ಕಲಬುರಗಿ : ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ದೇಶದ ಆರ್ಥಿಕ ವ್ಯೆವಸ್ಥೆ ಗಟ್ಟಿಗೊಳಿಸುಲು ಸಹಕಾರಿಯಾಗಿದೆ. ಇದರಿಂದ ಸದೃಢ ರಾಷ್ಟ್ರ ನಿರ್ಮಾಣವಾಗಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ವರ್ಷದ ಕೇಂದ್ರ 39.45 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಘೋಷಣೆ ಮಾಡಿದೆ. ಪ್ರಮುಖ ಅಂಶಗಳಾದ ಪಿ.ಎಂ. ಗತಿಶಕ್ತಿ ಯೋಜನೆ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಭಾರತದ ಆರ್ಥಿಕತೆಯನ್ನು ಎಳೆಯಲು 7ಇಂಜಿನ್‌ಗಳ ಶಕ್ತಿಯ ಯೋಜನೆ. ಭಾರತದ ಆರ್ಥಿಕ ನೀತಿ ಆತ್ಮನಿರ್ಭರ ಆರ್ಥಿಕ ನೀತಿ ಎಂದು ಘೋಷಣೆ. ಮುಂದಿನ 25 ವರ್ಷಗಳ ಆರ್ಥಿಕ ನೀತಿಯ ನೀಲಿ ನಕ್ಷೆ. (ಬ್ಲ್ಯೂ ಪ್ರಿಂಟ್) ಸಿದ್ಧ ಪಡಿಸಲಾಗಿದೆ.
ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. 25ಸಾವಿರ ಕೋಟಿ ರೂ. ಹೆಚ್ಚುವರಿ ಹೂಡಿಕೆ. ಕವಚ್ ಕಾರ್ಯಕ್ರಮದ ಅಡಿಯಲ್ಲಿ 2000 ಸಾವಿರ ಕಿ.ಮೀ.ಗಳ ರೈಲು ಮಾರ್ಗಗಳ ನಿರ್ಮಾಣ. ವಂದೇ ಭಾರತ 400 ಹೊಸ ವಂದೇ ಭಾರತ್ ರೈಲುಗಳನ್ನಾಗಿ ಮಾಡಲಾಗಿದೆ. ಸಧ್ಯದಲ್ಲೇ ಎಲ್‌ಐಸಿ, ಐಪಿಓ ಘೋಷಣೆ ಮಾಡಲಾಗುತ್ತದೆ. ಪರ್ವತ ಶ್ರೇಣಿಗಳಲ್ಲಿ ರಸ್ತೆ ಅಭಿವೃದ್ಧಿಗೆ ಪಿಪಿಪಿ ಮಾಡೆಲ್‌ನಲ್ಲಿ ರಸ್ತೆ ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ. ಗಂಗಾ ನದಿಯ 5ಕಿ.ಮೀ. ಅಕ್ಕಪಕ್ಕದಲ್ಲಿ ಸಾವಯವ ಕೃಷಿಗೆ ಆದ್ಯತೆ. ಸಿರಿ ಧಾನ್ಯ ಬೆಳೆಗೆ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಾರುಕಟ್ಟೆ ಒದಗಿಸುವಿಕೆ.
ಭೂ ದಾಖಲೆಗಳಿಗೆ ಕಿಸಾನ್ ಡ್ರೋನ್‌ಗಳ ಬಳಕೆ. 2023 ಅಂತರ್ರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ. ಮೂಲ ಸೌಕರ್ಯಕ್ಕೆ 20 ಸಾವಿರ ಕೋಟಿ. ಹೈಡ್ರೋ ಸೋಲಾರ್ ಪವರ್‌ಗೆ 4300 ಕೋಟಿ ರೂ ನೀಡಲಾಗಿದೆ. ದೇಶದ 5 ನದಿಗಳ ಜೋಡಣೆಗೆ 44,605 ಕೋಟಿ ರೂ. ಕಾವೇರಿ ನದಿ ಸೇರಿದಂತೆ 5 ನದಿ ಜೋಡಣೆಗೆ ನಿರ್ಧಾರ ಕಯಗೊಳ್ಳಲಾಗಿದೆ.
(ಗೋದಾವರಿ-ಕೃಷ್ಣ, ಪೆನ್ನಾರ್-ಕಾವೇರಿ, ದಮನ್‌ಗಂಗಾ-ಪಿನ್‌ಜಾಲ್,ಪಾರ್‌ತಾಪಿ-ನರ್ಮದಾ) 5 ನದಿ ಜೋಡಣೆಗೆ ಡಿಪಿಆರ್ ಈಗಾಗಲೇ ಸಿದ್ದವಾಗಿದೆ. ಸಣ್ಣ ಉದ್ದಿಮೆಗಳಿಗೆ ಕ್ರೆಡಿಟ್ ಗ್ಯಾರಂಟಿ ಸ್ಕೀಂ ವಿಸ್ತರಣೆ. 50 ಸಾವಿರ ನಿಧಿಯ ಮೊತ್ತ 5 ಲಕ್ಷ ಕೋಟಿ ಹೆಚ್ಚಳ ಮಾಡಲಾಗಿದೆ.
2023 ಮಾರ್ಚ್ ವರೆಗೂ ಕ್ರೆಡಿಟ್ ಗ್ಯಾರಂಟಿ ಸ್ಕೀಂ ವಿಸ್ತರಣೆ. 5 ಲಕ್ಷ ಕೋಟಿ ರೂ. ಸಾಲ ಗ್ಯಾರಂಟಿಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದ್ದು 25 ಸ್ಕಿಲ್ಲಿಂಗ್ ಇ-ಲ್ಯಾಬ್‌ಗಳಿಗೆ ಡಿಜಿಟಲ್ ಕ್ರಾಂತಿ ಮೂಲಕ ಆರೋಗ್ಯ ಸೇವೆಗಳ ಅಭಿವೃದ್ಧಿ ಪಡಿಸಳಾಗುತ್ತಿದೆ. ಒಟ್ಟಾರೆ ಹೀಗೆ ಹತ್ತು ಹಲವು ಯೋಜನೆಗಳನ್ನು ನೀಡಿರುವ ಕೇಂದ್ರ ಸರ್ಕಾರ ಜನ ಮಾನಸಕ್ಕೆ ಈ ಬಜೆಟ್ ಹತ್ತಿರವಾಗಿದೆ.
ಇಂತಹ ಐತಿಹಾಸಿಕ ಬಜೆಟ್ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನಗೂ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಎಲ್ಲ ಸಚಿವರಿಗೂ, ಸದಸ್ಯರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.