ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಚಾರಗಳು

0
15

ನೇತಾಜಿ ಅವರ ಪ್ರಮುಖ ಸೂಕ್ತಿಗಳು: “ಸ್ನೇಹಿತರೇ, ನಾನು ನಿಮಗೆ ಪ್ರಮಾಣ ಮಾಡುತ್ತೇನೆ. ನೀವು ಸೋಲಲಿ ಅಥವಾ ಗೆಲ್ಲಲಿ, ದುಃಖದಲ್ಲಿರಲಿ ಅಥವಾ ಸಂತೋಷದಲ್ಲಿರಲಿ, ಯಾವಾಗಲೂ ನಾನು ನಿಮ್ಮ ಒಡನಾಡಿಯಾಗಿರುತ್ತೇನೆ.

ಇಂದು ನಾನು ನಿಮಗೆ ಹಸಿವು, ಬಾಯಾರಿಕೆ, ಸಂಕಷ್ಟ ಯಾತನಾಮಯ ಯಾತ್ರೆ ಮತ್ತು ಸಾವು- ಈ ಆಶ್ವಾಸನೆಗಳನ್ನು ಮಾತ್ರ ನೀಡಬಲ್ಲೆ. ಯಾರು ನಮ್ಮ ಸ್ವತಂತ್ರ ಭಾರತವನ್ನು ನೋಡುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಭಾರತ ಸ್ವತಂತ್ರವಾಗುವುದು ಮುಖ್ಯ. ಅದಕ್ಕಾಗಿ ಎಂತಹ ತ್ಯಾಗಕ್ಕಾದರೂ ನಾವು ಸಿದ್ಧರಿರಬೇಕು.’

Contact Your\'s Advertisement; 9902492681

ಅನ್ಯಾಯವನ್ನು ಪ್ರತಿಭಟಿಸುವುದನ್ನೇ ನೀವು ರಾಜಕೀಯ ಎಂದು ಕರೆಯುವುದಾದರೆ ಈ ದೇಶದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ರಾಜಕೀಯ ಸೇರುವುದು ಬಿಟ್ಟು ಬೇರೆ ದಾರಿಯೇ ಇಲ್ಲ”

“ಧರ್ಮವನ್ನು ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿಡಬೇಕು. ಧರ್ಮ ವ್ಯಕ್ತಿಯೊಬ್ಬರ ವೈಯಕ್ತಿಕ ವಿಷಯವಾಗಿರಬೇಕು. ಮಾನವನಾಗಿ ಯಾವುದೇ ಒಬ್ಬ ವ್ಯಕ್ತಿಗೂ ತನ್ನಿಚ್ಛೆಯ ಯಾವುದೇ ಧರ್ಮವನ್ನು ಅನುಸರಿಸಲು ಸಂಪೂರ್ಣ ಸ್ವಾತಂತ್ರ್ಯ ಇರಬೇಕು.

“ಅನ್ಯಾಯ, ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವುದಕ್ಕಿಂತ ದೊಡ್ಡ ಆಪರಾಧ ಮತ್ತೊಂದಿಲ್ಲ”

» ನೇತಾಜಿ ಸುಭಾಷ್ ಚಂದ್ರ ಬೋಸ್
ಹಿಂದೂ ಮಹಾಸಭಾವು ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ಕೈಯಲ್ಲಿ ತ್ರಿಶೂಲ ಕೊಟ್ಟು ಮತವನ್ನು ಯಾಚಿಸಲು ಕಳುಹಿಸುತ್ತಿದೆ. ತ್ರಿಶೂಲ ಮತ್ತು ಕೇಸರಿ ಬಟ್ಟೆಯನ್ನು ನೋಡುತ್ತಲೆ ಹಿಂದೂಗಳು ಭಕ್ತಿಯಿಂದ ತಲೆ ಬಾಗುತ್ತಾರೆ. ಧರ್ಮದ ಕುರಿತಾದ ಜನರ ಭಕ್ತಿಯನ್ನು ದುರುಪಯೋಗಪಡಿಸಿಕೊಂಡು ಹಿಂದೂ ಮಹಾ ಸಭಾವು ರಾಜಕೀಯದ ಭೂಮಿಕೆಗೆ ಕಾಅಡುತ್ತಿದೆ. ಅದನ್ನು ವಿರೋಧಿಸುವುದು ಹಿಂದೂಗಳ ಕರ್ತವ್ಯವಾಗಿದೆ…… ಅಂತಹ ದ್ರೋಹಿಗಳನ್ನು ರಾಷ್ಟ್ರೀಯ ಜೀವನದಿಂದ ಗಡಿಪಾರು ಮಾಡಿ, ಅವರ ಮಾತುಗಳಿಗೆ ಕಿವಿಗೊಡಬೇಡಿ.

ನಮ್ಮ ಸಮಾಜದಲ್ಲಿ ಆಚರಣೆಯಲ್ಲಿರುವ ಸಾಂಪ್ರದಾಯಿಕ ವಿವಾಹಗಳನ್ನು ನಾನು ವಿರೋಧಿಸುತ್ತೇನೆ.ತಮ್ಮ ಜೀವನ ಸಂಗಾತಿಗಳನ್ನು ಆರಿಸಿಕೊಳ್ಳುವ ವಿಷಯದಲ್ಲಿ ಸ್ತ್ರೀ ಪುರುಷರಿಬ್ಬರಿಗೂ ಸಮಗ್ರ ಸ್ವಾತಂತ್ರ್ಯವಿರಬೇಕು. ಸ್ನೇಹ ಹಾಗೂ ಆತ್ಮೀಯತೆಗಳ ಸ್ವಲ್ಪ ಕಾಲಾನಂತರ ಅವರು ವಿವಾಹವಾಗಬೇಕೆಂದು ನಾನು ಭಾವಿಸುತ್ತೇನೆ”

“ನಾನು ಸಣ್ಣವನಾಗಿದ್ದಾಗ ನಮ್ಮ ದೇಶದಿಂದ ಬ್ರಿಷರನ್ನು ಹೊಡೆದೋಡಿಸುವುದೇ ನನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದೆ. ಆದರೆ ನಂತರ ಆಳವಾಗಿ ಯೋಚಿಸಿದಾಗ ನನಗೆ ಮನವರಿಕೆಯಾದುದೆಂದರೆ, ಕೇವಲ ಬ್ರಷರನ್ನು ಹೊರದೂಡುವುದರಿಂದ ನನ್ನ ಕರ್ತವ್ಯ ಮುಗಿಯುವುದಿಲ್ಲ. ಭಾರತದಲ್ಲ ಒಂದು ಹೊಸ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಲು ಇನ್ನೊಂದು ಕ್ರಾಂತಿಯ ಅವಶ್ಯಕತೆಯಿದೆ

“ನಾನು ಲಕ್ಷಾಂತರ ಭಾರತೀಯರೊಟ್ಟಿಗೆ ನಿಲ್ಲುತ್ತೇನೆ ಹಾಗೂ ಅವರ ವಿಮುಕ್ತಿಗಾಗಿ ನನ್ನ ಜೀವವನ್ನೆ ಕೊಡುತ್ತೇನೆ. ಸತ್ಯಕ್ಕೇನಾದರೂ ಬೆಲೆ ಇದ್ದಲ್ಲಿ ಈ ದೇಶದ ಜನ ಒಂದು ದಿನ ನನ್ನ ಹೃದಯದ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ”

ಹಿಂದೂ ಮತ್ತು ಮುಸ್ಲಿಮರ ಹಿತಾಸಕ್ತಿಗಳು ಬೇರೆ ಬೇರೆ ಎನ್ನುದಕ್ಕಿಂತ ದೊಡ್ಡ ಸುಳ್ಳು ಮತ್ತೊಂದಿಲ್ಲ. ಹಸಿವು, ನಿರುದ್ಯೋಗ, ಅನಕ್ಷರತೆ, ಇವೇ ನಮ್ಮೆಲ್ಲರ ಮೂಲಭೂತ ಸಮಸ್ಯೆಗಳು. ಹಾಗೂ ಈ ಸಮಸ್ಯೆಗಳನ್ನು ಕುರಿತಂತೆ ಹಿಂದೂ ಮತ್ತು ಮುಸ್ಲಿಮರ ಹಿತಾಸಕ್ತಿ ಒಂದೇ.

ಧರ್ಮವನ್ನು ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿಡಬೇಕು. ಧರ್ಮ ವ್ಯಕ್ತಿಯೊಬ್ಬರ ವೈಯಕ್ತಿಕ ವಿಷಯವಾಗಿ ಇರಬೇಕು. ಮನುಷ್ಯನೊಬ್ಬನಿಗೆ ತನ್ನಿಚ್ಛೆಯ ಯಾವುದೇ ಧರ್ಮವನ್ನು ಅನುಸರಿಸಲು ಸಂಪೂರ್ಣ ಸ್ವಾತಂತ್ರ್ಯ ಇರಬೇಕು.ಆದರೆ ರಾಜಕೀಯವು, ಧರ್ಮ ಅಥವಾ ಯಾವುದೇ ಅಲೌಕಿಕ ಪರಿಕಲ್ಪನೆಗಳಿಂದ ನಿರ್ದೇಶಿತವಾಗಕೂಡದು. ಆರ್ಥಿಕ, ರಾಜಕೀಯ ಮತ್ತು ವೈಜ್ಞಾನಿಕ ವಿವೇಚನೆಗಳೇ ರಾಜಕೀಯವನ್ನು ನಿರ್ದೇಶಿಸತಕ್ಕದ್ದು.

ತ್ಯಾಗವೆಂದರೆ ಬಡತನ, ಯಾತನೆ, ಕಠೋರ ಕೆಲಸಗಳು ಅಲ್ಲದೇ ಇನ್ನಿತರ ಸಂಕಷ್ಟಗಳೆಂಬುದನ್ನು ವಿವರಿಸಬೇಕಿಲ್ಲ. ಆದರೆ ಅದನ್ನು ಅರಿತೇ ಉದ್ದೇಶಪೂರ್ವಕವಾಗಿ ತ್ಯಾಗವನ್ನು ಮಾಡಬೇಕು.”-ನೇತಾಜಿ ಸುಭಾಷ್ ಚಂದ್ರ ಬೋಸ್

ರೈತರು ಒಂದಾಗಬೇಕು. ಇಲ್ಲವಾದಲ್ಲಿ ನಿಮ್ಮ ಹಕ್ಕುಗಳಿಗಾಗಿ ಕೇಳುವ ಹಕ್ಕೊತ್ತಾಯಗಳನ್ನು ಒಪ್ಪಿಕೊಳ್ಳುವುದಿಲ್ಲ. ನಮಗೆ ಆಹಾರ ಬೆಳೆಯುವವರು ಹಸಿವಿನಿಂದ ಸಾಯ ಬೇಕಾಗಿರುವುದು ದುರಂತ. ಇಂತಹ ಸ್ಥಿತಿಯಿಂದ ಹೊರಬರಬೇಕೆಂದರೆ ರೈತರು ತಮ್ಮೊಳಗೆ ಒಕ್ಕೂಟ ರಂಗವನ್ನು ಕಟ್ಟಿಕೊಳ್ಳಬೇಕು.

ಕೇವಲ ಪಠ್ಯಪುಸ್ತಕ ಓದುವುದು ಅಥವಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೇ ವಿದ್ಯಾರ್ಥಿ ಜೀವನದ ಪರಮೋಚ್ಛ ಗುರಿಯೆಂದು ಹೇಳಲು ಹೇಗೆ ಸಾಧ್ಯವಾದೀತು? ಇವು ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಬಳವನ್ನೋ ಅಥವಾ ಚಿನ್ನದ ಪದಕವನ್ನೋ ಗಳಿಸಿಕೊಡಬಹುದೇ ಹೊರತು ಅವರನ್ನು ಪರಿಪೂರ್ಣ ಮನುಷ್ಯರನ್ನಾಗಿ ಮಾಡಲಾರವು.

“ನನಗೆ ಒಂದು ಹನಿ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಭಾರತವನ್ನು ನೀಡುತ್ತೇನೆ. ಸ್ವಾತಂತ್ರ್ಯ ಬೇಡಿ ಪಡೆಯುವ ವಸ್ತುವಲ್ಲ, ಹೋರಾಡಿ ಪಡೆಯಬೇಕು”

“ನಮ್ಮ ಹೋರಾಟ ಕೇವಲ ಬ್ರಿಟಿಷ್ ಸಾಮ್ರಾಜ್ಯವಾದದ ವಿರುದ್ಧವಲ್ಲ, ಅದು ವಿಶ್ವ ಬಂಡವಾಳವಾದದ ವಿರುದ್ಧವೂ ಕೂಡ ಆಗಿದೆ”

ಹರಿಪುರ ಕಾಂಗ್ರೆಸ್‌ನಲ್ಲಿ, ನೇತಾಜಿ ಕಾಂಗ್ರೆಸ್ ಅಧ್ಯಕ್ಷರಾಗಿ ಘೋಷಿಸಿದ್ದೇನೆಂದರೆ.

1.ಕಾಂಗ್ರೆಸ್‌ನ ಆದ್ಯ ಕರ್ತವ್ಯವೇನೆಂದರೆ ದೇಶದ ಸಂಪೂರ್ಣ ಸ್ವಾತಂತ್ರ್ಯ ಸಾಧನೆ, ನಂತರದ ಗುರಿ, ಸಮಾಜವಾದದ ಸ್ಥಾಪನೆ.
2.ಕಾರ್ಮಿಕರನ್ನು ಮತ್ತು ರೈತರನ್ನು ಸ್ವಾತಂತ್ರ್ಯ ಹೋರಾಟದ ಮುನ್ನೆಲೆಗೆ ತರತಕ್ಕದ್ದು
3.ಜಮೀನುದಾರಿ (ಊಳಿಗಮಾನ್ಯ ಪದ್ಧತಿಗೆ ಕೊನೆಹಾಕತಕ್ಕದ್ದು.

ಕೇವಲ ರಾಜಕೀಯ ಬಂಧನವಲ್ಲದೆ, ಎಲ್ಲಾ ರೀತಿಯ ಬಂಧನಗಳಿಂದಲೂ ಜನರನ್ನು ವಿಮುಕ್ತಿಗೊಳಿಸುವುದು ನಮ್ಮ ಗುರಿ ಎಂದು ನಾವು ಘೋಷಿಸಬೇಕಿದೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮವು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬಂಧನಗಳೆಂಬ ಮೂರು ರೀತಿಯ ದಾಸ್ಯಗಳಿಂದ ಜನರನ್ನು ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ.

ಈ ಎಲ್ಲಾ ಬಂಧನದ ಬೇಡಿಗಳು ಕಳಚಿದ ನಂತರ, ನಾವು ಸಮತಾವಾದದ ಬುನಾದಿಯ ಮೇಲೆ ಹೊಸ ಸಮಾಜವನ್ನು ಕಟ್ಟಲು ಮುಂದಾಗಬೇಕಾಗುತ್ತದೆ. ಸ್ವತಂತ್ರ ಮತ್ತು ವರ್ಗರಹಿತ ಸಮಾಜವನ್ನು ನಿರ್ಮಿಸುವುದೇ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮುಖ್ಯಗುರಿ.”

ಕ್ರಾಂತಿ ಚಿರಾಯುವಾಗಲಿ. ನೇತಾಜಿ ಕಂಡ ಸಮಾಜವಾದಿ ಸಮಾಜಕ್ಕಾಗಿ ನಾವೆಲ್ಲರೂ ಒಂದಾಗಿ ಹೋರಾಡೋಣ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here