ಮೈತ್ರಿ ಸರ್ಕಾರ ಉರುಳಿಸಲು ರಾಜ್ಯಪಾಲರ ದುರ್ಬಳಕೆ: ಬಿಜೆಪಿ ವಿರುದ್ಧ ಕಮ್ಯುನಿಸ್ಟ್‌ರ ಪ್ರತಿಭಟನೆ

0
66

ಕಲಬುರಗಿ: ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸಿ ಅಧಿಕಾರವನ್ನು ಹಿಡಿಯಲು ಬಿಜೆಪಿ ಯತ್ನಿಸುತ್ತಿದೆ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ರಾಜ್ಯಪಾಲರು ಹಾಗೂ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಶನಿವಾರ ಭಾರತ್ ಕಮ್ಯನಿಸ್ಟ್ ಪಕ್ಷ (ಮಾರ್ಕ್‌ಸಿಸ್ಟ್) ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಶೋಕ್ ಮ್ಯಾಗೇರಿ, ಗೌರಮ್ಮ ಪಾಟೀಲ್, ನಾಗಯ್ಯಸ್ವಾಮಿ, ಪಾಂಡುರಂಗ್ ಮಾವಿನ್, ಸುಭಾಷ್ ಹೊಸಮನಿ, ಬಾಬು ಸಿಂದಗಿ, ಮೇಘರಾಜ್ ಕಠಾರಿ, ಮಲ್ಲಣಗೌಡ ಬನ್ನೂರ್, ಶಾಂತಪ್ಪ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸದನದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಯನ್ನು ಅದಾಗಲೇ ನಡೆಸಿರುವಾಗ ರಾಜ್ಯಪಾಲರ ಮೂಲಕ ಅದೇ ಮಧ್ಯಾಹ್ನ ಒಂದೂವರೆ ಗಂಟೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿ ಸರ್ಕಾರವನ್ನು ಕಿತ್ತು ಹಾಕುವ ಯತ್ನ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸದನವು ಸಾಕಷ್ಟು ಮಹತ್ವದ ವಿಚಾರಗಳನ್ನು ಗಂಭೀರವಾಗಿ ಚರ್ಚಿಸುತ್ತಿದೆ. ಮುಖ್ಯವಾಗಿ ಕ್ರಿಯಾಲೋಪದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ವಿಪ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರು ರೂಲಿಂಗ್ ನೀಡಬೇಕಿರುವಾಗಲೇ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ಇಂತಹ ಸೂಚನೆ ನೀಡುತ್ತಾರೆ. ಇದು ಸದನದ ಸದಸ್ಯರು ಚರ್ಚಿಸುವ ಹಕ್ಕಿನ ದಮನವಾಗಿದೆ. ವಿಧಾನಸಭಾಧ್ಯಕ್ಷರು ಕೈಗೊಳ್ಳಬೇಕಾದ ನಿಯಮಾವಳಿಗಳ ಉಲ್ಲಂಘನೆಗೆ ಅವಕಾಶ ನೀಡಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಮುಂದುವರೆದು ತನ್ನ ಆದೇಶವನ್ನು ಮುಖ್ಯಮಂತ್ರಿಗಳು ಪಾಲಿಸಿಲ್ಲವೆಂಬ ನೆಪ ಮಾಡಿಕೊಂಡು ತಕ್ಷಣವೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂಬುದನ್ನು ನೋಡಿದರೆ ಬಿಜೆಪಿ ವಿರೋಧಿ ಮುಕ್ತ ಭಾರತ ನಿರ್ಮಾಣದ ಭಾಗವೆಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಕಟುವಾಗಿ ಟೀಕಿಸಿದರು.

ರಾಜ್ಯವು ಭೀಕರ ಬರ ಎದುರಿಸುತ್ತಿರುವಾಗ, ರೈತರ ಆತ್ಮಹತ್ಯೆಗಳು ಬೆಳೆಯುತ್ತಿರುವಾಗ, ಬೆಲೆ ಏರಿಕೆಗಳ ಮತ್ತಷ್ಟು ದಾಳಿಗಳ ಮಧ್ಯೆ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಕೊಡಬೇಕಾದ ಸಂಧರ್ಬದಲ್ಲಿ ಜನಪರ ಕೆಲಸಗಳನ್ನು ಕಡೆಗಣಿಸಿ ಕೇವಲ ಅಧಿಕಾರಶಾಹಿ ಮನೋಭಾವದಿಂದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಬೆಳವಣಿಗೆ ನಾಚಿಕೆಗೇಡಿತನದ್ದು ಎಂದು ಅವರು ವಿರೋಧಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here