ರೈತರ ದ್ರೋಹ ಬಗೆದಿರುವ ಕೇಂದ್ರ ಸರ್ಕಾರ : ಪ್ರತಿಭಟನೆ

0
40

ಶಹಾಬಾದ: ಕೇಂದ್ರ ಸರ್ಕಾರ ರೈತರ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಸೋಮವಾರ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ವಿಶ್ವಾಸ ದ್ರೋಹ ದಿನಾಚರಣೆ ಮೂಲಕ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮನ್ವಯ ಸಮಿತಿ ಮುಖಂಡರು, ಡಿಸೆಂಬರ್ ೯ ರಂದು ಕೇಂದ್ರ ಸರ್ಕಾರದಿಂದ ಬಂದ ಪತ್ರದ ಆಧಾರದ ಮೇಲೆ ಸಂಯುಕ್ತ ಕಿಸಾನ್ ಮೋರ್ಚಾವನ್ನು ಅಮಾನತುಗೊಳಿಸಲು ನಿರ್ಧರಿಸಿದ್ದು, ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಮತ್ತೊಮ್ಮೆ ದೇಶದ ರೈತರಿಗೆ ವಂಚನೆಯಾಗಿದ್ದು, ದೇಶಾದ್ಯಂತ ರೈತರಿಂದ ಇಂದು ವಿಶ್ವಾಸದ್ರೋಹದ ದಿನವನ್ನು ಆಚರಿಸಲಾಗುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಡಿಯಲ್ಲಿ ದೇಶದ ರೈತರು ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನನ್ನು ರದ್ದುಗೊಳಿಸಲು, ಕನಿ? ಬೆಂಬಲ ಬೆಲೆಗೆ ಕಾನೂನು ಖಾತರಿ ಪಡೆಯಲು ಮತ್ತು ಇತರ ಬೇಡಿಕೆಗಳಿಗಾಗಿ ಅಭೂತಪೂರ್ವ ಚಳುವಳಿಯನ್ನು ಪ್ರಾರಂಭಿಸಿದರು.

Contact Your\'s Advertisement; 9902492681

ಮೂರು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲಾಯಿತು. ನಂತರ ೨೧ ನವೆಂಬರ್ ೨೦೨೧ ರಂದು ಸಂಯುಕ್ತ ಕಿಸಾನ್ ಮೋರ್ಚಾವು ಪ್ರಧಾನ ಮಂತ್ರಿಗಳಿಗೆ ಪತ್ರವೊಂದನ್ನು ಬರೆದು ಆರು ಬಾಕಿ ಉಳಿದಿರುವ ವಿ?ಯಗಳತ್ತ ಗಮನ ಸೆಳೆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಡಿಸೆಂಬರ್ ೯, ೨೦೨೧ ರಂದು ಸಂಯುಕ್ತ ಕಿಸಾನ್ ಮೋರ್ಚಾಗೆ ಪತ್ರ ಬರೆದು, ಚಳುವಳಿಯನ್ನು ಹಿಂಪಡೆಯಲು ಮನವಿ ಮಾಡಿದರು.

ಈ ಪತ್ರವನ್ನು ಆಧರಿಸಿ ಸಂಯುಕ್ತ ಕಿಸಾನ್ ಮೋರ್ಚಾವು ಡಿಸೆಂಬರ್ ೧೧ ದೆಹಲಿ ಗಡಿಯಲ್ಲಿ ಮೋರ್ಚಾ ಮತ್ತು ಎಲ್ಲಾ ಪ್ರದರ್ಶನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತು. ಪತ್ರದಲ್ಲಿ ರೈತರ ಚಳುವಳಿಯ ಸಂದರ್ಭದಲ್ಲಿ ರೈತರ ಮೇಲೆ ದಾಖಲಿಸಲಾದ ಪ್ರಕರಣಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗುವುದು. ಪ್ರಕರಣವನ್ನು ಹಿಂಪಡೆಯಲು ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಒಪ್ಪಿಗೆ ನೀಡಿವೆ. ದೆಹಲಿ ಸೇರಿದಂತೆ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಮತ್ತು ಬೆಂಬಲಿಗರ ವಿರುದ್ಧ ದಾಖಲಾದ ಎಲ್ಲಾ ಆಂದೋಲನಾ ಸಂಬಂಧಿತ ಪ್ರಕರಣಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆಯಲು ಭಾರತ ಸರ್ಕಾರದ ಸಂಬಂಧಿತ ಇಲಾಖೆಗಳು ಮತ್ತು ಏಜನ್ಸಿಗಳು ಒಪ್ಪಿಕೊಂಡಿವೆ ಎಂದು ತಿಳಿಸಲಾಗಿತ್ತು.

ಆದರೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಭರವಸೆಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣಗಳಲ್ಲಿ ರೈತರು ನಿರಂತರವಾಗಿ ಸಮನ್ಸ್ ಪಡೆಯುತ್ತಿದ್ದಾರೆ. ಮೋರ್ಚಾವನ್ನು ಅಮಾನತುಗೊಳಿಸಿದ ನಂತರ, ಕೇಂದ್ರ ಸರ್ಕಾರವು ತನ್ನ ರೈತ ವಿರೋಧಿ ಕಾರ್ಯಸೂಚಿಯೊಂದಿಗೆ ಮುಂದುವರೆಯುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಗ್ರೇಡ್ -೨ ತಹಸೀಲ್ದಾರ ಗುರುರಾಜ ಸಂಗಾವಿ ಮೂಲಕ ರಾ?ಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ತಾಲೂಕ ಕಾರ್ಯದರ್ಶಿ ರಾಜೇಂದ್ರ ಅತನೂರು, ಬಸವರಾಜ ಕೋರಿ, ಜಗನ್ನಾಥ ಎಸ.ಹೆಚ್, ರಮೇಶ ದೇವಕರ್, ಸದಸ್ಯರಾದ ನೀಲಕಂಠ ಎಮ್ ಹುಲಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here