ಅಂಬಿಗರ ಚೌಡಯ್ಯ, ಡಾ.ಶಿವಕುಮಾರ ಸ್ವಾಮೀಜಿ ಮಹಾನ್ ಚೇತನ ಶಕ್ತಿ: ಅಂಜಲಿ ಗಿರೀಶ ಕಂಬಾನೂರ

0
23

ಶಹಾಬಾದ: :ಸಾಮಾಜಿಕ ಸಮಾನತೆಗಾಗಿ ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾನ್ ಮಾನವತಾವಾದಿ ನಿಜಶರಣ ಅಂಬಿಗರ ಚೌಡಯ್ಯ ನವರಾದರೇ, ಕಾವಿಗೆ ಬೆಲೆ, ಪೀಠಕ್ಕೆ ಗೌರವ, ಕ್ಷೇತ್ರಕ್ಕೆ ವಿಶ್ವ ಮನ್ನಣೆ ತಂದು ಕೊಟ್ಟ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮಹಾನ್ ಚೇತನ ಶಕ್ತಿಯಾಗಿದ್ದರು ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಶುಕ್ರವಾರ ನಗರಸಭೆಯಲ್ಲಿ ಆಯೋಜಿಸಲಾದ ಅಂಬಿಗರ ಚೌಡಯ್ಯ ಜಯಂತಿ ಹಾಗೂ ದಾಸೋಹ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ನಿಜಶರಣ ಅಂಬಿಗರ ಚೌಡಯ್ಯನವರ ಮೌಲ್ಯಗಳು ಸಾರ್ವಕಾಲಿಕ. ಅವುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿನ ಅಂಧಶ್ರದ್ಧೆ, ಶಿಕ್ಷಣದ ಕೊರತೆ, ಮೂಢನಂಬಿಕೆಗಳನ್ನು ನೀಗಿಸಬಹುದು. ೧೨ ನೇ ಶತಮಾನದಲ್ಲಿ ಸಮಾಜದಲ್ಲಿ ಡಾಂಬಿಕತನ, ಕಂದಾಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಿ ವಚನ ಸಾಹಿತ್ಯಗಳ ಮೂಲಕ ಅಂಬಿಗರ ಚೌಡಯ್ಯನವರು ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ಹೇಳಿದರು. ಅವರ ಪುಣ್ಯತಿಥಿ ದಿನವನ್ನು ದಾಸೋಹ ದಿನವಾಗಿ ಅಚರಿಸಲು ಆದೇಶಿರುವುದಕ್ಕೆ ಸಂತೋಷದಾಯಕ.ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಿಗಳೆಂಬ ಪ್ರೀತಿಯ ಅಭಿಮಾನ ಪಡೆದಿದ್ದಾರೆ.ಅವರಿಗೆ ನಮ್ಮ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ತಿಪ್ಪಣ್ಣ ನಾಟೇಕಾರ, ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ,ಡಾ.ರಶೀದ್ ಮರ್ಚಂಟ್,ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ,ನಾಗರಾಜ ಮೇಲಗಿರಿ, ಹಾಷಮ್ ಖಾನ,ನಿಂಗಣ್ಣ ಹುಳಗೋಳಕರ್,ತಿಪ್ಪಣ್ಣ ನಾಟೇಕಾರ, ಶರಣು ಪಗಲಾಪೂರ, ನಗರಸಭೆ ಸದಸ್ಯರಾದ ಡಾ.ಅಹ್ಮದ್ ಪಟೇಲ್, ಸೂರ್ಯಕಾಂತ ಕೋಬಾಳ, ಪಾರ್ವತಿ ಪವಾರ, ಸಾಬೇರಾ ಬೇಗಂ, ದೇವೆಂದ್ರಪ್ಪ ಯಲಗೋಡಕರ್, ಶಿವಕುಮಾರ ತಳವಾರ,ಕಾಶಣ್ಣ ಚನ್ನೂರ್,ಸದಾನಂದ ಕುಂಬಾರ, ಪರಮಾನಂದ ಯಲಗೋಡಕರ್, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಜೆಟ್ಟೂರ್, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here