ನ್ಯಾಯಾಧೀಶರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ

0
85

ಶಹಾಬಾದ: ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿದ ರಾಯಚೂರಿನ ನ್ಯಾಯಾಧೀಶರ ವಿರುದ್ಧ ಕ್ರಮಕೈಗೊಂಡು ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ರವಿವಾರ ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ವತಿಯಿಂದ ಭಂಕೂರ ಗ್ರಾಮದ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಸುರೇಶ ವರ್ಮಾ ಮೂಲಕ ಕರ್ನಾಟಕದ ಉಚ್ಛ ನ್ಯಾಯಾದೀಶರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ಜಿಲ್ಲಾ ಸಂಘಟನಾ ಸಂಚಾಲಕ ಭರತ್ ಧನ್ನಾ, ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ ಗಣರಾಜ್ಯೋತ್ಸವ ದಿನದಂದು ಡಾ || ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರ ಇವರ ವೃತ್ತಿಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು ಭಾರತರತ್ನ ಮಹಾನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ.

Contact Your\'s Advertisement; 9902492681

ಇವರು ನ್ಯಾಯಾಧೀಶ ಸ್ನಾನಕ್ಕೆ ಅರ್ಹತೆಯುಳ್ಳವರಲ್ಲ. ಅಂಬೇಡ್ಕರ್ ಬರೆದ ಸಂವಿಧಾನ ಆಧರಿಸಿಯೇ ನ್ಯಾಯಾಂಗ ವ್ಯವಸ್ಥೆ ನಡೆಯುತ್ತದೆ. ಆದರೆ ಅದನ್ನು ಗೌರವಿಸಬೇಕಾದ ನ್ಯಾಯಾಧೀಶರೇ ಅಪಮಾನ ಎಸಗಿರುವುದು ಅವರ ಮನೋಭಾವವನ್ನು ತೋರಿಸುತ್ತದೆ.ಅವರಿಗೆ ಪರಿಶಿ?ರ ಬಗೆಗಿರುವ ಮನಸ್ಥಿತಿಯೂ ವ್ಯಕ್ತವಾಗಿದೆ. ಇಂಥವರು ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗೂ ಪವಿತ್ರ ಸ್ಥಾನದಲ್ಲಿರಲು ಎ? ಯೋಗ್ಯ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆ ನ್ಯಾಯಾಧೀಶರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಅವರ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಬೇಕು. ಅಂಬೇಡ್ಕರ್ ಅವರನ್ನು ಅವಮಾನಿಸುವ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ತಕ್ಷಶೀಲ ಬುದ್ಧ ವಿಹಾರ ಟ್ರಸ್ಟ ಖಜಾಂಚಿ ನಾಗೇಂದ್ರ ಪಾಳಾ, ಈಡಿಗ ಸಮಾಜದ ಮುಖಂಡ ಭೀಮಯ್ಯ ಗುತ್ತೆದಾರ, ಅಂಬೇಡ್ಕರ ತರುಣ ಸಂಘದ ಅಧ್ಯಕ್ಷ ನಾಗರಾಜ ಧನ್ನಾ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಸುಗೂರ, ತಾಲೂಕಾ ಸಂಚಾಲಕ ಕಿರಣಕುಮಾರ ಜಡಗಿಕರ್, ಕೆ.ಎಸ್‌ಡಿಎಸ್‌ಎಸ್ ಸದಸ್ಯ ತೇಜಸ್ ಧನ್ನಾ, ಎಸ್‌ಡಿಪಿಐ ಅಧ್ಯಕ್ಷ ಶಬ್ಬೀರಪಾಷಾ ಮೌಲಾನಾ, ಕೋಲಿ ಸಮಾಜದ ಅಧ್ಯಕ್ಷ ಈರಣ್ಣ ಹುಡುರ್, ಕಾಳಿದಾಸ ತರುಣ ಸಂಘದ ಅಧ್ಯಕ್ಷ ಚಂದ್ರಕಾಂತ ಧರಿ,ಬಂಜಾರಾ ಸಮಾಜದ ಅಧ್ಯಕ್ಷ ನಾಮದೇವ ಚವ್ಹಾಣ, ಪ್ರಜ್ಞಾ ಮಹಿಳಾ ಸಂಘದ ಅಧ್ಯಕ್ಷೆ ಸಿದ್ದಮ್ಮ ದೇವನ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here