ಕ್ಷಯ ನಿವಾರಣೆಗೆ ಪೌಷ್ಟಿಕ ಆಹಾರ ಮುಖ್ಯ ಅಡೂರು ಶ್ರೀನಿವಾಸ

0
21

ಕಲಬುರಗಿ: ಕ್ಷಯರೋಗ ನಿವಾರಿಸಲು ರೋಗಿಗಳಲ್ಲಿ ಜಾಗೃತಿ ಜತೆಗೆ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ ಹಾಗೆ  ಕ್ಷಯರೋಗಿಗೆ ಪೌಷ್ಟಿಕ ಪೌಡರ್ ನೀಡುತ್ತಿರು ರೋಟರಿ ಕ್ಲಬ್ ನಂತ ಸೇವೆ  ಬಹಳ‌ ಶ್ಲಾಘನೀಯ ಎಂದು ಡಿಸಿಪಿ ಅಡೂರು ಶ್ರೀನಿವಾಸ  ಹೇಳಿದರು.

ಅವರು ನಗರದ ಪಾಲ್ ಹ್ಯಾರಿಸ್ ಸಭಾಂಗಣ ರೋಟರಿ ಕ್ಲಬ್ ಕಾರ್ಯಕ್ರಮ  ಹಮ್ಮಿಕೊಂಡಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ,  ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ, ಮತ್ತು ಸಾಕ್ಷಮ್ ಪರ್ವ ಟಾಟಾ ಇನ್ಸ್ಟೂಟ್ ಅಫ್ ಸೋಷಲ ಸೈನ್ಸ್ ಕಲಬುರಗಿ. ಹಾಗೂ ರೋಟರಿ ಕ್ಲಬ್ ಆಫ್ ಗುಲಬುರ್ಗಾ ನಾರ್ತ್. ಇವರ ಸಂಯುಕ್ತಾಶ್ರಯದಲ್ಲಿ. ಹಮ್ಮಿಕೊಂಡ ಕ್ಷಯರೋಗಿಗೆ ಪೌಷ್ಟಿಕ ಆಹಾರ ಪೌಡರ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮೊದಲಿಗೆ ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಕ್ಷಯರೋಗ ಬಗ್ಗೆ ಭಯ ಪಡುವ ಅಗತ್ಯವಿಲ್ಲ ನಿರಂತರ ಔಷಧಿ ಸೇವಿಸುವುದರಿಂದ ರೋಗ ಬೇಗ ಗುಣಮುಖವಾಗುತ್ತದೆ ಎಂದರು.

ನಂತರ ಹೆಚ್ ಕೆ ಸೊಸೈಟಿ ಸದಸ್ಯರಾದ ಶರಣು ಪಾಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಕ್ಷಯ ರೋಗದಿಂದ ಬಳಲುತ್ತಿರುವ ಬಡವರ ಮತ್ತು ನಿರ್ಗತಿಕವಾಗಿ ವಾಸಿಸುವಂತವರ ಸೇವೆಗೆ ನಮ್ಮ ಸಂಘ-ಸಂಸ್ಥೆಗಳು  ಸೇವೆಗೆ ಇನ್ನೂ ಮುಂದಾಗಬೇಕಾಗಿದೆ ಸರ್ಕಾರದ ಆರೋಗ್ಯ ಸೇವೆ ಅವರು ಮಾಡುತ್ತಿರು  ಕ್ಷಯರೋಗಿಗೆ ಸೇವೆಯ ಜೊತೆಗೆ ಉಚಿತವಾಗಿ ನಿರಂತರವಾಗಿ ಚಿಕಿತ್ಸೆ ನಿಡತ್ತಬಂದಿದರೆ. ನಮ್ಮ ರೋಟರಿ ಕ್ಲಬ್ ನವರು ಸೇವೆ ಗೆ ಕೈ ಜೋಡಿಸಿದ್ದರೆ ಈ ಹೊಸ ವರ್ಷದಲ್ಲಿ ಒಂದು ಹೊಸ ಕೆಲಸ ರೋಟರಿ ಕ್ಲಬ್  ಗುಲ್ಬರ್ಗಾ ನಾರ್ತ್ ನ ಅಧ್ಯಕ್ಷರ ನೇತ್ರತ್ವದಲ್ಲಿ  ಮಾಡುತ್ತಿರುವುದು   ಸಂತೋಷದ ವಿಷಯ ಎಂದು ಹೇಳಿದರು.

ಹಾಗೆ  ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.‌ವಿವೇಕನಂದ ರೆಡ್ಡಿ ಅವರು ಮಾತನಾಡುತ್ತ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅರಿವು ಕಾರ್ಯಕ್ರಮ ಅಭಿಯಾನ ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿ ಒಬ್ಬರು  ಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ  ಜೊತೆಗೆ  ಜನರಿಗೆ ಕ್ಷಯರೋಗ  ಲಕ್ಷಣಗಳ ಅರಿವು ಮಾಹಿತಿ ನೀಡಬೇಕು ಅಂದಾಗ ಮಾತ್ರ ರೋಗ ತಡೆಯಲು ಸಾಧ್ಯವೆಂದರು ಅವರು ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ  ಹೆಚ್ಚು ಟಿಬಿ ಲಕ್ಷಣ ಕಂಡುಬರುತ್ತಿದೆ ಇದರಿಂದ ಪ್ರತಿ ಕ್ಷಯರೋಗಿ ಅವರು ಔಷಧೀಯ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯವಾಗಿದೆ. ರೋಟರಿ ಕ್ಲಬ್ ನಂತ ಸಂಸ್ಥೆ ಕ್ಷಯರೋಗಿ ಸೇವೆಗೆ  ಮುಂದು ಬಂದಿರುವು ಸಂತೋಷದ ತಂದೆ, ಹಾಗೆ ಜನರಲ್ಲಿ ಅರಿವು ಮೂಡಿಸಲು  ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ 2025 ರ ಒಳಗೆ ಎಂಬ ಘೋಷವಾಕ್ಯದಂತೆ  ಕ್ಷಯರೋಗ ನಿರ್ಮೂಲನಗೆ ಮಾಡಲು ನಮ್ಮ ಘನ ಸರ್ಕಾರ ಪ್ರಧಾನ ಮಂತ್ರಿ ಅವರು ಟಿಬಿ ಯನ್ನು ಹೋಗಲಾಡಿಸಲು ನ್ಯಾಷನಲ್ ರೇಗುಲೇಷನ್ 100% ಕ್ಷಯ ಗುಣಮುಖವಾಗುವಂತದು ನಮ್ಮ ಸಮುದಾಯದ ಜನರು ಕೈ ಜೋಡಿಸಿದರೆ ಮಾತ್ರ ಕ್ಷಯ ಮುಕ್ತ ಮಾಡಬೇಕಾಗದೆ ಎಂದು ಹೇಳಿದರು.

ವೇದಿಕೆ ಮೇಲೆ   ರೋಟರಿ ಕ್ಲಬ್  ಗುಲ್ಬರ್ಗ ನಾರ್ತ್ ಅಧ್ಯಕ್ಷರಾದ ರೊ. ರಾಮಕೃಷ್ಣ ಬೋರಾಳ್ಕರ್. ಅಧ್ಯಕ್ಷತೆ ವಹಿಸಿದ್ದರು. ವಿಭಾಗಿಯ ಕಾರ್ಯಕ್ರಾಧಿಕಾರಿ ಅಬ್ದುಲ್ ಶಫಿ‌ ಅಹ್ಮದ್ . ಜಿಲ್ಲಾ ಕ್ಷಯರೋಗ ಮೇಲ್ವಿಚಾರಕ ಸುರೇಶ್ ದೊಡ್ಡಮನಿ. ಶರಣು ಪಾಪ್ಪ . ರೊ. ಬಾಬುರಾವ್ ಶೇರಿಕರ್ ವಹಿಸಿದ್ದರು. ವಿಶೇಷವಾಗಿ ರೋಟರಿ ಕ್ಲಬ್ ನ ಮಕ್ಕಳಿಗೆ ರೋಟರಿ ಅಂತರಾಷ್ಟ್ರೀಯ ಹಾಗೂ ವಿಜಯ ವಾಣಿ – ದಿಗ್ವಿಜಯ ವಿದ್ಯಾಭಿಯಾನದ ಅಂಗವಾಗಿ ವಿದ್ಯಾ ಸೇತು ಜ್ಞಾನಾಭಿವೃದ್ದಿಗೆ ಒಂದು ಕೈಪಿಡಿ  ಪುಸ್ತಕ ವಿತರಣೆ ಮಾಡಲಾಯಿತು.

ಪ್ರಮುಖರಾದ ಮಂಜುನಾಥ ಕಂಬಾಳಿಮಠ, ಶಶಿಧರ ಪಟ್ನಾಯಕ್, ಡಾ. ಶರಣಬಸಪ್ಪ ಸಜ್ಜನ್ , ಶರಣಪ್ಪ ಸಿಂಗೆ, ವಾರ್ಡ ನಂ ೬ ಸದಸ್ಯ ಚೆನ್ನವೀರ ಲಿಂಗನವಾಡಿ ರೊ. ಪ್ರಶಾಂತ್ ಮಾನಕರ್, ರೊ. ಚಿತ್ರಶೇಖರ ಕಂಠಿ, ರೊ. ದಿನೇಶ್ ಪಾಟೀಲ್ ಸುಹಾಸ ಬಣಗೆ, ಶಿವಾನಂದ್ ಬೇಲೂರ್ ಆನಂದ್ ದಂಡೋತಿ ಗೋಪಾಲ ಮಳಖೇಡಕರ್ , ಆರೋಗ್ಯ ಇಲಾಖೆ ಸಿಬ್ಬಂದಿಗಳಾದ , ಬಸವರಾಜ ಅವಂಟಿ, ಧರ್ಮರಕ್ಷಕ್ , ರಾಜಕುಮಾರ, ಇದ್ದರು. ರೊ.ಬಾಬುರಾವ ಶೇರಿಕರ್  ನಿರೂಪಿಸಿದರು , ರೊ.ನಾಗರಾಜ ಪಾಟೀಲ್ ವಂದಿಸಿದ್ದರು. ಈ ಕಾರ್ಯಕ್ರಮದಲ್ಲಿ  ಕ್ಷಯರೋಗಿಗಳು , ಆರೋಗ್ಯ ಕಾರ್ಯಕರ್ತರು ಇತರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here