‘ಪತ್ರಿಕೆ ಮತ್ತು ಸಾಹಿತ್ಯ’ ನಾಳೆ ವಿಶೇಷ ಉಪನ್ಯಾಸ ಕಾರ್ಯಕ್ರಮ

0
109

ಚಿತ್ತಾಪುರ: ಇಲ್ಲಿನ ಶಂಕರಲೀಲಾ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪತ್ರಕರ್ತ ಹಾಗೂ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಅವರ ೪೮ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಆರ್.ಕೆ. ಕಾಂತಾ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಪತ್ರಿಕೆ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಮಲ್ಲಿನಾಥ ಮಲ್ಕನ್ ಹಾಗೂ ಕಾರ್ಯಕ್ರಮದ ಸಂಚಾಲಕ ನರಸಪ್ಪ ಚಿನ್ನಾಕಟ್ಟಿ ತಿಳಿಸಿದ್ದಾರೆ.

ಪತ್ರಕರ್ತ ರಮೇಶ ಭಟ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಡಾ. ವಿಜಯಕುಮಾರ ಸಾಲಿಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಪತ್ರಿಕೆ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ತಾ.ಪಂ. ಪ್ರಭಾರ ಕಾರ್ಯ ನಿರ್ವಾಹಕ ಡಾ. ಬಿ.ಎಸ್. ಡಿಗ್ಗಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಗಯ್ಯಸ್ವಾಮಿ ಅಲ್ಲೂರ ಹಾಗೂ ಟ್ರಸ್ಟ್‌ನ ಗೌರವಾಧ್ಯಕ್ಷ ಲಿಂಗಣ್ಣ ಮಲ್ಕನ್ ಉಪಸ್ಥಿತರಿರಲಿದ್ದಾರೆ.

ಇದೇವೇಳೆಯಲ್ಲಿ ಪತ್ರಕರ್ತರಾದ ಮಲ್ಲಿಕಾರ್ಜುನ ಮೂಡಬೂಳಕರ, ವಿರೇಂದ್ರ ಕೊಲ್ಲೂರ, ಪ್ರಶಾಂತ ಪಾಟೀಲ, ಕಾಶಿನಾಥ ಗುತ್ತೇದಾರ, ರವಿಶಂಕರ ಬುರ್ಲಿ, ಎಂ.ಡಿ. ಮಶಾಕ್, ಅನಂತನಾಗ ದೇಶಪಾಂಡೆ, ಆನಂದ ಮುಡಬೂಳಕರ, ಜಗದೇವ ಕುಂಬಾರ, ಸಂತೋಷ ಕಟ್ಟಿಮನಿ ಇತರರರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here