ನ್ಯಾಯದೀಶ, ಕಲಬುರ್ಗಿ ಜಿಲ್ಲಾಡಳಿತ ವಿರುದ್ದ ಕ್ರಮಕ್ಕೆ ಆಗ್ರಹ

0
50

ಕಲಬುರಗಿ: 73 ನೇ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ರಾಯಚೂರ ಜಿಲ್ಲಾ ನ್ಯಾಯಾಲಯದಲ್ಲಿ ಡಾ:ಬಿ ಆರ್ ಅಂಬೇಡ್ಕರ್ ಭಾವಚಿತ್ರ ತೆಗೆಸಿ ವಿಕೃತಿ ಮೆರೆದ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ನನ್ನು ಸೇವೆಯಿಂದ ವಜಾಗೊಳಿಸಿ ಶಿಕ್ಷಿಸುವಂತೆ ಮತ್ತು ಕಲಬುರಗಿ ಜಿಲ್ಲಾಡಳಿತದಿಂದ ಪೋಲಿಸ ಪರೇಡ ಮೈದಾನದಲ್ಲಿ ಗಾಂಧೀಜಿ ಹಾಗೂ ಅಂಬೇಡ್ಕರ್ ರವರ ಭಾವಚಿತ್ರಗಳನ್ನು ಇಡದೆ ಅಕ್ಷಮ್ಯ ಅಪರಾಧ ಎಸಗಿದ ಜಿಲ್ಲಾ ಉಸ್ತುವಾರಿ ಮಂತ್ರಿ ಮುರುಗೇಶ ನಿರಾಣಿ/ಜಿಲ್ಲಾಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ಗ್ರಾಮೀಣ ಯುವ ಕಾಂಗ್ರೆಸ್ ಸಂಯೋಜಕರು ಹಾಗೂ ಭಾರತೀಯ ದಲಿತ ಪ್ಯಾಂಥರ್ ವಿ ಒಕ್ಕೂಟ ಉಪಾಧ್ಯಕ್ಷರಾದ ಶಿವಾನಂದ ಆರ್ ಕಿಳ್ಳಿ ಸರಡಗಿ ಆಗ್ರಹಿಸಿದರು.

ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ/ನ್ಯಾಯಾಲಯ ಕಛೇರಿಗಳಲ್ಲಿ  ಕಡ್ಡಾಯವಾಗಿ ಡಾ:ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರ ಹಾಕುವಂತೆ ಈ ಸಂದರ್ಭದಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ಕುರುಬ ಸಮಾಜದ ಅಧ್ಯಕ್ಷ ಸಿದ್ದಪ್ಪ ಪೂಜಾರಿ, ರಾಜು ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರಾದ  ರಾಜು ಶ್ರೀಗನ್, ರುಕ್ಕಪ್ಪಾ ಮೀಸಿ, ನಾಗೂ ಫೈಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here