73ನೇ ಗಣರಾಜ್ಯೋತ್ಸವ ಆಚರಣೆ

0
24

ಕಲಬುರಗಿ: ನಗರದ ಪ್ರತಿಷ್ಠಿತ ಬಡವಾಣೆಯಾದ ಹಳೆ ಬ್ರಹ್ಮಪೂರನ ಚಂದ್ರಶೇಖರ ಆಜಾಧ ತರುಣ ಸಂಘದ ಅಡಿಯಲ್ಲಿ 73ನೇ ಭಾರತದ ಗಣರಾಜ್ಯೋತ್ಸವ ದಿನವನ್ನು ವಿಶೇಷವಾಗಿ ಆಚರಿಸಲಾಯಿತು,  ಮೊದಲಿಗೆ ಸಂಘದ ಅಧ್ಯಕ್ಷರಾದ ಕವಿರಾಜ ಕೋರಿಯವರು ಎಲ್ಲರನ್ನು ಸ್ವಾಗತಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ಸದಸ್ಯರಾದ ತ್ರೀಮೂರ್ತಿಗಳನ್ನು ಸಂಘದ ಪರವಾಗಿ ಆಹ್ವಾನಿಸಿ ಅವರ ಅಮೃತ ಹಸ್ತದಿಂದ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೇರವೇರಿಸಲಾಯಿತು.  ವಿಶೇಷವಾಗಿ ನೂತನ ಪಾಲಿಕೆಯ ಸದಸ್ಯರಾದ ರೇಣುಕಾ ರಾಮುರೆಡ್ಡಿ ಗುಮ್ಮಟ ಅವರು ಹಸ್ತದಿಂದಲೇ ಧ್ವಜಾರೋಹಣವನ್ನು ನೇರವೇರಿಸಲಾಯಿತು.

Contact Your\'s Advertisement; 9902492681

ರೀಯದರ್ಶಿನಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗಳಿಂದ ರಾಷ್ಟ್ರೀಯ ಗೀತೆಯನ್ನು ಮೊಳಗಿಸಲಾಯಿತು.  ನಂತರ ಧ್ವಜಾರೋಹಣಗೈದ ಶ್ರೀಮತಿ ರೇಣುಕಾ ರಾಮುರಡ್ಡಿ ಗುಮ್ಮಟ ಮಾತನಾಡುತ್ತ ಇಂದಿನ ಈ ಕಾರ್ಯಕ್ರಮಕ್ಕೆ ಆಗಮಿಸಿ ಧ್ವಜಾರೋಹಣ ಗೈದಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಸಂಗತಿ ಅಲ್ಲದೆ ಈ ಮುಖಾಂತರ ಲೋಕಸಭೆಯಲ್ಲಿ ಮತ್ತು ವಿಧಾನಸಭೆಯಲ್ಲಿ ಮಹಿಳೆಯರ ಬೇಡಿಕೆಯಾದ 33% ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳು ಈ ಅವಧಿಯಲ್ಲಿಯೇ ನೇರವೇರಿಸಲೆಂದು ಕೋರುತ್ತೇನೆ  ಎಂದರು.

ಅಲ್ಲದೆ ಸಂಘವು ಸಲ್ಲಿಸಿದ ಈ ವಿಶೇಷ ಗೌರವವನ್ನು ಅತಿ ಸಂತೋಷದಿಂದ ಸ್ವೀಕರಿಸಿದ್ದೇನೆ.  ಬಡಾವಣೆ ಯಾವುದೇ ಮೂಲಭೂತ ಸಮಸ್ಯೆ ಗಮನಕ್ಕೆ ತಂದಲ್ಲಿ ತ್ವರಿತವಾಗಿ ಸ್ಪಂಧಿಸುತ್ತೇನೆಂದು ಈ ಸಂದರ್ಭದಲ್ಲಿ ತಮ್ಮೇಲರಿಗೂ ತಿಳಿಸಲು ಹರ್ಷವಾಗುತ್ತಿದೆ ಎಂದರು.  ಇನ್ನೋರ್ವ ನೂತನ ಸದಸ್ಯರಾದ ಡಾ. ಶಂಬುಲಿಂಗ ಪಾಟೀಲ ಬಳಬಟ್ಟಿಯವರು ಮಾತನಾಡುತ್ತ ಚಂದ್ರಶೇಖರ ಆಜಾಧ ತರುಣ ಸಂಘ ಮಾಡುತ್ತಿರುವ ಸಮಾಜ ಸೇವೆ ನಾನು ಕಂಡಿದ್ದೇನೆ.  ಅದನ್ನು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಕಾರಣವೇ ಇವತ್ತಿನ ಈ ಉಪಸ್ಥಿತಿ.  ನನ್ನ ವಾರ್ಡ ಪಕ್ಕದ ವಾರ್ಡ ಆದರೂ ಕೂಡ ತರುಣ ಸಂಘದ ಪ್ರೀತಿಗೆ ಮನ ಮಿಡಿದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ.  ಗೌರವ ಸಲ್ಲಿಸಿದ್ದಕ್ಕೆ  ಆಭಾರಿಯಾಗಿರುತ್ತೇನೆ.  ಮತ್ತು ಪ್ರಮಾಣ ವಚನದ ನಂತರ ಮೊದಲನೆ ಸಭೆಯಲ್ಲಿಯೇ ಚಂದ್ರಶೇಖರ ಆಜಾಧ ಚೌಕನ್ನು ಅಧಿಕೃತಗೊಳಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ ವಾರ್ಡ ನಂ. 38ರ ಸದಸ್ಯ ಶ್ರೀ ಗುರು ಪಟ್ಟಣರವರು ಸಂಘದ ಗೌರವವನ್ನು ಸ್ವೀಕರಿಸಿ ಮಾತನಾಡುತ್ತ ನನ್ನ ಅವಧಿಯಲ್ಲಿ ಚಿಕ್ಕದಾದರು ಚಂದ್ರಶೇಖರ ಆಜಾಧರ ಮೂರ್ತಿ ಸ್ಥಾಪಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ನಿರ್ವಹಣೆಯನ್ನು ಸಂಘಧ ಗೌರವಾಧ್ಯಕ್ಷರಾದ ನ್ಯಾಯವಾದಿ ವಿನೋದಕುಮಾರ ಜೆನೆವರಿಯವರು ನೇರವೇರಿಸಿದರು.  ವಂದನಾರ್ಪಣೆಯನ್ನು  ನಂದು ಕಂಪ್ಯೂಟರ್‌ ತರಬೇತಿಯ ಪ್ರಾಂಶುಪಾಲರಾದ ಸಾಗರ .ಆರ್.‌ ಹಿರೇಮಠ ನೇರವೇರಿಸದರು.  ಕಾರ್ಯಕ್ರಮದಲ್ಲಿ ಸಂಗಮೇಶ ಹತ್ತಿ, ಶ್ರೀಮತಿ ರಾಜೇಶ್ವರಿ ಕೋರಿ, ಅನಂತ ಗುಡಿ , ಪರಮೇಶ್ವರ ಮಠಪತಿ, ಮೇಘರಾಜ ಕುಲಕರ್ಣಿ, ನೀತಿನ ಕಟ್ಟಿಮನಿ,  ಅಂಬರೀಷ ಪಡಶೇಟ್ಟಿ, ಬಸವರಾಜ ಅಟ್ಟೂರ, ಶ್ರವಣಕುಮಾರ ವರ್ಮಾ, ವೇದಾಂತ ವರ್ಮಾ,  ಶರಣಯ್ಯ ಸ್ವಾಮಿ ಸಾಲಿಮಠ, ಈರಯ್ಯ ಸ್ವಾಮಿ ಬಂದರವಾಡ, ಸುಶೀಲಬಾಯಿ ಬಾಳಿಕಾಯಿ, ಪಾರ್ವತಿ ಗಾಣಗೇರ, ಬಡಾವಣೆಯ ಚಿಕ್ಕ ಮಕ್ಕಳು, ನಾಗರಿಕರು, ಹಿರಿಯರು ವಿಶೇಷವಾಗಿ ಪ್ರಿಯದರ್ಶಿನಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದುರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here