ಜಾತಿನಿಂದನೆ ಪ್ರಕರಣ: ತಪ್ಪಿತಸ್ಥರ ವಜಾಕ್ಕೆ ದಲಿತ ಸಂಘಟನೆಗಳ ಆಗ್ರಹ

0
19

ಹುಮನಾಬಾದ: ರಾಯಚೂರು ನ್ಯಾಯಾಧೀಶರನ್ನು ಹಾಗೂ ಹುಮನಾಬಾದ ತಹಶೀಲ್ದಾರ ಅವರನ್ನು ಸರ್ಕಾರ ಕೂಡಲೇ ಸೇವೆಯಿಂದ ವಜಾಮಾಡಿ ಬಂಧಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.

ಸೋಮವಾರ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ವಿವಿದ ದಲಿತ ಮುಖಂಡರು, ರಾಯಚೂರು ಘಟನೆ ಕುರಿತು ಖಂಡಿಸುವ ನಿಟ್ಟಿನಲ್ಲಿ ಅಂಕುಶ ಗೋಖಲೆ ತಹಶೀಲ್ದಾರ ಅವರಿಗೆ ಮನವಿ ಪತ್ರ ನೀಡಲು ತೆರಳಿದ ಸಂದರ್ಭದಲ್ಲಿ ಮನವಿ ಪತ್ರ ತೆಗೆದುಕೊಳ್ಳಲು ತಹಶೀಲ್ದಾರ ಬಂದಿಲ್ಲ.

Contact Your\'s Advertisement; 9902492681

ಮನವಿ ಕೊಡಲು ಬಂದ ಮುಖಂಡರನ್ನು ಎರಡು ತಾಸು ಕಾಯಿಸಿದ್ದಾರೆ. ನಂತರ ಪಕ್ಷದ ಮುಖಂಡರು ಗುಪ್ತಾಂಗಕ್ಕೆ ಒದ್ದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋ‍ಪಿಸಿದರು.

ಗುಪ್ತಾಂಗಕ್ಕೆ ಒದ್ದಿದ್ದರೆ ಅವರು ಬದುಕಿ ಉಳಿಯುತ್ತಿರಲಿಲ್ಲ. ಸುಳ್ಳು ದೂರು ನೀಡಿ ಬಿಎಸ್‌ಪಿ ಮುಖಂಡರನ್ನು ಜೈಲಿಗೆ ಕಳಿಸುವ ಮಾಡಿದ್ದಾರೆ. ತಹಶೀಲ್ದಾರ್‌ ವಿರುದ್ಧವೂ ಎಸ್‌ಸಿ,ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಅವರನ್ನೂ ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಒತ್ತಾಯಿಸಿದರು.

ಪ್ರದೀಪಕುಮಾರ 2019ರಲ್ಲಿ ಪುತ್ತೂರಿನಲ್ಲಿ ಗ್ರೇಡ್‌ 2 ತಹಶೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ವ್ಯಕ್ತಿಯೊಬ್ಬರಿಂದ ₹ 2.40 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು. ಒಂದು ತಿಂಗಳು ಜೈಲಿನಲ್ಲಿ ಇದ್ದರು. ಗುಬ್ಬಿ ತಹಶೀಲ್ದಾರ್‌ ಆಗಿದ್ದಾಗ ಅವರ ವಿರುದ್ಧ ಅರ್ಚಕರು ಪ್ರತಿಭಟನೆ ನಡೆಸಿದ್ದರು. ಎರಡೂ ತಾಲ್ಲೂಕುಗಳ ಜನತೆ ನೀಡಿದ ದೂರುಗಳು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಭ್ರಷ್ಟ ಅಧಿಕಾರಿಯಿಂದ ನ್ಯಾಯ ನಿರೀಕ್ಷೆ ಸಾಧ್ಯವಿಲ್ಲ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು, ಬೀದರ್ ವಿಧಾನಸಭಾ ಕ್ಷೇತ್ರದ ಜಿಲ್ಲಾ ಸಂಯೋಜಕ ಉಸ್ತುವಾರಿ ಸ್ವಾಮಿದಾಸ ಕೆಂಪೇನೋರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here