ನಿರ್ಮಿತಿ ಕೇಂದ್ರದ ಹಿರಿಯ ಅಧಿಕಾರಿಯ ಅಪಹರಣಕ್ಕೆ ಯತ್ನ

0
13

ಬಾಗಲಕೋಟೆ : ಮರಳು ಮಾಫಿಯಾ ಹಿನ್ನೆಲೆ ಹಣಕ್ಕಾಗಿ ಹಾಡುಹಗಲೇ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿಯವರನ್ನು ಅಪಹರಿಸಲು ದುರ್ಷರ್ಮಿಗಳು ನಡೆಸಿದ ಯತ್ನ ವಿಫಲವಾಗಿದೆ.

ನವನಗರದ 55ನೇ ಸೆಕ್ಟರ್​​​​ನ ಮನೆಯಿಂದ ಗೋಗಿಯವರು ಕಚೇರಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ. ಗೋಗಿಯವರು ತಮ್ಮ ಕಾರಿನಲ್ಲಿ ಕಚೇರಿಗೆ ಹೊರಡುತ್ತಿದ್ದಂತೆ ಮನೆ ಸಮೀಪದ ಕ್ರಾಸ್‌ನಲ್ಲಿ ಮೂವರು ಇನ್ನೋವಾ ಕಾರಿನಲ್ಲಿ ಅಡ್ಡಗಟ್ಟಿದ್ದಾರೆ. ಘಟನೆ ಕುರಿತಂತೆ ಅಧಿಕಾರಿ ವಿವರಣೆ ನೀಡಿದ್ದಾರೆ.

Contact Your\'s Advertisement; 9902492681

ಮನೆಯಿಂದ ಆಫೀಸ್​ಗೆ ತೆರಳುವ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು, ನಮ್ಮ ಕಾರನ್ನು ಅಡ್ಡಗಟ್ಟಿದರು. ಬಳಿಕ ಕಾರಿನಿಂದ ಕೆಳಗಿಳಿಸಿ ಅವರ ಕಾರಲ್ಲಿ ನನ್ನನ್ನು ಕೂರಿಸಿ ಹೊರಡಬೇಕೆನ್ನುವಷ್ಟರಲ್ಲಿ ಕಾಲು ಅಡ್ಡಹಾಕಿ ಕಾರಿನ ಡೋರ್​​ ಮುಚ್ಚದ ಹಾಗೇ ನೋಡಿಕೊಂಡೆ. ​​ ಅಷ್ಟರಲ್ಲಿ ತಮ್ಮ ಚಾಲಕ ಮಹೇಶ್ ದುಷ್ಕರ್ಮಿಯೊಬ್ಬನ ಮೊಬೈಲ್ ಕಿತ್ತುಕೊಂಡರು.

ಇತ್ತ ಮೊಬೈಲ್ ಕಸಿದುಕೊಳ್ಳಲು ದುಷ್ಕರ್ಮಿ ಮುಂದಾದ. ಆಗ ನಾನು ಅವರಿಂದ ಬಿಡಿಸಿಕೊಳ್ಳಲು ಮುಂದಾದೆ. ಆಗ ತಕ್ಷಣ ಸ್ಥಳಕ್ಕೆ ಸ್ಥಳೀಯರು ದಾವಿಸಿ ಬಂದರು. ಇದರಿಂದ ಭಯಗೊಂಡ ದುಷ್ಕರ್ಮಿಗಳು ಕಾರಿನಿಂದ ನನ್ನನ್ನು ನೂಕಿ ಪರಾರಿಯಾದರು ಎಂದು ಮಾಹಿತಿ ನೀಡಿದರು.

ದುಷ್ಕರ್ಮಿಗಳಲೊಬ್ಬ ಕಳೆದ ಏಳು ವರ್ಷದ ಹಿಂದೆ 35 ಲಕ್ಷ ಹಣ ನೀಡುವಂತೆ ಪೀಡಿಸುತ್ತಿದ್ದ. ಆತನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಹಣದ ವ್ಯವಹಾರವೂ ಇರಲಿಲ್ಲ. ಆದರೂ ಏಕಾಏಕಿ ನಮ್ಮ ಮೇಲೆ ಅಟ್ಯಾಕ್ ಮಾಡಿದ್ದಾರೆ. ಮರಳು ಸಾಗಾಟದ ಹೆಸರಲ್ಲಿ ಹಣದ ಬೇಡಿಕೆ ಇಟ್ಟಿದ್ದರು ಎಂದು ಸ್ಪಷ್ಟನೆ ನೀಡಿದರು.

ಈ ಕುರಿತಂತೆ ಗೋಗಿಯವರು ನವನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದು, ಅಧಿಕಾರಿಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಸೇರಿದಂತೆ ಇತರ ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ದಾರೆ.

ಇಲ್ಲೊಮ್ಮೆ ನೋಡಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here