ಎಸ್‌ಟಿ ಪ್ರಮಾಣಪತ್ರ ಆದೇಶ : ಮುಖ್ಯಮಂತ್ರಿಗೆ ನಿಂಗಣ್ಣ ಅಭಿನಂದನೆ

0
121

ಶಹಾಬಾದ: ಪರಿವಾರ ಮತ್ತು ತಳವಾರ ಸಮುದಾಯಗಳಿಗೆ ಎಸ್‌ಟಿ ಪ್ರಮಾಣಪತ್ರ ನೀಡುವಂತೆ ಆದೇಶ ಹೊರಡಿಸಲು ಕಾರಣಿಕರ್ತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹಾಗೂ ಕೋಲಿ ಸಮಾಜದ ಹಿರಿಯ ಮುಖಂಡ ನಿಂಗಣ್ಣ ಹುಳಗೋಳಕರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿರುವ ತಳವಾರ, ಪರಿವಾರ ಸಮುದಾಯ ಮತ್ತು ಧಾರವಾಡ ಮತ್ತು ಬೆಳಗಾವಿಯಲ್ಲಿವಾಸಿಸುತ್ತಿರುವ ಸಿದ್ದಿ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ.

Contact Your\'s Advertisement; 9902492681

ತಳವಾರ, ಪರಿವಾರ ಹಾಗೂ ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯ ಅನುಸಾರ ರಾಜ್ಯದಲ್ಲೂ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು.ಆದರೆ ಅನಗತ್ಯವಾಗಿ ಸುಮಾರು ೨೨ ತಿಂಗಳಿನಿಂದ ತಡೆ ಹಿಡಿಯಲಾಗಿತ್ತು. ನಂತರ ಅನೇಕ ಹೋರಾಟಗಾರರು ಬೀದಗಿಳಿದು ಹೋರಾಟ ಮಾಡಿದರು.ಸುಮಾರು ೧೯೯೬ರಿಂದ ಎಸ್‌ಟಿಗೆ ಸೇರಿಸಬೇಕೆಂದು ಅಂದು ವಿಠ್ಠಲ್ ಹೇರೂರ ನೇತೃತ್ವ, ಪೂಜ್ಯ ಮಲ್ಲಣ್ಣಪ್ಪ ಸ್ವಾಮಿಗಳ ಸಾನಿಧ್ಯದಲ್ಲಿ ಅನೇಕ ಹೋರಾಟಗಳು ನಡೆದವು.ಅಲ್ಲದೇ ಮಜಿ ಸಚಿವರಾದ ಬಾಬುರಾವ ಚಿಂಚನಸೂರ ಅವರು ಉರುಳಿ ಸೇವೆ ಮಾಡುವ ಮೂಲಕ ಸರಕಾರದ ಗಮನ ಸೆಳೆದರು.ದೇವರು ವರ ಕೊಟ್ಟರೇ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸದ ನಂತರ ರಾಜ್ಯ ಸರ್ಕಾರ ವಿನಾಃ ಕಾರಣ ತಡೆಹಿಡಿದಿದ್ದರು. ಇಂದು ರಾಜ್ಯ ಸರ್ಕಾರ ಎಸ್‌ಟಿ ಪ್ರಮಾಣಪತ್ರ ನೀಡುವಂತೆ ಆದೇಶ ಹೊರಡಿಸಿದ ಪರಿಣಾಮ ಪರಿವಾರ ಮತ್ತು ತಳವಾರ ಸಮುದಾಯಗಳಿಗೆ ಎಲ್ಲಿಲ್ಲದ ಹರ್ಷ ಉಂಟಾಗಿದೆ.ಇದಕ್ಕಾಗಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಈ ಸಮುದಾಯಗಳಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು.ಅಲ್ಲದೇ ಸಹಕಾರ ನೀಡಿದ ರಾಜ್ಯದ ಎಲ್ಲಾ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರಿಗೆ, ಲೋಕಸಭಾ ಸದಸ್ಯರಿಗೆ, ಕೋಲಿ ಸಮಾಜದ ಹೋರಾಟಗಾರರಿಗೆ, ಮುಖಂಡರಿಗೂ ಹಾಗೂ ಘನ ರಾಜ್ಯ ಸರಕಾರಕ್ಕೆ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here