ಕಲಬುರಗಿ: ನಗರದ ಬಿದ್ದಾಪೂರ ಕಾಲೋನಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ.ಟ್ರಸ್ಟ್ ಕಲಬುರಗಿ ವತಿಯಿಂದ ಕಾಮನ್ ಸರ್ವಿಸ್ ಸೆಂಟರ್‌ನ್ನು ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಉದ್ಘಾಟಿಸಿದರು.
ನಂತರ ಮಾತಾನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಅವರು ಗ್ರಾಮ ಗ್ರಾಮದಲ್ಲಿರುವ ಬಡವರಕಣ್ಣೀರನ ಆಶಾಕಿರಣವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಜನಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಮ ತಲುಪುವಂತೆ ಗ್ರಾಮ ಮಟ್ಟದಲ್ಲಿ ಕಾಮನ್ ಸರ್ವಿಸ್ ಸೆಂಟರ್‌ಗಳನ್ನು ತೆರೆಯುವುದರ ಮೂಲಕ ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಜಿಲ್ಲಾ ಮಟ್ಟದಲ್ಲಿ ೧೧೭ ಕೇಂದ್ರಗಳು ಇವೆ ಎಂದರು.
ಧರ್ಮಸ್ಥಳದಿಂದ ಬಂದಂತಹ ಕಾರ್ಯಕ್ರಮಗಳಿಗೆ ತಾವುಗಳೂ ಪೂರ್ಣರೀತಿಯ ಸಹಕಾರ ನೀಡುವುದರೊಂದಿಗೆ ಸ್ವ-ಸಹಾಯ ಸಂಘಗಳಲ್ಲಿ ಸ್ವ-ಉದ್ಯೋಗಕ್ಕೆ ಪೂರಕವಾಗಿ ಸಾಲವನ್ನು ಪಡೆದುಅದರಿಂದ ಅಭಿವೃದ್ಧಿಯಾಗಿ ಸಾಲದ ಮರುಪಾವತಿಯನ್ನು ವಾರ ವಾರದಲ್ಲಿ ಪಾವತಿಸಿರೊಂದಿಗೆ ನಮ್ಮ ಜನರು ಆರ್ಥಿಕ ಶಿಸ್ತುನ್ನು ರೂಢಿಸಿಕೊಳ್ಳಬೇಕೆಂದು ಎಂದರು.
ಈ ಕಾರ್ಯಕ್ರಮದಲ್ಲಿ ಇ-ಶ್ರಮ್‌ಕಾರ್ಡ ಲ್ಯಾಪಟಾಪ, ಆರೋಗ್ಯರಕ್ಷಾ ಸೌಲಭ್ಯ ಪ್ರಗತಿರಕ್ಷಾ ಕವಚ ಸೌಲಭ್ಯ ಹಿರಾಪೂರಗ್ರಾಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ಮಂಜೂರಾದ ಶುದ್ಧ ಕುಡಿಯುವ ನೀರಿನ ಘಟಕದ ಮಂಜೂರಾತಿ ಪತ್ರವನ್ನು ಸ್ವ-ಸಹಾಯ ಸಂಘದ ಸದಸ್ಯರಿಗೆ ಶಾಸಕ ರೇವೂರ ಅವರು ವಿತರಿಸಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಅವರು ಕರ್ನಾಟಕ ರಾಜ್ಯದಲ್ಲಿ ಯೋಜನೆ ವತಿಯಿಂದ ೬೦೦೦ ಕಾಮನ ಸರ್ವಿಸ ಸೆಂಟರ್ ತೆರೆಯುತ್ತಿದ್ದು ಕಲಬುರಗಿ ಜಿಲ್ಲೆಯಲ್ಲಿ ಜನೇವರಿ ೨೧ ರಿಂದ ೨೫ ರವರೆಗೆ ಜಿಲ್ಲೆಯ ೧೧೭ ಗ್ರಾಮದಲ್ಲಿ ಸಿ.ಎಸ್.ಸಿ ಕೇಂದ್ರಗಳನ್ನು ತೆರೆದು ಈ ಕೇಂದ್ರಗಳಲ್ಲಿ ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರರವರೆಗೆ, ಆಧಾರ ಕಾರ್ಡನಿಂದ ರೇಷನ್ ಕಾರ್ಡರವರೆಗೆ, ಆಯುಷ್ಮಾನ ಕಾರ್ಡದಿಂದ ಇ-ಶ್ರಮ್ ಕಾರ್ಡರವರೆಗೆ ೭೦೦ ರಿಂದ ೧೦೦೦ ಸೇವೆಗಳನ್ನು ಈ ಕೇಂದ್ರಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಸೌಲಭ್ಯ ನೀಡಲಾಗುತ್ತದೆ. ಪ್ರಥಮದಲ್ಲಿ ಜಿಲ್ಲೆಯಲ್ಲಿ ೧೧೦೦೦ ಸಾವಿರ ಇ-ಶ್ರಮ ಕಾರ್ಡನ್ನು ಉಚಿತವಾಗಿ ಮಾಡಿಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜು ದೇವದುರ್ಗ, ಶ್ರೀನಿವಾಸ ದೇಶಾಯಿ, ಅನೀಲಕುಮಾರ ಡಾಂಗೆ, ಕಮಲಾಪೂರ ತಾಲೂಕಿನ ಕ್ಷೇತ್ರಯೋಜನಾಧಿಕಾರಿ ಕಲ್ಲನಗೌಡ.ಎಸ್ ಕಲಬುರಗಿ ಯೋಜನಾಧಿಕಾರಿಗಳಾದ ಮಾರುತಿಗೌಡ, ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿ ಕೃಷ್ಣಪ್ಪ, ಮೇಲ್ವಿಚಾರಕರಾದ ಗಿರಿಜಾ, ವಿರೇಶ, ಸಿದ್ಧರಾಮ, ಚಂದ್ರಶೇಖರ, ಸಿ.ಎಸ್.ಸಿ ನೋಡಲ್ ಅಧಿಕಾರಿ ರಾಧಾಶ್ರೀ, ವಿ.ಎಲ್.ಇ ಶೀವಲೀಲಾ, ಸೇವಾ ಪ್ರತಿನಿಧಿಗಳು ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.