ಕಲಬುರಗಿ: ಹಳೇ ಜೇವರ್ಗಿ ರಸ್ತೆಯ ರೈಲ್ವೆ ಸೇತುವೆ ಹತ್ತಿರ ನಿರ್ಮಿಸಲು ಉದ್ದೇಶಿಸುತ್ತಿರುವ ಪೆಟ್ರೋಲ್ ಪಂಪ್ ಬೇರೆಡೆ ಸ್ಥಳಾಂತಿಸುವಂತೆ ಕ್ರಮ ಕೈಗೊಳ್ಳಲು ಜೈ ಕನ್ನಡಿಗರ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ವಾರ್ಡ ನಂ. ೪೯ ರಲ್ಲಿನ ಹಳೇ ಜೇವರ್ಗಿ ರಸ್ತೆಯ ಕೆಳ ಸೇತುವೆ ಹತ್ತಿರ ವಾಸಿಸುತ್ತಿರುವ ಜನರ ಜೀವನಾಡಿಗೆ ಸಂಬಂಧಿಸಿದ್ದು ಈ ಪ್ರದೇಶದ ಸುತ್ತಮುತ್ತಲೂ ಸಣ್ಣ ಸಣ್ಣ ಗುಡಿಸಲುಗಳು ವೆಲ್ಡಿಂಗ್ ಅಂಗಡಿಗಳು ಕಟ್ಟಿಗೆ ಅಂಗಡಿಗಳು ಕೆ.ಇ.ಬಿ ಸ್ಟೋರೆಜ್ ಅದಲ್ಲದೇ ಹತ್ತಿರವೇ” ಮುದ್ದಿ ಹನುಮಾನ ದೇವಸ್ಥಾನ, ಮಂದಿರದ ಸುತ್ತ ಮುತ್ತಲು ದೀಪದ” ಇಂಡಿಯನ್ ಆಯಿಲ್ ಕಾರ್ಪೊರೇಶನ್ ವತಿಯಿಂದ ಪೆಟ್ರೋಲ್ ಬಂಕ್ ಕಟ್ಟಡ ನಿರ್ಮಿಸುತ್ತಿದ್ದು, ಇದು ಅಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುತ್ತದೆ.
ಮತ್ತು ಪೆಟ್ರೋಲ್ ಬಂಕ್ ನಿರ್ಮಾಣದಿಂದ ಉಂಟಾಗಬಹುದಾದ ಅನಾಹುತಗಳು ಇಲ್ಲಿ ಇವೆ ಸಾರ್ವಜನಿಕ ವಲಯ ಪ್ರದೇಶವಾಗಿರುವದರಿಂದ ಈ ಮೊದಲು ಇದ್ದ ಇಂಡಿಯನ್ ಆಯಿಲ್ ಡಿಸೋ ಅನ್ನು ಪರಿಸರ ಸಂರಕ್ಷಣೆ ದೃಷ್ಟಿಯಿಂದ ನಗರದ ಹೊರ ವಲಯಕ್ಕೆ ಸ್ಥಳಾಂತರಿಸಲಾಗಿದೆ ಆದರೆ ಈಗಲೂ ಸಹ ಆ ಜಾಗದಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳದಲ್ಲಿ ಬೋರ್‌ವೆಲ್ ಕೊರೆಸಿದರೆ ನೀರಿನಲ್ಲಿ ಪೆಟ್ರೋಲ್ ವಾಸನೆ ಬರುತ್ತದೆ.
ಉದ್ದೇಶಿತ ಪೆಟ್ರೋಲ್ ಬಂಕ್ ಹತ್ತಿರ ರೈಲ್ವೆ ಕೆಳ ಸೇತುವೆ ಇದ್ದು ದಿನ ನಿತ್ಯ ವಿದ್ಯುತ್ ಚಾಲಿತ ರೈಲ್ವೆಗಳು ಸಂಚರಿಸುತ್ತಿದ್ದು , ಈ ಜಾಗದ್ ಪಕ್ಕದಲ್ಲಿ ಹೈಟೆನ್ಸನ್ ವೈರಗಳು ಹಾದು ಹೋಗಿರುತ್ತವೆ. ಇಂತಹದರಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಿದರೆ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಮತ್ತೊಂದು ಭೂಪಾಲ್ ಅನಿಲ ದುರಂತ ಸಂಭವಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಇಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಯಿಂದ ಉಂಟಾಗುವ ಎಂಬುದಕ್ಕೆ ಜಿಲ್ಲಾಡಳಿತ ಮತ್ತು ಪಾಲಿಕೆಯವರು ತೀವ್ರ ಗಮನ ಹರಿಸುವುದು ಅವಶ್ಯಕವಾಗಿದೆ. ಮತ್ತು ಪರಿಸರ ಮಾಲಿನ್ಯ ಮಂಡಳಿ ಪ್ರಾಧಿಕಾರವು ಸಹ ಅನಾಹುತಕ್ಕೆ ಕಾರಣರಾಗುತ್ತಾರೆ. ಈ ಜಾಗದ ಹತ್ತಿರ ಅಲ್ಲಿನ ಸಾರ್ವಜನಿಕರ ಅನುಕೂಲವಾಗಲು ಮಲ್ಟಿಸ್ಪೆಶಲಿಸ್ಟ್ ಆಸ್ಪತ್ರೆ ನಿರ್ಮಿಸುತ್ತಿದೆ. ಆದರೆ ಪೆಟ್ರೋಲ್ ಬಂಕ್ ನಿರ್ಮಿಸಿದರೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಪರಿಸರ ಮಾಲಿನ್ಯ ಉಂಟಾಗಿ ಅವರ ಜೀವಕ್ಕೆ ನಷ್ಟ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಈಗಾಗಲೇ ಉದ್ದೇಶಿತ ಜಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೋರವೆಲ್ ಕೊರೆಸಲಾಗಿ ಅದರಿಂದ ಬರುವ ಪೆಟ್ರೋಲ್ ವಾಸನೆ ಕಲುಷಿತ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇಂತಹದರಲ್ಲಿ ಮತ್ತೇ ಪೆಟ್ರೋಲ್ ಬಕ್ ಸ್ಥಾಪಿಸಿದಲ್ಲಿ ಸಾರ್ವಜನಿಕರಿಗೆ ಜೀವಹಾನಿಯಾದರೆ.
ಒಟ್ಟಿನಲ್ಲಿ ಇಂತಹ ವಿಚ್ಚಿದ್ರ ಬೆಳವಣಿಗೆಯಿಂದ ಹೊರಸೂಸುವ ಪರಿಸರ ಮಾಲಿನ್ಯದಿಂದ ಅಲ್ಲಿನ ಸಾರ್ವಜನಿಕರ ಜೀವ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗುತ್ತದೆ. ಉದ್ದೇಶಿತ ಪೆಟ್ರೋಲ್ ಬಂಕ್ ಬೇರಡಟೆಗೆ ಸ್ಥಳಾಂತರಿಸುವಂತೆ ವಾರ್ಡ ಮಹಾನಗರ ಪಾಲಿಕೆ ಸದಸ್ಯರು ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ಹಾಗೂ ಮಾನ್ಯ ಪ್ರಾದೇಶಿಕ ಆಯುಕ್ತರಿಗೆ ಮನವಿ ನೀಡಿ ತಮ್ಮ ಸಾಮಾಜಿಕ ಕಳಕಳಿಯನ್ನು ಮರೆದಿದ್ದು ಯಾವುದೇ ಕ್ರಮವಾಗಿರುವುದಿಲ್ಲ.
ಆದ್ದರಿಂದ ಹಳೇ ಜೇವರ್ಗಿ ರಸ್ತೆಯ ಕೆಳ ಸೇತುವೆ ಹತ್ತಿರ ನಿರ್ಮಿಸಲು ಉದ್ದೇಶಿಸುತ್ತಿರುವ ಪೆಟ್ರೋಲ್ ಬಂಕ್‌ದಿಂದ ಉಂಟಾಗುವ ಬಾಧಕ ಮತ್ತು ಅನಾಹುತಗಳ ಬಗ್ಗೆ ಮೇಲಿನ ಎಲ್ಲಾ ಗಮನೀಯ ಅಂಶಗಳನ್ನು ತಮ್ಮ ದಯಾಪರ ಗಮನಕ್ಕೆ ತರುತ್ತ ಸಾರ್ವಜನಿಕರ ಹಿತದೃಷ್ಠಿಯಿಂದ ಸದರಿ ಪೆಟ್ರೋಲ್ ಬಂಕ್‌ನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ ಜೈ ಕನ್ನಡಿಗರ ಸೇನೆಯ ವತಿಯಿಂದ ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ತಾವು ಕ್ರಮ ವಹಿಸಲು ವಿಫಲವಾದಲ್ಲಿ ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಉಗ್ರರೂಪದ ಪ್ರತಿಭಟನೆ ನಡೆಸಲಾಗುವುದೆಂದು ಮತ್ತು ಅದರಿಂದ ಉಂಟಾಗುವ ನಷ್ಟಕ್ಕೆ ಜಿಲ್ಲಾಡಳಿತ ಹಾಗೂ ತಮ್ಮ ಸರಕಾರವೇ ಹೊಣೆಗಾರರಾಗುತ್ತಾರೆಂಬ ವಿಷಯ ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ದತ್ತು ಹೆಚ್, ಭಾಸಗಿ, ಹುಸೇನ, ಶಿವು ಮಡಕಿ, ರಾಮಾ ಪೂಜಾರಿ, ಶ್ರೀಶೈಲ್, ಸಾಗರ ಕುಮಸಿ, ಸಂಜೀವಕುಮಾರ ಮಾಳಗಿ, ವಿಶ್ವಜೀತ, ಪ್ರಶಾಂತ ಬಾಮನಗರ ಹಾಗೂ ಕಾರ್ಯಕರ್ತಕರು ಇದ್ದರು.