ಸುರಪುರ:ವಿಶ್ವಕರ್ಮ ಸಮಾಜ ಅಜೇಂದ್ರ ಮಹಾಸ್ವಾಮಿ ಸನ್ಮಾನ

0
13

ಸುರಪುರ: ನಗರದ ಕಬಡಗೆರೆ ದಲ್ಲಿರುವ ಜಗನ್ಮಾತೆ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಶಹಪುರ ಏಕದಂಡಗಿ ಮಠದ ಶ್ರೀ ಅಜೆಂದ್ರ ಮಹಾಸ್ವಾಮಿಗಳ ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸುರಪುರ ವಿಶ್ವರ‍್ಮ ಸಮಾಜದ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು.

ಕರ‍್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶಹಪುರ ಏಕದಂಡಗಿ ಮಠದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಮಾತನಾಡಿ ಬ್ರಹ್ಮಲಿಂಗ ದೇವಿಂದ್ರ ಮಹಾಸ್ವಾಮಿಯವರ ಹಿರಿಯ ಪುತ್ರರಾದ ಅಜೇಂದ್ರ ಮಹಾಸ್ವಾಮಿಗಳು ಕಷ್ಟದ ಪರಿಸ್ಥಿತಿಯಲ್ಲಿ ಭಕ್ತರು ನೀಡಿದ ಕಾಣಿಕೆ ಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿ ಹುಮನಾಬಾದ ಪದವಿಪರ‍್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪ್ರಿನ್ಸಿಪಾಲರಾಗಿ ಕರ‍್ಯನರ‍್ವಹಿಸಿ ಸತತ ೩೮ ರ‍್ಷಗಳ ಕಾಲ ಸರಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದಾರೆ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು ಎಂದು ಕರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ನಂತರ ಅಜೇಂದ್ರ ಮಹಾಸ್ವಾಮೀಜಿಯವರಿಗೆ ವಿಶ್ವಕರ್ಮ ಸಮಾಜದಿಂದ ಅನೇಕ ಮುಖಂಡರು ಸನ್ಮಾನಿಸಿ ಗೌರವಿಸಿದರು.ಅಲ್ಲದೆ ಸಮಾಜದ ಅನೇಕ ಜನರು ಕೂಡ ವೈಯಕ್ತಿಕವಾಗಿ ಅಜೇಂದ್ರ ಮಹಾಸ್ವಾಮೀಜಿ ಹಾಗು ಕಾಳಹಸ್ತೇಂದ್ರ ಮಹಾಸ್ವಾಮೀಜಿಯವರನ್ನು ಸನ್ಮಾನಿಸಿ ಗೌರವಿಸಿದರು.

ಈ ಕರ‍್ಯಕ್ರಮದಲ್ಲಿ ವಿಶ್ವರ‍್ಮ ಸಮಾಜದ ಮುಖಂಡರಾದ ಮಹೇಶ್ ಕುಮಾರ್ ಶಾರದಹಳ್ಳಿ ಪ್ರಭು ಚನ್ನಪಟ್ಟಣ ಅಶೋಕ್ ಗೋಗಿ ಮಹೇಶ್ ಕುಂಟೋಜಿ ಮನೋಹರ್ ಕುಂಟೋಜಿ ವಕೀಲರು, ರಾಜು ನಿಡಗುಂದಿ, ಸೇರಿದಂತೆ ಶಹಾಪುರ ಮತ್ತು ಸುರಪುರ ವಿಶ್ವರ‍್ಮ ಸಮಾಜದ ಮಹಿಳಾ ಮುಖಂಡರು ಸೇರಿ ಕರ‍್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here