ಹಲಕರ್ಟಿ ಗ್ರಾಮದಲ್ಲಿ ಆರ್.ಕೆ.ಎಸ್.‌ ಗ್ರಾಮ ಸಮಿತಿಯ ರಚನೆ

0
30

ಚಿತ್ತಾಪುರ: ಹಲಕರ್ಟಿ ಗ್ರಾಮದ ರೈತ ಕೃಷಿ ಕಾರ್ಮಿಕರ ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್)‌ SUCI (C) ಪಕ್ಷದ ವಾಡಿ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ಆರ್. ಕೆ. ವೀರಭದ್ರಪ್ಪ ರವರು ಸಮಿತಿಯನ್ನು ಉದ್ಘಾಟಿಸುತ್ತಾ ಮಾತನಾಡಿದರು.

Contact Your\'s Advertisement; 9902492681

ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ದೇಶದಲ್ಲಿ ರೈತರ ವಿರೋಧಿ ಹಾಗೂ ಜನವಿರೋಧಿ ಕಾಯ್ದೆಗಳಾದ ನೀರಿನ ಖಾಸಗೀಕರಣ, ವಿದ್ಯುತ್ ಖಾಸಗೀಕರಣ, ಎಪಿಎಂಸಿಗೆ ತಿದ್ದುಪಡಿ, ಅಗತ್ಯ ವಸ್ತುಗಳು ತಿದ್ದುಪಡಿ, ಎಲ್ಲಾ ವಸ್ತುಗಳ ಬೆಲೆ ಏರಿಕೆ ಹೀಗೆ ಒಂದರ ಮೇಲೊಂದು ಕಾಯ್ದೆಗಳನ್ನು ಆಳುವ ಎಲ್ಲಾ ಪಕ್ಷಗಳು ಜಾರಿ  ಮಾಡುತ್ತಲೇ ಬಂಡವಾಳಗಾರ ಸೇವೆ ಮಾಡುತ್ತಾ ಜನಸಾಮಾನ್ಯರ ಹಾಗೂ ರೈತರನ್ನು ಜೀವಂತ ಸಮಾಧಿ ಮಾಡಲು ಹೊರಟಿವೆ. ಹೀಗಾಗಿ ರೈತರ ಹಾಗೂ ಗ್ರಾಮೀಣ ಬಡವರ ಮೇಲೆ ಆಗುವ ಅನ್ಯಾಯವನ್ನು ಪ್ರತಿರೋಧಿಸಲು ರೈತಸಂಘ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಿ ಮುಂದಿನ ಹೋರಾಟಗಳನ್ನು ರೂಪಿಸೋಣ ಎಂದರು.

ನಂತರ, ಹಲಕರ್ಟಿ ಗ್ರಾಮದ ನೂತನ ರೈತರ ಗ್ರಾಮಸಮಿತಿಯನ್ನು ರಚಿಸಲಾಯಿತು. ಪದಾಧಿಕಾರಿಗಳನ್ನು ಆರ್ ಕೆ ಎಸ್ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಗುಂಡಣ್ಣ ಕುಂಬಾರ್ ಅವರು ಆಯ್ಕೆ ಮಾಡಿದರು.

ನೂತನ ಪದಾಧಿಕಾರಿ: ಅಧ್ಯಕ್ಷರು ಚೌಡಪ್ಪ ಗಂಜಿ, ಉಪಾಧ್ಯಕ್ಷರು ದೊಡ್ಡಪ್ಪ ಹೊಸೂರ, ಅಯ್ಯಪ್ಪ ಹುಳಗೋಳ, ಭೀಮಶಂಕರ್ ಇಸಬಾ, ಕಾರ್ಯದರ್ಶಿ : ಶಿವಕುಮಾರ ಆಂದೋಲ, ಸಹ ಕಾರ್ಯದರ್ಶಿ ಭೀಮಪ್ಪ ಮಾಟನಹಳ್ಳಿ, ಈರಪ್ಪ ಜೈನಾಪುರ, ವೀರೇಶ್ ನಾಲ್ವರ್, ಮಾಂತೇಶ್ ಹುಳಗೋಳ, ಮಂಜುನಾಥ್ ಹಿಟ್ಟಿನ, ನಾಗರಾಜ ಇಸಬಾ, ಮುನಿಂದ್ರ ಕೊಟ್ಟಿಗೆ, ಬಸಪ್ಪ ಇಸಬಾ, ವೀರಭದ್ರ ಹಿಟ್ಟಿನ, ವಿರುಪಾಕ್ಷಿ ಛತ್ರಿಕಿ, ಶಶಿಕುಮಾರ್ ಇಸಬಾ, ಮಹೆಬೂಬ್, ನಾಗರಾಜ ಇಸಬಾ,  ಲಕ್ಷ್ಮಣ್ ಇಸಬಾ, ಸಾಬಣ್ಣ ಹೊಸೂರ್, ಗಿರಿಯಪ, ಶಿವಯೋಗಿ ಬಳ್ಳ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here