ಚಿಂಚೋಳಿ: ಸುಲೇಪೇಟ ಗ್ರಾಮದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಎಸ್ಡಿಎಂಸಿ ಅಧ್ಯಕ್ಷೆ ಎಸ್ಡಿಎಂಸಿ ಅಧ್ಯಕ್ಷೆ ಗೌಸೀಯಾ ಸಾಲಂಪಾಶಾ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸರಕಾರ ಮಕ್ಕಳಿಗೋಸ್ಕರ ಬಿಸಿ ಊಟ, ಕ್ಷೀರಾ ಭಾಗ್ಯ ಸೇರಿದಂತೆ ಹತ್ತು ಹಲವಾರು ಯೋಜನೆಗಳು ಜಾರಿಗೆ ತಂದಿದೆ, ಮಕ್ಕಳು ಸರಕಾರದ ಸೌಕರ್ಯ ಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಕಿರ್ತಿ ತರಬೇಕು, ಸುಲೇಪೇಟ ಉರ್ದು ಪ್ರೌಢ ಶಾಲೆ ತಾಲೂಕಿನಲ್ಲಿ ಮಾದರಿ ಶಾಲೆ ಇದೆ ಎಲ್ಲಾ ಮಕ್ಕಳು ಒಳ್ಳಯರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಸುಲೇಪೇಟ ಉರ್ದು ಶಾಲೆ ರಾಜ್ಯಕ್ಕೆ ಮಾದರಿ ಶಾಲೆ ಆಗಬೇಕು ಎಂದು ಮಕ್ಕಳಿಗೆ ಶುಭಹರೈಸಿ ಕರೆ ನೀಡಿದರು.
ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಶಿಕ್ಷಕರ ಜೊತೆಗೂ ಕೈಜೋಡಿಸಿದಾಗ ಮಾತ್ರ ಮಕ್ಕಳು ಶಿಕ್ಷಣದಲ್ಲಿ ಅಭಿವೃದ್ಧಿಯಾಗಲು ಸಾಧ್ಯ ಕರೋನಾ ಸೋಂಕು ಹರಡದಂತೆ ಲಾಕ್ ಡೌನ್ ನಂತರ ಶಾಲೆ ಆರಂಭವಾಗಿವೆ. ಲಾಕಡೋನನಲ್ಲಿ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಮಕ್ಕಳು ವಿದ್ಯಾಭ್ಯಾಸ ವಂಚಿತರಾಗದಂತೆ ವಿದ್ಯಾಭ್ಯಾಸದ ಬಗ್ಗೆ ಎಲ್ಲಾ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಿದ್ದೇವೆ ಎಂದು ಶಾಲೆಯ ಮುಖ್ಯಗುರು ಈ ಸಂದರ್ಭದಲ್ಲಿ ಮಾತನಾಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕ್ಬರ ಸಾಬ ಗಡಿಕೇಶ್ವರ, ಮುಗು ಜೋಹಾರ ಖಾನಂ, ಫಿರ್ದೋಸ ಸಬಾ, ಫರೀದಾ ಬೇಗಂ, ಗೋವಿಂದ ಸಂಗೇದ, ಜೈಶ್ರೀ, ಮಹೇಶ ಇತರರು ಇದ್ದರು.