ಭಾರತೀಯ ಸಂವಿಧಾನಕ್ಕೆ ಡಾ. ಅಂಬೇಡ್ಕರರವರ ಕೊಡುಗೆ ಅನನ್ಯ- ಮಾರುತಿ ಗಂಜಗಿರಿ

0
26

ಕಲಬುರಗಿ: ಸರಕಾರಿ ಪದವಿ ಪೂರ್ವ ಕಾಲೇಜು ಹಾಗು ಸರಕಾರಿ ಪ್ರೌಢ ಶಾಲೆ ಚಂದನಕೇರಾ ಗ್ರಾಮದಲ್ಲಿ ನಡೆದ 73ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳನ್ನು ಉದ್ದೇಶಿಸಿ ಭಾರತ ಮುಕ್ತಿ ಮೋರ್ಚಾ ಸಂಘಟನೆ ನವದೆಹಲಿ ಕರ್ನಾಟಕ ಘಟಕದ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಗಂಜಗಿರಿ ಮಾತನಾಡಿದರು.

ಸಂವಿಧಾನ ದೇಶದ ಸಮಸ್ತ ಜನರನ್ನು ಏಕತೆಯಿಂದ ಕಂಡು ಅವರ ಆಶೋತ್ತರಗಳನ್ನು ಈಡೇರಿಸುವ ಕಲ್ಯಾಣ ದೃಷ್ಟಿಕೋನವನ್ನು ಹೊಂದಿದೆ. ಬಾಬಾಸಾಹೇಬ್ ರವರು ತಮ್ಮ ಜೀವನದಲ್ಲಿ ಅನುಭವಿಸಿದ ನೋವುಗಳನ್ನು ಇನ್ನೊಬ್ಬರು ಅನುಭವಿಸದೆ ಎಲ್ಲರೂ ತಲೆಯೆತ್ತಿ ಬದುಕುವಂತಾಗಲಿ ಎಂದು ಭಾವಿಸಿ ನಮ್ಮ ದೇಶಕ್ಕೆ ಅದ್ಭುತವಾದ ಕೊಡುಗೆಯನ್ನು ಸಂವಿಧಾನದ ರೂಪದಲ್ಲಿ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ  ಜಾತಿ-ಮತ-ಪಂಥ ಧರ್ಮ ಇವುಗಳ ಬಂಧನಗಳನ್ನು ದಾಟಿ ನಾವೆಲ್ಲರೂ ಒಗ್ಗಟ್ಟಾಗಿ ರಾಷ್ಟ್ರವೇ ಮೊದಲು ಎಂಬ ಸಂಕಲ್ಪದೊಂದಿಗೆ ಬದುಕೋಣ ಎಂದು ನುಡಿದರು.

Contact Your\'s Advertisement; 9902492681

ಶಿಕ್ಷಕ ಮತ್ತು ವಿದ್ಯಾರ್ಥಿಗಳು ದೇಶದ ಬಹುದೊಡ್ಡ ಆಸ್ತಿ ಇವರ ಪರಸ್ಪರ ಹಿತದಲ್ಲಿ ದೇಶದ ಹಿತ ಅಡಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ  ಪ್ರಾಂಶುಪಾಲರಾದ ಶ್ರೀಮತಿ ಡಾ.ಕುಸುಮಾ ಪ್ರಕಾಶ ಪ್ರೌಢ ಶಾಲೆಯ ಮುಖ್ಯಗುರುಗಳಾದ ಮಂಜುನಾಥ ಕಟ್ಟಿ  SDMC  ಅಧ್ಯಕ್ಷರಾದ ರಾಜು ಮೇಲ್ಕೇರಿ ಉಪಾದ್ಯಕ್ಷರಾದ ಜಗನ್ನಾಥ ಪಡಶೆಟ್ಟಿ  ಮುಖ್ಯ ಅತಿಥಿಗಳಾಗಿ ಶಿವಶರಣಪ್ಪಾ ಮತಿವಂತ ಕೇಶ್ವಾರ ಪ್ರಕಾಶ ಚೆಂಗಟಿ  ಮೊಗಲಯ್ಯಾ ಗುತ್ತೆದಾರ್ ಅಶೋಕ ಉಪನ್ಯಾಸಕ ವೃಂದದವರು ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here