ಕಲಬುರಗಿ; ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಕಲಬುರಗಿ ನಗರದ ಅತ್ಯಂತ ಹಳೆಯ ಪದವಿ ಕಾಲೇಜುಗಳಲ್ಲಿ ಒಂದಾದ ಶರಣಬಸವೇಶ್ವರ ವಾಣಿಜ್ಯ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನಿಗದಿಪಡಿಸಿದ ೭ ಮಾನದಂಡಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ನೀಡುವ ಗ್ರೇಡಿಂಗ್ ಪ್ರಕಾರ ಉನ್ನತ ಎ ಶ್ರೇಣಿಯನ್ನು ನೀಡಿದೆ.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ಇಂದಿರಾ ಶೆಟಕಾರ ಮಂಗಳವಾರ ಕಲಬುರಗಿ ನಗರದಲ್ಲಿ ಮಾತನಾಡಿ, ನ್ಯಾಕ್ ಹೊರಡಿಸಿದ ಪ್ರಕಟಣೆಯ ಪ್ರಕಾರ ೧೯೬೧ರಲ್ಲಿ ಸ್ಥಾಪನೆಯಾದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯವು ನ್ಯಾಕ್ ೨೦೧೫ ರಲ್ಲಿ ಈ ಹಿಂದೆ ನೀಡಿದ ಬಿ ಗ್ರೇಡ್‌ನಿಂದ ಉತ್ತಮ ಸಾಧನೆ ಮಾಡಿದೆ. ಹಾಗೂ ಈಗ ಎ ದರ್ಜೆಗೇರಿದೆ. ೨೦೧೫ ರ ನ್ಯಾಕ್ ಮೌಲ್ಯಮಾಪನದಲ್ಲಿ, ಕಾಲೇಜು ೨.೫೪ ಸಿಜಿಪಿಎ ಅಂಕಗಳನ್ನು ಗಳಿಸಿತ್ತು ಮತ್ತು ಪ್ರಸಕ್ತ ವ?ದಲ್ಲಿ ನ್ಯಾಕ್ ಮಾಡಿದ ಮೌಲ್ಯಮಾಪನದಲ್ಲಿ, ಕಾಲೇಜು ಹೆಚ್ಚಿನ ೩.೧೫ ಸಿಜಿಪಿಎ ಅಂಕ ಗಳಿಸಿದೆ. ನ್ಯಾಕ್ ಪ್ರಕಾರ ಎ ಗ್ರೇಡ್ ಪಡೆಯಲು ೩.೧ ಸಿಜಿಪಿಎ ಅಂಕ ಗಳಿಸಿದರೆ ಸಾಕು ಎಂದು ವಿವರಿಸಿದರು.
ಇತ್ತೀಚೆಗ? ನಿವೃತ್ತರಾದ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ.ಎಸ್.ಜಿ.ಡೊಳ್ಳೇಗೌಡರ್ ಮತ್ತು ಪ್ರೊ.ಎನ್.ಎಸ್.ಪಾಟೀಲ್ ಅವರು ನ್ಯಾಕ್ ಮಾನ್ಯತೆಗಾಗಿ ತುಂಬಾ ಶ್ರಮಪಟ್ಟಿದ್ದಾರೆ.
ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯವು ನ್ಯಾಕ್ ಹೊರಡಿಸಿದ ಪ್ರಕಟಣೆಯ ಪ್ರಕಾರ ಎಲ್ಲಾ ಏಳು ಮಾನದಂಡಗಳಲ್ಲಿ ಹೆಚ್ಚಿನ ಶ್ರೇಣಿಯನ್ನು ಗಳಿಸಿದ್ದು, ನ್ಯಾಕ್ ನಡೆಸಿದ ಕಠಿಣ ಆನ್‌ಲೈನ್ ಮತ್ತು ಆಫ್‌ಲೈನ್ ಮೌಲ್ಯಮಾಪನದ ಪ್ರಕಾರ ಶೇಕಡಾ ೭೦ ರ? ಮೌಲ್ಯಮಾಪನ ಅಂಕಗಳನ್ನು ಆನ್‌ಲೈನ್‌ನಲ್ಲಿ ನಿರ್ಧರಿಸಲಾಗುತ್ತದೆ ಮತ್ತು ಉಳಿದ ಶೇಕಡಾ ೩೦ ರಷ್ಟು ಮೌಲ್ಯಮಾಪನ ಅಂಕಗಳನ್ನು ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಉನ್ನತ ವಿದ್ಯಾರ್ಹತೆಯ ಶಿಕ್ಷಣತಜ್ಞರನ್ನು ಒಳಗೊಂಡಿರುವ ತಂಡವು ಆಫ್‌ಲೈನ್‌ನಲ್ಲಿ ನಿರ್ಧರಿಸುತ್ತದೆ.
ಮಾನ್ಯತೆ ಪ್ರಕ್ರಿಯೆಗಾಗಿ ನ್ಯಾಕ್ ನಿಗದಿಪಡಿಸಿದ ೭ ಮಾನದಂಡಗಳಲ್ಲಿ, ಕಾಲೇಜು ಪಠ್ಯಕ್ರಮದ ಅಂಶಗಳಲ್ಲಿ ೩.೪ ಸಿಜಿಪಿಎ ಅಂಕ, ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನದಲ್ಲಿ ೩.೨ ಸಿಜಿಪಿಎ ಅಂಕ, ಸಂಶೋಧನೆ, ಆವಿ?ರಗಳು ಮತ್ತು ವಿಸ್ತರಣೆಯಲ್ಲಿ ೨.೮೫ ಸಿಜಿಪಿಎ ಅಂಕ, ಇನ್ಫ್ರಾಸ್ಟ್ರಕ್ಚರ್ಸ್ ಮತ್ತು ಮೂಲಸೌಕರ್ಯಗಳಲ್ಲಿ ೨.೮೬ ಸಿಜಿಪಿಎ ಅಂಕ ಗಳಿಸಿದ್ದು, ವಿದ್ಯಾರ್ಥಿ ಬೆಂಬಲ ಮತ್ತು ಪ್ರಗತಿಯಲ್ಲಿ ೩.೩೮ ಸಿಜಿಪಿಎ ಅಂಕ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆಯಲ್ಲಿ ೩ ಸಿಜಿಪಿಎ ಅಂಕ, ಮತ್ತು ಸಾಂಸ್ಥಿಕ ಮೌಲ್ಯಗಳು ಮತ್ತು ಅತ್ಯುತ್ತಮ ಅಭ್ಯಾಸಗಳಲ್ಲಿ ೩.೧೪ ಸಿಜಿಪಿಎ ಅಂಕ ಗಳಿಸಿದೆ. ನ್ಯಾಕ್ ನಿಂದ ಎ ಗ್ರೇಡ್ ಪಡೆಯಲು ಒಟ್ಟಾರೆ ೩.೧೫ ಸಿಜಿಪಿಎ ಅಂಕ ಗಳಿಸಿದೆ.
ಮಹಾರಾಷ್ಟ್ರದ ಹೆಸರಾಂತ ಶಿಕ್ಷಣ ತಜ್ಞ ಡಾ.ಮುಳಿಧರ್ ಚಂಡೇಡೆಕರ್ ನೇತೃತ್ವದ ನ್ಯಾಕ್‌ನ ಮೂವರು ಸದಸ್ಯರ ತಂಡ, ಸದಸ್ಯ ಕೋ-ಆರ್ಡಿನೇಟರ್ ಆಗಿದ್ದ ತೆಲಂಗಾಣದ ಡಾ.ಮಾದರಪು ಯಾದಗಿರಿ ಮತ್ತು ತಂಡದ ಸದಸ್ಯರಾಗಿದ್ದ ಗುಜರಾತ್‌ನ ಡಾ.ಹೇತಲ್ ಮೆಹ್ತಾ ಅವರು ಜನವರಿಯಲ್ಲಿ ಕಾಲೇಜಿಗೆ ಭೇಟಿ ನೀಡಿದ್ದರು. ಇದೇ ವರ್ಷದ ಜನೆವರಿ ೨೮ ಮತ್ತು ೨೯ ರಂದು ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲಾಯಿತು ಮತ್ತು ಕಾಲೇಜಿಗೆ ಎ ಗ್ರೇಡ್ ನೀಡುವ ತೀರ್ಮಾನಕ್ಕೆ ಬರುವ ಮೊದಲು ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ನ್ಯಾಕ್ ನಿಂದ ಎ ಗ್ರೇಡ್ ಪಡೆಯುವ ಮೂಲಕ ಸಂಘದ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಲು ಯಶಸ್ವಿಯಾದ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ್ದಾರೆ.
ನ್ಯಾಕ್ ಮಾನ್ಯತೆ ಪ್ರಕ್ರಿಯೆಗೆ ತಳಹದಿಯನ್ನು ಸಿದ್ಧಪಡಿಸುವಲ್ಲಿ ಅವಿರತವಾಗಿ ಶ್ರಮಿಸಿದ ಪ್ರೊ.ಎಸ್.ಜಿ.ಡೊಳ್ಳೇಗೌಡರ್ ಮತ್ತು ಪ್ರೊ.ಎನ್.ಎಸ್.ಪಾಟೀಲ್ ಅವರನ್ನು ಶ್ಲಾಘಿಸಿದ್ದಾರೆ. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ, ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಮತ್ತು ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಅವರು ಅಪೇಕ್ಷಣೀಯ ಸಾಧನೆಗೈದ ವಾಣಿಜ್ಯ ಮಹಾವಿದ್ಯಾಲಯದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.