ಬೆಂಗಳೂರು: ಸ್ನೇಹ ಬುಕ್ ಹೌಸ್ ಬೆಂಗಳೂರು ಇವರು, ಆಯೋಜಿಸಿರುವ ಲೇಖಕ ಶಿಕ್ಷಣ ಪ್ರೇಮಿ ಕೆ.ಎಂ.ವಿಶ್ವನಾಥ ಮರತೂರ ಅವರು ಬರೆದಿರುವ ಎರಡು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚಗೆ ಬೆಂಗಳೂರಿನ ರಾಜಾಜಿನಗರದಲ್ಲಿ ನೆರವೇರಿತು. ಪುಸ್ತಕಗಳನ್ನು ನಿವೃತ್ತ ಶಿಕ್ಷಕಿಯಾದ ಸುಶೀಲಮ್ಮ ಲೋಕಾರ್ಪಣೆ ಮಾಡಿದರು.
ಪುಸ್ತಕಗಳ ಕುರಿತು ಮಾಜಿ ಶಿಕ್ಷಣ ಸಚಿವರಾದ ಸುರೇಶಕುಮಾರ .ಎಸ್. ಅವರು ಮಾತನಾಡಿ ಯುವ ಬರಹಗಾರು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲ್ಬುರ್ಗಿಯವರಾದ ಶಿಕ್ಷಣ ಪ್ರೇಮಿ ವಿಶ್ವನಾಥಮರತೂರ ರವರ ಎರಡು ಪುಸ್ತಕಗಳನ್ನು ಇಂದು ನಮ್ಮ ಮನೆಯ ಮುಂದೆಯೇ ಲೋಕಾರ್ಪಣೆ ಮಾಡಲಾಯಿತು. ಶ್ರೀಯುತರು ತರಗತಿ ಬೋಧನೆ, ಕಲಿಕೆ ಮತ್ತು ಬೋಧನೆಯಲ್ಲಿ ನೂತನ ಪ್ರಯೋಗಗಳ ಕುರಿತಂತೆ ನಿರಂತರ ಸಂಶೋಧನೆಯಲ್ಲಿ ತೊಡಗಿರುವುದು ಸಂತೋ?ದ ವಿಚಾರ. ಈ ಎರಡುಕೃತಿಗಳು ಬೋಧನೆಯಲ್ಲಿ ಶಿಕ್ಷಕರಿಗೆ ಅತ್ಯಂತ ಸಹಕಾರಿಯಾಗಲಿದೆ ಎಂದರು.
“ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ” ಕೃತಿಯು ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಗ್ರಹಿಕಾ ಶಕ್ತಿಯ ಆಧಾರದ ಮೇಲೆ ಬೋಧನೆಯಲ್ಲಿ ತೊಡಗಿಸಿಕೊಂಡಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಅಂಶಗಳನ್ನು ಒಳಗೊಂಡಿವೆ. ಕಳೆದ ಎರಡು ವರುಷದ ಹಿಂದೆ ಮರತೂರ ಅವರ ಒಂದು ಲೇಖನ ಅತ್ಯಂತ ಮೆಚ್ಚುಗೆಯಾಯಿತು, ಅದೇ ಟೈಟಲ್ ಇವತ್ತು ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಈ ಕೃತಿ ಶಿಕ್ಷಕರ ತರಗತಿ ಬೋದನೆಯನ್ನು ಸರಳಗೊಳಿಸುವಲ್ಲಿ ಸಹಾಯ ಮಾಡುತ್ತದೆ.
“ಪ್ರೇರಣಾ” ಕೃತಿಯು ಮಕ್ಕಳಿಗೆ ನೂತನ ವಿ?ಯಗಳನ್ನು ಕಲಿಯುವಲ್ಲಿ ಆಸಕ್ತಿ ಕೆರಳಿಸುವ ಪ್ರೇರಕ ಅಂಶಗಳನ್ನು ಒಳಗೊಂಡಿವೆ. ಇವತ್ತಿನ ಋಣಾತ್ಮಕ ಅಂಶಗಳ ಮಧ್ಯೆ ಧನಾತ್ಮಕ ವಿಚಾರಗಳನ್ನು ಹರಡುತ್ತಿರುವ ಈ ಪುಸ್ತಕವು ಎಲ್ಲರಿಗೂ ಪ್ರೇರಣೆ ನೀಡುವಂತಹ ವಿಚಾರ ಲಹರಿಯಿಂದ ಕೂಡಿದೆ.ಈ ಎರಡೂ ಕೃತಿಗಳನ್ನು ಸರಕಾರಿ ಶಾಲೆಯಲ್ಲಿ ಧೀರ್ಘ ಅವಧಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ನನ್ನ ಪೂಜ್ಯ ತಾಯಿಯವರ ಹಸ್ತದಿಂದಲೇ ಬಿಡುಗಡೆ ಮಾಡಬೇಕೆಂಬ ದೂರದ ಕಲ್ಬುರ್ಗಿಯಿಂದ ಬಂದ ವಿಶ್ವನಾಥ ಮರತೂರ ರ ಅಭಿಲಾ?ಯಂತೆ ಇಂದು ಈ ಸರಳ ಸಮಾರಂಭದಲ್ಲಿ ಕೃತಿಗಳನ್ನು ನನ್ನ ಪೂಜ್ಯ ತಾಯಿಯವರು ಬಿಡುಗಡೆ ಮಾಡಿದ್ದಾರೆ.ಈ ಎರಡು ಕೃತಿಗಳು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವ ನನ್ನ ಎಲ್ಲಾ ಶಿಕ್ಷಕ ಸ್ನೇಹಿತರಿಗೆ ಉಪಯುಕ್ತವಾಗಲಿ ಎಂದು ಹಾರೈಸುತ್ತೇನೆ. ಎಂದರು.
ಲೇಖಕರಾದ ಕೆ.ಎಂ.ವಿಶ್ವನಾಥ ಮರತೂರ ಮಾತನಾಡಿ, ಈ ಪುಸ್ತಕಗಳು ನನ್ನ ಶೈಕ್ಷಣಿಕ ಕ್ಷೇತ್ರದ ಅನುಭವಗಳನ್ನು ಒಳಗೊಂಡಿದ್ದು ಶಿಕ್ಷಕರು ಮಕ್ಕಳು ಹಾಗೂ ಸಮುದಾಯದೊಂದಿಗೆ ಬೆರತ ವಿಚಾರ ಲಹರಿಗಳಿವು. ನನಗೆ ಶಿಕ್ಷಕರೆಂದರೆ ಬಹಳ ಇಷ್ಟ, ಅವರು ತರಗತಿಯಲ್ಲಿ ಕ್ರೀಯಾಶೀಲರಾಗಿ ತೊಡಗಿಸಿಕೊಂಡಾಗ, ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ. ನಾವೆಲ್ಲರೂ ನಮ್ಮ ಮಕ್ಕಳು ಮೆಚ್ಚುವಂತಹ ಪಾಲಕರಾಗಿದ್ದೇವೆ, ಅದೇ ತರಹ ನಾವೆಲ್ಲರೂ ನಮ್ಮ ಮಕ್ಕಳು ಮೆಚ್ಚುವ ಶಿಕ್ಷಕರಾಗಬೇಕಾಗಿರುವುದು ಇಂದಿನ ತುರ್ತುಯಿದೆ ಎಂದರು.
ಸ್ನೇಹ ಬುಕ್ ಹೌಸ್ ನ ಪ್ರಕಾಶಕರಾದ ಕೆ.ಬಿ. ಪರಶಿವಪ್ಪ ಮಾತನಾಡಿ, ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ನಮ್ಮ ಪ್ರಕಾಶನ ಕೆಲಸ ಮಾಡುತ್ತಿದೆ. ನಾವು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇಂದಿನ ಯುವಕರಲ್ಲಿ ಮಕ್ಕಳಲ್ಲಿ ಬೆಳೆಸಬೇಕು. ಓದು ನಮ್ಮ ಜೀವನ ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಎರಡು ಕೃತಿಗಳು ಸ್ನೇಹ ಪ್ರಕಾಶನದಿಂದ ಪ್ರಕಟವಾಗುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಕಾಶಿನಾಥ ಮರತೂರ ನಿರೂಪಿಸಿದರು, ರಾಜಾಜಿನಗರದ ಗಣ್ಯರು, ಶೇಖರ ಸೇಡಂ ಇತರರು ಹಾಜರಿದ್ದರು.