ಕಲಬುರಗಿ: ನಗರದ ಬ್ರಹ್ಮಪೂರ ಬಡಾವಣೆಯಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದಲ್ಲಿ ಪರಮಪೂಜ್ಯರಾದ ಶ್ರೀ ಸುರೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶಾಸಕರ ಅನುದಾನದಡಿಯಲ್ಲಿ ೫೦ ಲಕ್ಷ ರೂ. ವೆಚ್ಚದ ಶ್ರೀಮಠದ ಜೀರ್ಣೋದ್ಧಾರ ಕಾಮಗಾರಿಗೆ ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ ಪಾಟೀಲ್ ರೇವೂರ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ದೇವೇಂದ್ರ ಮಹಾಸ್ವಾಮಿಜಿ ,ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಾಮು ರೆಡ್ಡಿ, ಬಿಜೆಪಿ ಓಬಿಸಿ ಮೋರ್ಚಾ ಮಹಾನಗರ ಜಿಲ್ಲೆ ಅಧ್ಯಕ್ಷ ಅರವಿಂದ ಪೋದ್ದಾರ ಬೆಣ್ಣೆಶಿರೂರ, ಮಹಾನಗರ ಪಾಲಿಕೆ ಸದಸ್ಯ ಗುರುರಾಜ ಪಟ್ಟಣ, ಬಿಜೆಪಿ ಮುಖಂಡರಾದ ಬಸವರಾಜ ಪಂಚಾಳ ವಾಡಿ, ಸುಭಾಶ ಪಂಚಾಳ ಶಾಹಾಬಾದ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಇಂದಿರಾ ಬನಶೇಟ್ಟಿ, ಕೇಶವ ಸೀತನೂರ, ಚಂದ್ರಶೇಖರ ಪತ್ತಾರ, ಗಂಗಾಧರ ಪೋದ್ದಾರ, ಲಕ್ಷ್ಮೀಕಾಂತ ಸೀತನೂರ, ಅಭಿಲಾಷ ಹೇಮನೂರ, ಮಾರುತಿ ಕಮ್ಮಾರ,ಮಂಜು ಹಿರೋಳಿ, ಮೌನೇಶ ಬಡಿಗೇರ, ವಿಶ್ವನಾಥ ಪೋದ್ದಾರ, ಪ್ರಾಣೇಶ ಬಡಿಗೇರ,ರವೀಂದ್ರ ಪಂಚಾಳ, ಗಂಗಾಧರ ಮಹಾಗಾಂವ, ಹಿರಿಯರು,ಯುವಕರು,ಶ್ರೀ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.