ಹಾವೇರಿಯಲ್ಲಿ ಹ್ಯಾಂಡ್‌ ಗ್ರಾನೇಡ್ ಪತ್ತೆ : ಆತಂಕ ಸೃಷ್ಟಿ

0
13

ಹಾವೇರಿ: ಹಾವೇರಿ ಜಿಲ್ಲೆಯ ನೇತಾಜಿ ನಗರದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಹ್ಯಾಂಡ್ ಗ್ರೆನೇಡನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ. ನಗರದ ಹರೀಶ್​ ಮೆಸ್​ ಬಳಿ ಅನುಮಾನಾಸ್ಪದ ರೀತಿಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿತ್ತು.

ವಿಷಯ ತಿಳಿದು ಹುಬ್ಬಳ್ಳಿಯ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗ್ರೆನೇಡ್​​ನ್ನು ವಶಪಡಿಸಿಕೊಂಡಿತ್ತು. ಅಲ್ಲದೆ, ಆ ಸ್ಥಳದಲ್ಲಿ ಮತ್ತೆ ಎಲ್ಲೆಯಾದರೂ ಇಂತಹ ವಸ್ತುಗಳಿವೆಯೇ ಎಂದು ಪರಿಶೀಲನೆ ನಡೆಸಿದರು. ಆದರೆ, ಎಲ್ಲಿಯೂ ಪತ್ತೆಯಾಗಲಿಲ್ಲ. ಬಳಿಕ ವಶಕ್ಕೆ ಪಡೆದಿದ್ದ ಗ್ರೆನೇಡ್ ನ್ನು ನಗರದ ಹೊರವಲಯಕ್ಕೆ ಸಾಗಿಸಿ ಸ್ಫೋಟಗೊಳಿಸುವಲ್ಲಿ ಯಶಸ್ವಿಯಾದರು.

Contact Your\'s Advertisement; 9902492681

ಗುರುವಾರ ಸಂಜೆ ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಹಿಂದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಳಕೆ ಮಾಡುತ್ತಿದ್ದ ಹ್ಯಾಂಡ್ ಗ್ರೆನೇಡ್ ರೀತಿಯ ವಸ್ತು ಪತ್ತೆಯಾಗಿತ್ತು. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here