ಶಹಾಬಾದ: ಮುಖ್ಯಮಂತ್ರಿಗಳು ತಾವು ಕೊಟ್ಟಮಾತಿನಂತೆ ಇಂದು ತಳವಾರ ಹಾಗೂ ಪರಿವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ನೀಡುವಂತೆ ಆದೇಶ ಹೊರಡಿಸಿದಕ್ಕೆ ತಳವಾರ ಸಮಾಜದ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದು ತೊನಸನಹಳ್ಳಿ(ಎಸ್) ಗ್ರಾಮದ ಕೊತ್ತಲಪ್ಪ ಶರಣರು ಹಾಗೂ ಹೋರಾಟಗಾರ ಡಾ. ಸರ್ದಾರ ರಾಯಪ್ಪ ತಿಳಿಸಿದ್ದಾರೆ.
ಕೆಲವು ಕಾರಣಗಳಿಂದ ಜಾತಿ ಪ್ರಮಾಣ ಪತ್ರ ನೀಡಲು ಅನಗತ್ಯವಾಗಿ ತಡೆಹಿಡಿಯಲಾಗಿತ್ತು.ತಡವಾದರೂ ಪರವಾಗಿಲ್ಲ.ಒಳ್ಳೆಯ ಸುದ್ದಿಯನ್ನು ಮುಖ್ಯಮಂತ್ರಿಗಳ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.ಇದಕ್ಕೆ ರಾಜ್ಯದ ಎಲ್ಲಾ ಹೋರಾಟಗಾರರ ಬೆಂಬಲ ಮತ್ತು ಶಾಸಕರ, ಲೋಕಸಭಾ ಸದಸ್ಯರ ಹಾಗೂ ಮಠಾದೀಶರ ಸಹಕಾರದಿಂದ ಇಂದು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಲಭಿಸುವಂತಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರ ಆದೇಶದಂತೆ ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಮೂರು ತಿಂಗಳುಗಳ ಧರಣಿ ಸತ್ಯಾಗ್ರಹ ಮಾಡಿದ್ದೆವು. ಅದರ ಪ್ರತಿಫಲದಿಂದ ಇಂದು ನಮಗೆ ಜಯ ಸಿಕ್ಕಿದೆ.
ಇಡೀ ತಳವಾರ ಸಮಾಜದ ವತಿಯಿಂದ ರಾಜ್ಯ ಸರಕಾರಕ್ಕೆ ಅನಂತಾನAತ ಕೃತಜ್ಞತೆಗಳು ಸಲ್ಲಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜೇಂದ್ರ ರಾಜವಾಳ, ಶಿವಪ್ಪ ಗಾಣೂರ, ಮಹಾರಾಯ ಅಗಸಿ, ಬೆಳ್ಳಪ್ಪ ಖಣದಾಳ, ರವಿ ಸಣತಮ, ಬಾಬು ಗೌಡ ಮಾಲಿ ಪಾಟೀಲ್ ಇತರರು ಇದ್ದರು.