ಒಬ್ಬ ವ್ಯಕ್ತಿಯ ಹುಟ್ಟು ಮತ್ತು ಸಾವು ಮುಖ್ಯವಲ್ಲ: ಕೋಬಾಳ

0
9

ಶಹಾಬಾದ:ಒಬ್ಬ ವ್ಯಕ್ತಿಯ ಹುಟ್ಟು ಮತ್ತು ಸಾವು ಮುಖ್ಯವಲ್ಲ.ಅವರು ಮಾಡಿದ ಸತ್ಕರ್ಮಗಳೇ ಶಾಶ್ವತವಾಗಿ ನಾಡಿನಲ್ಲೆಡೆ ನೆಲೆಯೂರುತ್ತವೆ ಎಂಬುದಕ್ಕೆ ತುಮಕೂರಿನ ಡಾ.ಶಿವಕುಮಾರ ಸ್ವಾಮೀಜಿಯವರೇ ಸಾಕ್ಷಿ ಎಂದು ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಹೇಳಿದರು.

ಅವರು ಶುಕ್ರವಾರ ನಗರದ ವೀರಶೈವ ಸಮಾಜದ ವತಿಯಿಂದ ನಗರದ ಶರಣಬಸವೇಶ್ವರ ದೇವಾಸ್ಥಾನದಲ್ಲಿ ಆಯೋಜಿಸಲಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಎಪ್ರಿಲ್ ಒಂದರಂದು ಮೂರ್ಖರ ದಿನ ಎಂದು ಆಚರಿಸುತ್ತೆವೆ.ಆದರೆ ಅದೇ ದಿನದಂದು ಹುಟ್ಟಿದ ಶ್ರೀಗಳು ತಮ್ಮ ಸತ್ಯ ಶುದ್ಧಕಾರ್ಯ ಪ್ರಜ್ಞೆ ಹಾಗೂ ನಿಷ್ಕಾಮ ಭಾವದಿಂದ ಮೂರ್ಖರ ದಿನವನ್ನು ಸತತ ಪರಿಶ್ರಮ, ಅಧ್ಯ್ಯಯನ ಮಾಡಿದರೇ ಮೂರ್ಖ ದಿನದ ಬದಲಾಗಿ ಜ್ಞಾನಿಗಳ ದಿನವನ್ನಾಗಿ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.ಯಾರಲ್ಲಿ ಬಸವಣ್ಣನವರ ತತ್ವ ಅನುಷ್ಠಾನಗೊಂಡಿರುತ್ತದೆಯೋ, ಅವರಲ್ಲಿ ಮೂಡನಂಭಿಕೆ, ಅಂಧಶ್ರದ್ದೆಗಳು ಎಂದಿಗೂ ಮನೆ ಮಾಡುವುದಿಲ್ಲ ಎಂಬುದಕ್ಕೆ ಶ್ರೀಗಳೇ ಉದಾಹರಣೆ ಎಂದರು.

ಶಿವಕುಮಾರ ಇಂಗಿನಶೆಟ್ಟಿ ಮಾತನಾಡಿ, ಇಂದಿಗೂ ಜನರಲ್ಲಿ ಏನಾದರೂ ಕಾವಿಗೆ ಬೆಲೆ ಮತ್ತು ಖದರ್ ಇದಿದ್ದೆಯಾದರೆ ಅದು ಶಿವಕುಮಾರ ಸ್ವಾಮೀಜಿಯಂತವರಿಂದ.ಅವರು ಯಾವುದೇ ಜಾತಿ-ಭೇಧವಿಲ್ಲದೇ ಹನ್ನೆರಡನೇಯ ಶತಮಾನದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಾದಿ ಶರಣರ ವಿಚಾಧಾರೆ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಿದ ಮಹಾಶಿವಯೋಗಿಗಳು ಎಂಬ ಖ್ಯಾತಿಗೆ ಪಾತ್ರರಾದವರು.ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಿಗಳೆಂಬ ಪ್ರೀತಿಯ ಅಭಿಮಾನ ಪಡೆದಿದ್ದಾರೆ ಎಂದರು.

ರಾಜಶೇಖರ ಘಂಟಿಮಠ, ಶರಣಯ್ಯಸ್ವಾಮಿ, ಅಣವೀರ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ರಾಜು ಬೆಳಗುಂಪಿ, ಶರಣು ಜೇರಟಗಿ, ಶಂಭುಲಿಂಗ ಬುಳ್ಳಾ, ಸಿದ್ದೇಶ್ವರ ವಸ್ತ್ರದ್, ಮನೋಹರ್ ಮಾಟನಳ್ಳಿ, ಶರಣಯ್ಯ .ಎಮ್.ಆರ್, ಶಂಕರ ಕುಂಬಾರ, ಸಿದ್ರಾಮಪ್ಪ ಬೊಮ್ಮನಳ್ಳಿ,ರಾಜು ಕೋಬಾಳ, ಅರುಣ ಪಟ್ಟಣಕರ್,ಶಿವಾನಂದ ಪಾಟೀಲ, ಬಸವರಾಜ ಸಾತ್ಯಾಳ ಸೇರಿದಂರೆ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here