮೇಶ ಡಿ. ಕಾರ್ಯಕರ್ತರು ಭಾಗವಹಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here