ಜೇವರ್ಗಿ: ಬಿಇಓ ವರ್ಗಾವಣೆ ರದ್ದುಪಡಿಸಲು ಆಗ್ರಹ

0
25

ಜೇವರ್ಗಿ: ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಅವರ ವರ್ಗಾವಣೆ ರದ್ದುಪಡಿಸುವಂತೆ ಒತ್ತಾಯಿಸಿ ಜೇವರ್ಗಿ ತಾಲೂಕು ವೀರಶೈವ ಸಮಾಜದ ವತಿಯಿಂದ ತಾಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿಕ್ಷಣ ಸಚಿವರಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಅವರನ್ನು ಜೇವರ್ಗಿಯಿಂದ ಯಾದಗಿರಿ ಜಿಲ್ಲೆಗೆ ವರ್ಗಾವಣೆ ಮಾಡಿರುವುದನ್ನು ತಕ್ಷಣವೇ ರದ್ದುಗೊಳಿಸಬೇಕು.

Contact Your\'s Advertisement; 9902492681

ಇನಾಮದಾರ ಅವರು ಪ್ರಾಮಾಣಿಕ.ದಕ್ಷ ಅಧಿಕಾರಿಯಾಗಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಇನ್ನು ಒಂದು ವರ್ಷವೂ ಪೂರ್ಣಗೊಂಡಿಲ್ಲ.ಇನಾಮದಾರ ಅಧಿಕಾರ ವಹಿಸಿಕೊಂಡ ನಂತರ ತಾಲೂಕಿನ ಸರಕಾರಿ ಮತ್ತು ಅನುಧಾನಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಸಲ್ಲಿಸಿದ್ದಾರೆ. ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುವಂತೆ ನೋಡಿಕೊಂಡಿದ್ದಾರೆ. ಕೆಲವು ಜನ ಶಿಕ್ಷಕರು ಶಾಲೆಗಳಿಗೆ ತೆರಳದೇ ಅನಗತ್ಯವಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿದ್ದಾರೆ.

ಶಿಕ್ಷಣ ಆಧಾಲತ್ ಮೂಲಕ ನಮ್ಮ ನಡೆ ಶಿಕ್ಷಕರ ಕಡೆ ಶಿಕ್ಷಕರ ನಡೆ ಮಕ್ಕಳ ಗುಣಾತ್ಮಕ ಶಿಕ್ಷಣ ಕಡೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಪೂರ್ಣಗೊಳಿಸಿದ್ದಾರೆ.

ಅಲ್ಲದೇ ಶಿಕ್ಷಣ ಅದಾಲತ್ ದಿಂದ ಶಿಕ್ಷಕರ ಸುಮಾರು ವರ್ಷಗಳಿಂದ ಇರುವ ಸಮಸ್ಯೆಗಳನ್ನು ಹೋಬಳಿ ಮಟ್ಟದಲ್ಲಿ ಅವರಿದ್ದಲ್ಲಿಯೇ ಹೋಗಿ ಪರಿಹರಿಸುವ ಮೂಲಕ ಅನಗತ್ಯವಾಗಿ ಶಿಕ್ಷಕರ ಅಲೆದಾಟವನ್ನು ತಪ್ಪಿಸಿದ್ದಾರೆ.ಆದ್ದರಿಂದ ಇಂತಹ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ ತಾಲೂಕು ವೀರಶೈವ ಸಮಾಜ ಖಂಡಿಸುತ್ತಿದ್ದು.ತಕ್ಷಣ ಅವರ ವರ್ಗಾವಣೆ ರದ್ದುಪಡಿಸಿ ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮುಂದುವರಿಸಬೇಕು ಎಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ.ನಾಗೇಶ ಅವರಿಗೆ ಜೇವರ್ಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮುಖಾಂತರ ಮನವಿ ಪತ್ರದ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಸಿದ್ದು ಅಂಗಡಿ.ರಾಜಶೇಖರ ಸೀರಿ. ಸಂಗನಗೌಡ ಪಾಟೀಲ. ಶಿವಕುಮಾರ ಕಲ್ಲಾ.ಗುರುಲಿಂಗಯ್ಯ ಹಿರೇಮಠ. ಶಾಂತರಾಜ ಪಾಟೀಲ.ಭಾಗವಂತರಾಯ ನೆಂಗಾ.ಅಶೋಕ ಪಾಟೀಲ.ಮಲ್ಲಿಕಾರ್ಜುನ ಬಿರಾದಾರ ಸೊನ್ನ.ಶ್ರೀಶೈಲಗೌಡ ಕರಕಳ್ಳಿ. ಇರಣ್ಣಗೌಡ ಅವರಾದಿ. ರವಿ ಅವಟಿ.ವಿಶ್ವ ಪಾಟೀಲ ಸಾಹೇಬಗೌಡ ಪಾಟೀಲ. ಪ್ರಕಾಶ ಪಾಟೀಲ. ಸಿದ್ದು ಸ್ಥಾವರಮಠ.ಅಯ್ಯನಗೌಡ ಮಾವನೂರ.ಕೇದಾರಲಿಂಗಯ್ಯ ಹಿರೇಮಠ. ವಿಶಾಲ ಬಂಕೂರ.ವಿಶಾಲ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here