ವಚನ ಆಷಾಡ ಪ್ರವಚನ: ಸಮಾರೋಪ 24 ರಂದು

0
149

ಕಲಬುರಗಿ: ಬಸವ ಸಮಿತಿ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಇವುಗಳ ಸಹಯೋಗದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಜು. 1 ರಿಂದ ನಡೆದಿರುವ ವಚನ ಆಷಾಢ: ಶರಣರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಸಮಾರೋಪ ಹಾಗೂ ಲಿಂ. ರುದ್ರಪ್ಪ ಬೆನಕನಳ್ಳಿ ರಟಕಲ್, ಲಿಂ. ಸುಭಾಶ್ಚಂದ್ರ ರುದ್ರಪ್ಪ ಬೆನಕನಳ್ಳಿ ರಟಕಲ್ ಸ್ಮರಣಾರ್ಥ ಅರವಿನ ಮನೆ 604ನೇ ದತ್ತಿ ಕಾರ್ಯಕ್ರಮ ಜು. 24 ರಂದು ಸಂಜೆ 6 ಗಂಟೆಗೆ ನೆರವೇರಲಿದೆ ಎಂದು ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ತಿಳಿಸಿದ್ದಾರೆ.

Contact Your\'s Advertisement; 9902492681

ಬಸವ ಸಮಿತಿಯ ಅನುಭವ ಮಂಟಪದಲ್ಲಿ ಹಚ್ಚಿರುವ ಈ ಪ್ರವಚನ ಕಾರ್ಯಕ್ರಮ ಶರಣರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಆಷಾಡಮಾಸಲ್ಲಿ ಆರಲಾರದ ದೀಪ ಹಚ್ಚಿದಂತಿದೆ. ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ನಿರ್ಮಿಸಿದ ಬಸವಾದಿ ಶರಣರ ಜೀವನಾದರ್ಶವನ್ನು ನಾವೆಲ್ಲರೂ ಪಾಲಿಸಿಕೊಂಡು ಬಂದರೆ ನಾಡೆಲ್ಲ ಸುಬೀಕ್ಷೆಯಿಂದ ಕೂಡಿರುತ್ತದೆ.
                                       -ಡಾ. ಈಶ್ವರ ಮಂಟೂರ

ಮಹಾಮಹಿಮ ಸಂಗನಬಸವನ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಗೌರವ ಸಾನ್ನಿಧ್ಯವನ್ನು ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ರಟಕಲ್ ವಿರಕ್ತಮಠದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಕಾಐಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹುನ್ನೂರ-ಮಧುರಖಂಡಿ (ಜಮಖಂಡಿ) ಬಸವಜ್ಞಾನ ಗುರುಕುಲದ ಡಾ. ಈಶ್ವರ ಮಂಟೂರ ಶರಣರು ಅನುಭಾವ ನೀಡಲಿದ್ದಾರೆ. ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದೇವೇಳೆಯಲ್ಲಿ ವಚನ ಕಮ್ಮಟ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ರಟಕಲ್ ರೇವಣಸಿದ್ಧೇಶ್ವರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರೌಢಶಾಲೆಯ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಸತ್ಕರಿಸಲಾಗುವುದು. ಶಂಕರಯ್ಯ ಆರ್. ಗುರುಮಠ ಕಲ್ಲೂರ ವಚನ ಸಂಗೀತ ನಡೆಸಿಕೊಡಲಿದ್ದಾರೆ. ಸಿದ್ಧೇಶಕುಮಾರ ಲಿಂಗನಬಂಡಿ ತಬಲಾ ಸಾಥ್ ನೀಡಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಆಗಮಿಸುವಂತೆ ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here